ಕಾರವಾರ: ಸರ್ಕಾರಿ ಹಾಗೂ ಅನುದಾನಿತ ಪಾಲಿಟೆಕ್ನಿಕ್ಗಳಲ್ಲಿ 2017-18 ನೇ ಸಾಲಿಗೆ ಖಾಲಿ ಇರುವ ಉಳಿದಿರುವ ಸೀಟುಗಳಿಗಾಗಿ ಎಸ್.ಎಸ.ಎಲ್.ಸಿ ವಾರ್ಷಿಕ / ಪೂರಕ (ಸಪ್ಲಿಮೆಂಟರಿ) ಪರೀಕ್ಷೆಯಲ್ಲಿ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳಿಂದ “ಆನ್ಲೈನ್ ಇಂಟರ್ಯಾಕ್ಟಿವ ಕೌನ್ಸಿಲಿಂಗ” ಮೂಲಕ ಪ್ರಥಮ ಡಿಪ್ಲೋಮಾ ಪ್ರವೇಶಕ್ಕಾಗಿ ಅರ್ಜಿಗಳನ್ನು ಕರೆಯಲಾಗಿದೆ.
ಅರ್ಜಿ ಸಲ್ಲಿಸಲು ಜುಲೈ 22 ಕೊನೆಯ ದಿನವಾಗಿದ್ದು, ಅರ್ಜಿ ಶುಲ್ಕ ಸಾಮಾನ್ಯ ವರ್ಗ ಮತ್ತು ಹಿಂದುಳಿದ ವರ್ಗದವರಿಗೆ ರೂ. 100 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರ..ವರ್ಗ-1 ರೂ.50 ಆಗಿರುತ್ತದೆ.
ಪ್ರವೇಶಕ್ಕೆ ಸಂಬಂಧಿಸಿದಂತೆ ಇರಬೇಕಾದ ಅರ್ಹತೆ, ಪಾಲಿಟೆಕ್ನಿಕ್ಗಳು, ಕೋರ್ಸುಗಳು, ಮೀಸಲಾತಿ ವಿವರ ಮುಂತಾದ ಮಾಹಿತಿಯನ್ನು ತಾಂತ್ರಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ಗಳ ಮೂಲಕ www.dte.kar.nic.in & www.kea.kar.nic.in ನಿಂದ ಪಡೆಯಬಹುದು. ಹೆಚ್ನಿನ ವಿವರಗಳಿಗಾಗಿ ಪ್ರಿನ್ಸಿಪಾಲರು ಸರಕಾರಿ ಪಾಲಿಟೆಕ್ನಿಕ್, ಕಾರವಾರ ಅಥವಾ ಸಮೀಪದ ಸರಕಾರಿ / ಅನುದಾನಿತ ಪಾಲಿಟೆಕ್ನಿಕಗಳಿಗೆ ಸಂಪರ್ಕಿಸಬಹುದು
ಡಿಪ್ಲೋಮಾ ಪ್ರವೇಶಕ್ಕೆ ಅರ್ಹ ಆಭ್ಯರ್ಥಿಗಳ ಮೆರಿಟ್ ಲಿಸ್ಟ್ ಪಟ್ಟಿಯನ್ನು ಹಾಗೂ ಪ್ರವೇಶಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ತಾಂತ್ರಿಕ ಶಿಕ್ಷಣ ಇಲಾಖೆಯ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ www.kea.kar.nic.in & www.dte.kar.nic.in ವೆಬ್ಸೈಟ್ಗಳ ಮೂಲಕ ಪ್ರಕಟಿಸಲಾಗುವುದು ಎಂದು ಕಾರವಾರ ಸರ್ಕಾರಿ ಪಾಲಿಟೆಕ್ನೀಕ್ ಪ್ರಿನ್ಸಿಪಾಲರು ತಿಳಿಸಿದ್ದಾರೆ.
Leave a Comment