ಕಾರವಾರ:
ತಾಲೂಕಿನ ಸಿದ್ಧರದಲ್ಲಿ ಹಳ್ಳದಲ್ಲಿ ಕಾಲು ಜಾರಿ ಬಿದ್ದು ವ್ಯಕ್ತಿಯೋರ್ವ ಮೃತ ಪಟ್ಟ ಘಟನೆ ನಡೆದಿದೆ.
ಆನಂದು ವಿಷ್ಣು ನಾಯ್ಕ(54) ಮೃತರು. ಬುಧವಾರ ಇಲ್ಲಿನ ಅಜಗೇರಿ ಹಳ್ಳದಲ್ಲಿ ಕಾಲು ಜಾರಿ ಬಿದ್ದು ಈತ ಸಾವನಪ್ಪಿದ್ದಾನೆ. ಈತನ ಹುಡುಕಾಟಕ್ಕೆ ಸ್ಥಳೀಯರು ಪ್ರಯತ್ನಿಸಿದ್ದಾರೂ ಪತ್ತೆಯಾಗಿರಲಿಲ್ಲ. ಗುರುವಾರ ಬಿದ್ದ ಸ್ಥಳದಲ್ಲಿಯೇ ಮೃತದೇಹ ಪತ್ತೆಯಾಗಿದ್ದು ಸ್ಥಳಕ್ಕೆ ಕಾರವಾರ ತಹಶೀಲ್ದಾರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment