ಕಳೆದ ಮೂರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಶುಕ್ರವಾರ ಕೊಂಚ ಬಿಡುವು ನೀಡಿದೆ.
ಕರಾವಳಿ ಭಾಗದಲ್ಲಿ ಮೋಡ ಮುಸುಕಿದ ವಾತಾವರಣ ಕಂಡು ಬಂದಿದ್ದು, ಮೊದಲಿನಂತೆ ಮಳೆ ಸುರಿದಿಲ್ಲ. ಕುಮಟಾ ಹೊನ್ನಾವರ ಹಾಗೂ ಭಟ್ಕಳದ ಕೆಲ ಭಾಗದಲ್ಲಿ ಕೊಂಚ ಮಳೆಯಾಗಿದೆ. ಕಳೆದ ಎರಡು ದಿನಗಳಿಂದ ರಭಸ ಮಳೆ ಸುರಿದಿದ್ದ ಕಾರಣ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖಗೊಂಡಿದ್ದು, ಶುಕ್ರವಾರ ಅಲ್ಲಲ್ಲಿ ಬಿಸಿಲು ಕಾಣಿಸಿದ್ದರಿಂದ ಗೋಕರ್ಣ ಹಾಗೂ ಮುರ್ಡೇಶ್ವರ ಕಡಲ ತೀರಗಳಲ್ಲಿ ಜನಸಂಖ್ಯೆ ಕಂಡು ಬಂದಿತು. ಇನ್ನು ಮಲೆನಾಡು ಪ್ರದೇಶಗಳಾದ ಶಿರಸಿ, ಯಲ್ಲಾಪುರ, ಸಿದ್ದಾಪುರ ಭಾಗದಲ್ಲಿ ಕೂಡ ಶುಕ್ರವಾರ ಮಳೆ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 456.6 ಮಿ.ಮೀ ಮಳೆಯಾಗಿದ್ದು ಸರಾಸರಿ 41.5ಮಿ.ಮೀ ಮಳೆ ದಾಖಲಾಗಿದೆ.
Leave a Comment