• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕಟ್ಟಡ ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ

July 27, 2017 by Sachin Hegde Leave a Comment

ಹಳಿಯಾಳ:

ಕಟ್ಟಡ ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬುಧವಾರ ರಾಜ್ಯಾದ್ಯಂತ ಸಚಿವ, ಶಾಸಕರ, ಜಿಲ್ಲಾಧಿಕಾರಿ, ಕಾರ್ಮಿಕ ಅಧಿಕಾರಿಗಳ ಮನೆಯ ಮುಂದೆ ಪ್ರತಿಭಟನೆ ನಡೆಸುವ ರಾಜ್ಯ ಸಂಘಟನೆಯ ಕರೆಯ ಮೇರೆಗೆ ಹಳಿಯಾಳದ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಮನೆ ಎದುರು ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೆಷನ್ ಸಂಘಟನೆಯವರು ಪ್ರತಿಭಟನೆ ನಡೆಸಿದರು.
ಬುಧವಾರ ಇಲ್ಲಿಯ ಅರ್ಬನ್ ಬ್ಯಾಂಕ್ ವೃತ್ತದಿಂದ ಪ್ರತಿಭಟನಾ ಮೇರವಣಿಗೆಯಲ್ಲಿ ಸಾಗಿ ಸಚಿವ ದೇಶಪಾಂಡೆ ಮನೆ ಎದುರು 1 ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆಸಿದರು. ಬಳಿಕ ಸಚಿವರ ಆಪ್ತ ಸಹಾಯಕ ಅಣ್ಣಪ್ಪಾ ಮಡಿವಾಳ ಅವರಿಗೆ ಸಚಿವರಿಗೆ ಬರೆದ ಮನವಿಯನ್ನು ಸಲ್ಲಿಸಿದರು.
ಮನವಿಯಲ್ಲಿ ಸುಮಾರು 42 ಸಾವಿರಕಟ್ಟಡ ಕಾರ್ಮಿಕರು ಕರ್ನಾಟಕ ಸರಕಾರ ರಚಿಸಿದ ಕಟ್ಟಡ ಮತ್ತು ಇತರೆ ನಿರ್ಮಾಣ ಮಂಡಳಿಯಲ್ಲಿ ಕಾರ್ಮಿಕರು ಸದಸ್ಯರಾಗಿದ್ದು ಹಳಿಯಾಳ ಜೋಯಿಡಾ ತಾಲೂಕುಗಳಲ್ಲಿ 12 ಸಾವಿರ ಕಾರ್ಮಿಕರು ನೊಂದಾಯಿತರಾಗಿದ್ದಾರೆ. 11 ತಾಲೂಕುಗಳಲ್ಲಿ ಒಬ್ಬರೇ ಒಬ್ಬ ಕಾರ್ಮಿಕ ನಿರೀಕ್ಷಕರಿದ್ದು ಕಟ್ಟಡ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಲು ಅವರಿಂದ ಆಗುತ್ತಿಲ್ಲ ಎಂದು ದೂರಿರುವ ಅವರು ಜಿಲ್ಲಾ ಕೇಂದ್ರದಲ್ಲಿರುವ ಕಾರ್ಮಿಕ ಅಧಿಕಾರಿಗಳಿಗೆ ವರ್ಗವಾಗಿದ್ದು ಸೌಲಭ್ಯಗಳ ಮಂಜೂರಿಗೆ ವಿಳಂಬವಾಗುತ್ತಿದೆ. ಹಳಿಯಾಳ ಮತ್ತು ದಾಂಡೇಲಿಯಲ್ಲಿ 2 ಕಾರ್ಮಿಕ ನಿರೀಕ್ಷಕರ ಕಛೇರಿಗಳಿದ್ದು ಎರಡು ಕಛೇರಿಗೆ ಒಬ್ಬರೇ ಡಾಟಾ ಎಂಟ್ರಿಯವರಿದ್ದಾರೆ. ಕಾರ್ಮಿಕರ ನೊಂದಣಿ ಅಂತರ್ಜಾಲ ಮೂಲಕವೇ ಮಾಡಬೇಕಾಗಿರುವುದರಿಂದ ಸರ್ವರ್ ಸಮಸ್ಯೆಯಿಂದ ದಿನಕ್ಕೆ ಒಂದೆರಡು ಮಾತ್ರ ನೊಂದಾಯಿಸಲಾಗುತ್ತ್ತಿದ್ದು ಇದರಿಂದ ಕಾರ್ಮಿಕರಿಗೆ ಸಮಸ್ಯೆಯಾಗಿದೆ ಎಂದು ದೂರಲಾಗಿದೆ.
ಮಂಡಳಿಯಲ್ಲಿ 11,20,097ಕಾರ್ಮಿಕರು ನೊಂದಾಯಿತರಾಗಿದ್ದು ಸೆಸ್ಸ್ ಮತ್ತು ಕಾರ್ಮಿಕರ ವಂತಿಗೆಯ ಮೂಲಕ ರೂ. 5650.71/- ಕೋಟಿ ಹಣ ಸಂಗ್ರಹವಾಗಿದ್ದರೂ ಕಳೆದ 11 ವರ್ಷಗಳಲ್ಲಿ ಕೇವಲ 177 ಕೋಟಿರೂಪಾಯಿ ಮಾತ್ರ ಫಲಾನುಭವಿಗಳಿಗೆ ಸೌಲಭ್ಯ ಸಿಕ್ಕಿದ್ದು ಸರ್ಕಾರದಿಂದ ಕಾರ್ಮಿಕರ ಕಡೆಗಣನೆಯಾಗುತ್ತಿದ್ದು ಕೂಡಲೇ ತಮ್ಮ ಬೇಡಿಕೆಗಳಾದ ಕಾರ್ಮಿಕ ಇಲಾಖೆಯಲ್ಲಿ ಕಟ್ಟಡ ಮತ್ತು ನಿರ್ಮಾಣ ಮಂಡಳಿಗೆ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡುವುದು, ಕಾರ್ಮಿಕರ ಅರ್ಜಿ ಸಲ್ಲಿಸಿ 2-3 ವರ್ಷಗಳು ಕಳೆದರೂ ಸೌಲಭ್ಯಗಳು ಕಾರ್ಮಿಕರಿಗೆ ಸಿಗುತ್ತಿಲ್ಲ. ಕಾರ್ಮಿಕರಿಗೆಅರ್ಜಿ ಸಲ್ಲಿಸಿದ 30 ದಿನಗಳ ಒಳಗಾಗಿ ಸೌಲಭ್ಯ ವಿತರಿಸುವುದು, ಆನಲೈನ್ ಸರ್ವರ್ ಸಮಸ್ಯೆ ಇದ್ದಲ್ಲಿ ಅರ್ಜಿ ಸಲ್ಲಿಸಿದ ಏಳುದಿನಗಳೊಳಗೆ ಕೈಬರಹದ ಮೂಲಕ ತಾತ್ಕಾಲಿಕ ನೊಂದಣಿ ಕಾರ್ಡುಗಳನ್ನು ನೀಡಿ ನಂತರ ಆನ್‍ಲೈನ್‍ನಲ್ಲಿ ದಾಖಲಿಸುವುದು, ನೊಂದಾಯಿತ ಕೇಂದ್ರಕಾರ್ಮಿಕಸಂಘಟನೆಗೆ ಕಟ್ಟಡ ಕಾರ್ಮಿಕರನ್ನು ನೊಂದಾಯಿಸುವ ಅಧಿಕಾರವನ್ನು ಮಂಡಳಿ ಕೊಟ್ಟಿದೆ. ಆದರೆ ಕಾರ್ಮಿಕ ಇಲಾಖೆಯಲ್ಲಿ ಏಜೆಂಟರನ್ನು ನೇಮಿಸಿಕೊಂಡು ಕಾರ್ಮಿಕರಿಂದ ಹೆಚ್ಚು ಹಣ ವಸೂಲು ಮಾಡಿ ಭೃಷ್ಟಾಚಾರಕ್ಕೆ ಎಡೆ ಮಾಡಿಕೊಟ್ಟಿರುವುದರಿಂದ ಕೂಡಲೇ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು, ಕಾರ್ಮಿಕ ಕಛೇರಿಯಲ್ಲಿ ಅಗತ್ಯ ಸಿಬ್ಬಂದಿಯನ್ನು ನೇಮಿಸಿ 2-3 ವರ್ಷಗಳಿಂದ ಸಲ್ಲಿಸಿದ ಸೌಲಭ್ಯದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು,ಚೆಕ್‍ಲಿಸ್ಟ್ ಹೊರತುಪಡಿಸಿ ಅನಗತ್ಯ ದಾಖಲೆಗಳನ್ನು ಕೇಳಿ ಕಾರ್ಮಿಕರಿಗೆ ಪೀಡಿಸುವುದನ್ನು ನಿಲ್ಲಿಸಿ, ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಂದ ಪರಿಶೀಲನೆಯ ನೆಪದಲ್ಲಿ ಹಣ ಕೇಳುವುದನ್ನು ನಿಲ್ಲಿಸಬೇಕು, ಹುಬ್ಬಳ್ಳಿಯ ಸಹಾಯಕ ಕಾರ್ಮಿಕ ಆಯುಕ್ತರ ಕಛೇರಿಯಲ್ಲಿ ಕಳೆದ 5 ವರ್ಷದಿಂದ ಸಲ್ಲಿಸಿದ ಮದುವೆ ಮತ್ತು ಮರಣದ ಅರ್ಜಿಗಳಿಗೆ ಇಂದಿಗೂ ಸೌಲಭ್ಯ ಸಿಗದೆ ಇರುವುದರಿಂದ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು, ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ ಕಾರ್ಮಿಕ ಮಂಡಳಿಯ ಠೇವಣಿಯನ್ನು ಸಹಕಾರಿ ಬ್ಯಾಂಕಿಗೆ ವರ್ಗಾವಣೆ ಮಾಡಬಾರದೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಹರೀಶ ನಾಯ್ಕ, ಕಾರ್ಮಿಕ ಮುಖಂಡರಾದ ಆರ್.ಎಮ.ಮುಲ್ಲಾ, ಜಯಶ್ರೀ ಹಿರೆಕರ, ಹನುಮಂತ ಸಿಂದೊಗಿ, ಅಕ್ರಮಖಾನ್, ಪ್ರಕಾಶ ಚನಾಬತ್ತಿ, ಪರಶುರಾಮ ಮುತಗೇಕರ, ಕೃಷ್ಣಾ ಭಟ್ಟ, ರೇಣುಕಾ ಹಣಬರ, ಅರುಣ ಭೋಸಲೆ ಮೊದಲಾದ ಪ್ರಮುಖರು ಇದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News Tagged With: 177, ಅಕ್ರಮಖಾನ್, ಅಣ್ಣಪ್ಪಾ, ಅರುಣ ಭೋಸಲೆ, ಅರ್ಬನ್, ಈಡೇರಿಸುವಂತೆ, ಏಜೆಂಟ, ಕಟ್ಟಡ, ಕಾರ್ಮಿಕ, ಕಾರ್ಮಿಕರ, ಕೃಷ್ಣಾ ಭಟ್ಟ, ಕೋಟಿರೂಪಾಯಿ, ಜಿಲ್ಲಾಧಿಕಾರಿ, ನಿರ್ಮಾಣ, ಪರಶುರಾಮ ಮುತಗೇಕರ, ಪ್ರಕಾಶ ಚನಾಬತ್ತಿ, ಪ್ರತಿಭಟನೆ, ಬೇಡಿಕೆ, ಬ್ಯಾಂಕ್, ಮಡಿವಾಳ, ರೇಣುಕಾ ಹಣಬರ, ವಿವಿಧ, ವೃತ್ತ, ಶಾಸಕರ, ಸಚಿವ, ಸೆಸ್ಸ್

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar