ಕಾರವಾರ:
ಕಾಜುಬಾಗದ ನ್ಯೂ ಪೊಲೀಸ್ ಲೈನ್ ಬಳಿಯ ಕೊರೊನೆಟ್ ಐಸ್ ಪ್ಲ್ಯಾಂಟಿನಲ್ಲಿ ಶುಕ್ರವಾರ ಅಮೋನಿಯಂ ರಾಸಾನಿಯಕ ಅನಿಲ ಸೋರಿಕೆಯಾಗಿದ್ದರಿಂದ ಪೊಲೀಸ್ ವಸತಿಗೃಹದಲ್ಲಿದ್ದವರಿಗೆ ಉಸಿರುಗಟ್ಟಿದ ವಾತಾವರಣ ಸೃಷ್ಟಿಯಾಗಿತ್ತು.
ಅನಿಲ ಸೋರಿಕೆಯಾಗುತ್ತಿದ್ದಂತೆ ಐಸ್ ಪ್ಲ್ಯಾಂಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೆಲ ಕಾರ್ಮಿಕರು ಹಾಗೂ ಪೊಲೀಸ್ ವಸತಿ ಗೃಹದಲ್ಲಿದ್ದವರು ಆತಂಕಕ್ಕಿಡಾದರು. ರಾಸಾಯನಿಕ ದುರ್ವಾಸನೆಯಿಂದಾಗಿ ಸ್ಥಳೀಯರು ಉಸಿರಾಡಲು ಸಾಧ್ಯವಾಗದೇ ಪರದಾಟ ನಡೆಸಿದರು. ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಂದು ರಕ್ಷಣಾ ಕಾರ್ಯ ನಡೆಸಿದ್ದಾರೆ. ಅಗ್ನಿಶಾಮದ ದಳದವರು ಅನಿಲ ಸೋರಿಕೆಯಾಗುತ್ತಿದ್ದ ಸ್ಥಳದಲ್ಲಿ ನೀರು ಚಿಮ್ಮಿಸಿದರು. ಇದರಿಂದಾಗಿ ನಡೆಯಬಹುದಾದ ಭಾರೀ ದುರಂತ ತಪ್ಪಿದಂತಾಗಿದೆ. ಅನಿಲ ಸೋರಿಕೆ ಪರಿಣಾಮ ಸುತ್ತಮುತ್ತಲಿನ ಗಿಡ ಸುಟ್ಟು ಕರಕಲಾದ ಸ್ಥಿತಿಗೆ ತಲುಪಿದೆ. ಈ ಐಸ್ ಪ್ಲ್ಯಾಂಟ್ನಲ್ಲಿ ಆಗಾಗ ಸ್ವಲ್ಪ ಅನಿಲ ಸೋರಿಕೆಯಾಗುತ್ತದೆ. ಈ ಬಗ್ಗೆ ಘಟಕದ ಮಾಲಿಕರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವಾರು ಸಲ ದೂರು ಸಲ್ಲಿಸಿದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದರು
Leave a Comment