ಹಳಿಯಾಳ:
ಕಾಂಗ್ರೇಸ್ ಪಕ್ಷ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದ ದಿನದಿಂದ ಕರ್ನಾಟಕ ರಾಜ್ಯದಲ್ಲಿ ಹಿಂದೆಂದು ಕಾಣದಂತ ಅಭಿವೃದ್ದಿಯಾಗಿದ್ದು ಇನ್ನೂ ಹೆಚ್ಚಿನ ಅಭಿವೃದ್ದಿ ಕಾಮಗಾರಿಗಳನ್ನು ಸರ್ಕಾರ ಮಾಡಲಿದ್ದು ದೇಶದಲ್ಲಿ ಕರ್ನಾಟಕ ರಾಜ್ಯ ಅಭಿವೃದ್ದಿ ಪಥದಲ್ಲಿ ಮುಂದೆ ಇರಲಿದೆ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ನಂ. 3 ಮತ್ತು ಗುತ್ತಿಗೇರಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳ ನೂತನ ಕೊಠಡಿಗಳನ್ನು ಹಾಗೂ ಮದ್ನಳ್ಳಿ ಗ್ರಾಮಕ್ಕೆ ಮಂಜೂರಾದ ಅಟಲ್ ಬಿಹಾರಿ ವಾಜಪೇಯಿ (ಪ.ವರ್ಗ) ವಸತಿ ಶಾಲೆ ಮತ್ತು ಮುರ್ಕವಾಡ ಗ್ರಾಮಕ್ಕೆ ಮಂಜೂರಾದ ಡಾ. ಬಿ.ಆರ್. ಅಂಬೇಡ್ಕರ್ ವಸತಿ (ಪ.ಜಾತಿ)ಶಾಲೆಯನ್ನು ಪಟ್ಟಣದ ಬಾಡಿಗೆ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಪ್ರಾರಂಭಿಸಲಾಗಿದ್ದು ಇದನ್ನುಸಚಿವರು ಉಧ್ಘಾಟಿಸಿ ಮಾತನಾಡಿದರು.
ಪ.ಜಾತಿ, ಪ.ವರ್ಗ, ಹಾಗೂ ಹಿಂದುಳಿದ ವರ್ಗಗಳ ಮಕ್ಕಳಿಗೆ ಶಿಕ್ಷಣ ಮತ್ತು ವಸತಿ ನಿಲಯಕ್ಕೆ ಮದ್ನಳ್ಳಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ 21 ಕೋಟಿ 21ಲಕ್ಷ ರೂ.ವೆಚ್ಚದಲ್ಲಿ 400 ವಿದ್ಯಾರ್ಥಿಗಳಿಗೆ ಸೌಲಭ್ಯಗಳಿರುವÀ ಅಟಲ್ ಬಿಹಾರಿ ವಾಜಪೇಯಿ (ಪ.ವರ್ಗ) ವಸತಿ ಶಾಲೆಯ ಕಾಮಗಾರಿ ನಿರ್ಮಾಣ ಹಂತದಲ್ಲಿದ್ದು, ಮುರ್ಕವಾಡ ಗ್ರಾಮಕ್ಕೆ ಮಂಜೂರಾದ ಡಾ. ಬಿ.ಆರ್. ಅಂಬೇಡ್ಕರ್ ವಸತಿ (ಪ.ಜಾತಿ) ಶಾಲೆ ಕಟ್ಟಡ ನಿರ್ಮಾಣಕ್ಕೆ ಜಮೀನಿನ ಕೊರತೆಯಿದ್ದು ಜಾಗ ಸಿಕ್ಕ ಕೂಡಲೇ ಕಟ್ಟಡ ಕಾಮಗಾರಿ ಪ್ರಾರಂಭವಾಲಿದೆ ಎಂದರು.
ಬಯೋಕಾನ್ ಕಂಪನಿಯವರಿಂದ ಆರನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾದ ಚಿಣ್ಣರ (ಮೋಜಿನ) ಗಣಿತ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ ಎಸ್ ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸಚಿವರಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕಾಮಗಾರಿ, ಮೂಲಭೂತ ಸೌಕರ್ಯಕ್ಕೆ ಈ ನಾಲ್ಕು ವರ್ಷದಲ್ಲಿ 18 ಕೋಟಿ ರೂ. ಮಂಜೂರಾಗಿ ಕಾಮಗಾರಿಗಳು ಮುಗಿದಿವೆ. ತಾಲೂಕಿನಲ್ಲಿ 37 ಪ್ರೌಡಶಾಲೆ, 180 ಪ್ರಾರ್ಥಮಿಕ ಶಾಲೆಗಳಿದ್ದು 31,443 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಯಾವುದೇ ಶಾಲೆಗಳಿಗೆ ಶಿಕ್ಷಕರ ಕೊರತೆ ಇಲ್ಲಾ. ಎಲ್ಲಾ ಶಾಲೆಗಳಿಗೆ ಸಮವಸ್ತ್ರ, ಬೂಟ್, ಪುಸ್ತಕ, ಸೈಕಲ್ಗಳನ್ನೂ ಪೂರೈಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಉಮೇಶ ಬೋಳಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೆಕರ್, ಜಿ.ಪಂ. ಉಪಾಧ್ಯಕ್ಷ ಸಂತೋಷ ರೇಣಕೆ, ದಯಾನಂದ ಜಾವಳೇಕರ, ಸುಭಾಷ ಕೊರ್ವೇಕರ, ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾಂತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಸುರೇಶ ಬಡಿಗೇರ, ಡಿ.ಡಿ.ಪಿ.ಐ.ಪ್ರಸನ್ನಕುಮಾರ, ತಹಶೀಲ್ದಾರ ವಿದ್ಯಾಧರ ಗುಳಗುಳಿ, ತಾ.ಪಂ.ಕಾ.ನಿ.ಅಧಿಕಾರಿ ಲಕ್ಷ್ಮಣರಾವ ಯಕ್ಕುಂಡಿ, ಸಮಾಜಕಲ್ಯಾಣ ಇಲಾಖೆಯ ದರ್ಶನ ನಾಯ್ಕ ಇದ್ದರು.
Leave a Comment