ಹೊನ್ನಾವರ: ಸ್ಥಳೀಯ ನ್ಯೂ ಇಂಗ್ಲಿಷ ಸ್ಕೂಲ್ನಲ್ಲಿ ಭಾರತ ಚುನಾವಣಾ ಆಯೋಗ, ತಹಸಿಲ್ದಾರ್ ಕಛೇರಿ, ಬಿ.ಆರ್.ಸಿ ಹೊನ್ನಾವರ ಮತ್ತು ಶಾಲಾ ಇತಿಹಾಸ ಸಂಘ ಇವುಗಳ ಅಡಿಯಲ್ಲಿ ಇಂಟರ್ಯಾಕ್ಟಿವ್ ಸ್ಕೂಲ್ ಪ್ರೊಗ್ರಾಮ್ ನಡೆಸಲಾಯಿತು. “ಭವಿಷ್ಯದ ಮತದಾರರು” ಎಂಬ ವಿಷಯದ ಮೇಲೆ ವಿದ್ಯಾರ್ಥಿಗಳಿಗೆ ವಿಡಿಯೋ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮತದಾನದ ಮಹತ್ವ, ಮತದಾರರ ನೊಂದಣಿ ಪ್ರಕ್ರಿಯೆ, ಮತದಾನದಲ್ಲಿ ಭಾಗವಹಿಸುವಿಕೆ ವಿಷಯಗಳ ಮೇಲೆ ಬಿ.ಆರ್.ಸಿ ಸಮನ್ವಯಾದಿಗಳಾದ ಜಿ.ಎಸ್.ನಾಯ್ಕ ಮಾತನಾಡಿ, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಉಪತಹಸಿಲ್ದಾರರಾದ ಸತೀಶ ಗೌಡ, ಶಂಕರ ಹರಿಕಾಂತ, ಮುಖ್ಯಾಧ್ಯಾಪಕರಾದ ಶ್ರೀ ವಿ.ಎಸ್.ಅವಧಾನಿ, ಇತಿಹಾಸ ಶಿಕ್ಷರಾದ ಶ್ರೀ ಹರ್ಷ ಭಟ್ಟ ಉಪಸ್ಥಿತರಿದ್ದರು.
Leave a Comment