ಶಿಶು ಅಭಿವೃದ್ಧಿ ಯೋಜನಾ ಶಿರಸಿ ತಾಲೂಕು ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಕುಳವೆ ಗ್ರಾಮ ಪಂಚಾಯತ್ನ ತೆರಕನಹಳ್ಳಿ ಗ್ರಾಮ ಕಟ್ಟಿಗೆ ಡಿಪೊ ಅಂಗನವಾಡಿ ಕೇಂದ್ರದಲ್ಲಿ ಖಾಲಿ ಇರುವ 1 ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಆಗಸ್ಟ 23 ರೊಳಗೆ ಕಾರವಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಇರಿಸಿದ ಸೀಲ್ ಮಾಡಿದ ಟೆಂಡರ್ ಬಾಕ್ಸಿನಲ್ಲಿ ಹಾಕತಕ್ಕದ್ದು. ಅರ್ಜಿ ಜೊತೆಯಲ್ಲಿ ಅವಶ್ಯಕ ಎಲ್ಲಾ ದಾಖಲಾತಿಗಳ ಪ್ರತಿಗಳನ್ನು ಲಗತ್ತಿಸಿ ಸಲ್ಲಿಸಲು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಶಿರಸಿ ಇವರು ಕೋರಿದ್ದಾರೆ.
Leave a Comment