• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಉದ್ಯೋಗ ಖಾತರಿ ಯೋಜನೆ ಅವ್ಯವಹಾರ;ಕೊಟ್ಯಾಂತರ ರೂ.ಗಳ ಹಣ ವಸೂಲಾತಿಗೆ ಆರ್.ಡಿ.ಪಿ.ಆರ್.ಸೂಚನೆ

August 7, 2017 by Sachin Hegde Leave a Comment

ಕಾರವಾರ: ದುಡಿಯುವ ಕೈಗಳಿಗೆ ಕೆಲಸ ಕೊಡುವ ಉದ್ಯೋಗ ಖಾತರಿ ಯೋಜನೆಯಲ್ಲಿ ರಾಜ್ಯದ 30 ಜಿಲ್ಲೆಯ ಗ್ರಾಮ ಪಂಚಾಯತಗಳಲ್ಲಿ ಕೋಟ್ಯಾಂತರ ರೂ.ಗಳ ಅವ್ಯವಹಾರವ ನಡೆದಿರುವ ಬಗ್ಗೆ ಸಾಮಾಜಿಕ ಲೆಕ್ಕ ಪರಿಶೋಧನಾ ವಿಭಾಗ ಸರಕಾರಕ್ಕೆ ವರದಿ ನೀಡಿದೆ. ಈ ಕುರಿತಂತೆ ಪಂ.ರಾಜ್ ಇಲಾಖೆಯು ಅದರ ವಸೂಲಾತಿಗೆ ಆದೇಶಿಸಿದರೂ ಜಿಲ್ಲೆಯ ಅಧಿಕಾರಿಗಳು ಖ್ಯಾರೇ ಎನ್ನುತ್ತಿಲ್ಲ.
ಪಂ.ರಾಜ್ ಇಲಾಖೆಯ ಅಡಿಯಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನಾ ವಿಭಾಗವು 2011 ರಿಂದ ಕಾರ್ಯನಿರ್ವಹಿಸುತ್ತಿದ್ದು, ವರ್ಷದ ಎರಡು ಅವಧಿಯಲ್ಲಿ ಗ್ರಾಮ ಪಂಚಾಯಗಳಲ್ಲಿ ಮನರೆಗಾಯೋಜನೆಯಲ್ಲಿ ನಿಯಮಬಾಹೀರವಾಗಿ ಕಾಮಗಾರಿ, ಸತ್ತವರ ಹೆಸರಲ್ಲಿ ಹಣ ಪಾವತಿ, ಕಾಮಗಾರಿ ನಿರ್ವಹಿಸದೆ ಹಣ ಪಾವತಿ, ಅವಕಾಶವಿರದ ಕಾಮಗಾರಿ, ಬೇರೆ ಯೋಜನೆಯ ಕಾಮಗಾರಿಗೆ ಹಣ ಪಾವತಿ ಇತ್ಯಾದಿ ಮಾಡಿರುವ ಬಗ್ಗೆ ಗ್ರಾ.ಪಂಗಳಲ್ಲಿಯ ದಾಖಲೆ ಮತ್ತು ಸ್ಥಳ ಭೇಟಿ ಪರಿಶೀಲನೆ ನಡೆಸಿ ವರದಿಯನ್ನು ಸಾಮಾಜಿಕ ಪರಿಶೋಧನಾ ತಂಡವು ಸರಕಾರಕ್ಕೆ ನಿಡುತ್ತದೆ.
ಈ ಕುರಿತಂತೆ 2013-14 ಮತ್ತು 2014-15 ನೇ ಸಾಲಿನಲ್ಲಿ ರಾಜ್ಯದ 30 ಜಿಲ್ಲೆಯ ಗ್ರಾ.ಪಂಗಳಲ್ಲಿ ನಡೆದಿರುವ ಅವ್ಯವಹಾರದ ಮೊತ್ತವನ್ನು ವಸೂಲಾತಿ ಮಾಡುವಂತೆ ಎಲ್ಲ ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕ್ರಮವಹಿಸಲು ಕಟ್ಟು ನಿಟ್ಟಿನ ಸೂಚನೆಯನ್ನು ಲಿಖಿತ ಸುತ್ತೋಲೆಯ ಮೂಲಕ ಮೇಲಿಂದ ಮೇಲೆ ಪಂ.ರಾಜ್ ಇಲಾಖೆಯ ಕಾರ್ಯದರ್ಶಿ ಮತ್ತು ಆಯುಕ್ತರು ರವಾನಿಸಿದ್ದಾರೆ. 2013-14 ನೇ ಸಾಲಿನಲ್ಲಿ ವಸೂಲಾತಿಗೆ ಸೂಚಿಸಿರುವ ಮೊತ್ತವು ರೂ. 2647.30 ಲಕ್ಷರೂ. ಆಗಿದೆ. ಇದರಲ್ಲಿ ಅತಿ ಹೆಚ್ಚು ಅವ್ಯವಹಾರ ನಡೆದಿರುವದು ದಾವಣೆಗೆರೆ ಜಿಲ್ಲೆಯಲ್ಲಿ (823.32 ಲಕ್ಷರೂ). ನಂತರದಲ್ಲಿ ಮಂಡ್ಯ (.462.69 ಲಕ್ಷರೂ,) ಕೊಪ್ಪಳ (.66.53 ಲಕ್ಷರೂ), ತುಮಕೂರು (ರೂ.74.35 ಲಕ್ಷರೂ), ಧಾರವಾಡ (41.77 ಲಕ್ಷರೂ) ಹಾವೇರಿ (24.85ಲಕ್ಷರೂ) ಗದಗ (18.56 ಲಕ್ಷರೂ) ರಾಯಚೂರು (28.36 ಲಕ್ಷರೂ) ಬೆಂಗಳೂರು ಗ್ರಾ.(12.59 ಲಕ್ಷರೂ) ಆದರೆ ಈ ಪೈಕಿ ಕೇವಲ 12.21 ಲಕ್ಷರೂ.ಗಳನ್ನು ಮಾತ್ರ ಆಯಾ ಜಿ.ಪಂಗಳು ವಸೂಲಾತಿ ಮಾಡಿ ಸರ್ಕಾರಕ್ಕೆ ಭರಣ ಮಾಡಿವೆ.
2014-15 ನೇ ಸಾಲಿನಲ್ಲಿ ಮನರೆಗಾ ದಲ್ಲಿ ಒಟ್ಟು 6802.51 ಲಕ್ಷರೂ.ಗಳನ್ನು ವಸೂಲಾತಿಗೆ ಸೂಚಿಸಲಾಗಿದೆ. ಇದರಲ್ಲಿ ಚಿತ್ರದುರ್ಗ ಜಿಲ್ಲೆ (2640 ಲಕ್ಷರೂ.), ಶಿವಮೊಗ್ಗ (1148.44 ಲಕ್ಷರೂ), ಧಾರವಾಡ (906.96 ಲಕ್ಷರೂ) ಮಂಡ್ಯ (624.88 ಲಕ್ಷರೂ.)ರಾಮನಗರ (208.05 ಲಕ್ಷರೂ.) ಕೊಪ್ಪಳ (186.79 ಲಕ್ಷರೂ) ತುಮಕೂರು (121.98 ಲಕ್ಷರೂ), ರಾಯಚೂರು(62.40 ಲಕ್ಷರೂ) ಗದಗ(68.54 ಲಕ್ಷರೂ), ಚಾಮರಾಜ ನಗರ (64.53ಲಕ್ಷರೂ) ಬೀದರ (144.10 ಲಕ್ಷರೂ), ಉತ್ತರ ಕನ್ನಡ (25.39 ಲಕ್ಷರೂ) ಅವ್ಯವಹಾರಗಳು ನಡದಿದೆ. ಇದರಲ್ಲಿ ಕೇವಲ 15.87 ಲಕ್ಷರೂ.ಗಳನ್ನು ಮಾತ್ರ ಆಯಾ ಜಿಲ್ಲಾ ಪಂಚಾಯತಗಳು ವಸೂಲಾತಿ ಮಾಡಿ ಸರಕಾರಕ್ಕೆ ಭರಣ ಮಾಡಿದೆ.
ಈ ಬಗ್ಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಮತ್ತು ಪಂ.ರಾಜ್ ಇಲಾಖೆಯ ಯೋಜನೆಯ ಆಯುಕ್ತರು ಎಲ್ಲ ಜಿ.ಪಂಗಳಿಗೆ 2013-14 ಮತ್ತು 2014-15 ರಲ್ಲಿ ಸಾಮಾಜಿಕ ಪರಿಶೋಧನಾ ವಿಭಾಗವು ನೀಡಿದ ಆಕ್ಷೆಪಣೆ ಮತ್ತು ವಸೂಲಾತಿಗೆ ಸಂಬಂಧಿಸಿದಂತೆ ಅನುಪಾಲನಾ ವರದಿಯನ್ನು ಕೇಳಿದ್ದಾರೆ. ಕೋಟ್ಯಾಂತರ ರೂ.ಗಳ ಅವ್ಯವಹಾರವು ಯೋಜನೆಯಲ್ಲಿ ನಡೆದಿರುವದು ಬೆಳಕಿಗೆ ಬಂದಿದ್ದರೂ ಕೂಡ ಇದರ ವಸೂಲಾತಿಗೆ ಜಿ.ಪಂ ಮುಖ್ಯಕಾರ್ಯನಿರ್ವಹಕ ಅಧಿಕಾರಿಗಳು ಕ್ರಮವಹಿಸದೇ ಇರುವದರ ಬಗ್ಗೆ ಗ್ರಾಮೀಣಾಭಿವೃದ್ದಿ ಮತ್ತು ಪಂ.ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎನ್.ನಾಗಾಂಬೀಕಾ ದೇವಿ ಮತ್ತು ಮನರೆಗಾ ಯೋಜನೆಯ ಅಂದಿನ ಆಯುಕ್ತರಾಗಿದ್ದ ವಿಪುಲ್ ಬನ್ಸಾಲ್ ಅಧಿಕಾರಿಗಳ ಕರ್ತವ್ಯಲೋಪದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೋಟಿಸ್‍ನ್ನು ನೀಡಿದ್ದಾರೆ.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Karwar News Tagged With: 6802.51, ಅವಕಾಶ, ಅವ್ಯವಹಾರ, ಆರ್.ಡಿ.ಪಿ.ಆ, ಉದ್ಯೋಗ ಖಾತರಿ, ಕೆಲಸ, ಕೈಗಳಿಗೆ, ಕೊಟ್ಯಾಂತರ, ದುಡಿಯುವ, ಪರಿಶೋಧನಾ, ಪಾವತಿ, ಮನರೆಗಾ, ಯೋಜನೆ, ಯೋಜನೆಯ, ರೂ.ಗಳ, ರ್ಸೂಚನೆ, ಲಕ್ಷರೂ, ಲೆಕ್ಕ, ವಸೂಲಾತಿಗೆ, ವಿಭಾಗ, ಸಾಮಾಜಿಕ, ಹಣ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar