ಕಾರವಾರ:
ಕೆನರಾ ವೆಲ್ಫೇರ್ ಟ್ರಸ್ಟ್ ನಡೆಸುತ್ತಿರುವ ದಿನಕರ ಕಲಾನಿಕೇತನ ಸಂಗೀತ ಶಾಲೆಯಲ್ಲಿ ಈಚೆಗೆ ಗುರುಪೂರ್ಣಿಮೆ ಅಂಗವಾಗಿ ಸ್ವರ ನಮನ ಕಾರ್ಯಕ್ರಮ ನಡೆಯಿತು.
ಕೆನರಾ ವೆಲ್ಫೇರ್ ಟ್ರಸ್ಟ್ನ ಅಧ್ಯಕ್ಷ ಎಸ್.ಪಿ.ಕಾಮತ್, ಸಂಗೀತಕ್ಕೆ ರಾಗ, ತಾಳ, ಲಯದ ಜತೆಗೆ ಭಾವವೂ ಮುಖ್ಯವಾಗುತ್ತದೆ. ಮಕ್ಕಳಲ್ಲಿ ಸಂಗೀತದತ್ತ ಒಲವು ಮೂಡಿಸಲು ಪಾಲಕರು ಪ್ರಯತ್ನಿಸಬೇಕು ಎಂದರು.
ದಿ. ಪಂಡಿತ್ ಷಡಕ್ಷರಿ ಗವಾಯಿ ಹಾಗೂ ವಿ.ಜಿ.ಪಾಟೀಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ನಂತರ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಗಾಯನ, ಹಾಮ್ಮೋನಿಯಂ, ತಬಲಾ ಸೋಲೋ, ಸಂಗೀತ ಶಿಕ್ಷಕ ಮಾರುತಿ ನಾಯ್ಕ ಅವರಿಂದ ವಚನ ಗಾಯನ ನಡೆಯಿತು. ಶಿಕ್ಷಕ ಗಣಪತಿ ಹೆಗಡೆ ತಬಲಾ ಸಾಥ್ ನೀಡಿದರು.
ದಿವೇಕರ ಕಾಲೇಜಿನ ಪ್ರಾಚಾರ್ಯ ಬಿ.ಎಚ್.ನಾಯ್ಕ, ಕೆನರಾ ಎಜ್ಯುಕೇಶನ್ ಸೊಸೈಟಿಯ ಆಡಳಿತಾಧಿಕಾರಿ ಜಿ.ಪಿ.ಕಾಮತ್, ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕಿ ಸುಮಾ ನಾಯಕ, ಪ್ರೌಢಶಾಲೆ ಮುಖ್ಯಾಧ್ಯಾಪಕ ಅರುಣ ರಾಣೆ, ಸುಮತಿದಾಮ್ಲೆ ಪ್ರೌಢ ಶಾಲೆಯ ಮುಖ್ಯಾಧ್ಯಾಪಕಿ ಗಿರಿಜಾ ಬಂಟ್ ಇದ್ದರು. ಸುಮತಿದಾಮ್ಲೆ ಪ್ರೌಢ ಶಾಲೆಯ ಶಿಕ್ಷಕ ಸಂತೋಷ ಶೇಟ್ ಸ್ವಾಗತಿಸಿದರು. ಅನು ಕಳಸ ವಂದಿಸಿದರು. ಪ್ರೇಮಾ ಟಿಎಂಆರ್ ನಿರ್ವಹಿಸಿದರು.
Leave a Comment