• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪ್ಲಾಸ್ಟಿಕ್ ದ್ವಜ ಬಳಸದಂತೆ ಆಗ್ರಹ

August 11, 2017 by Sachin Hegde Leave a Comment

ಕಾರವಾರ: ಅಗಸ್ಟ್ 15ರ ಸ್ಪಾತಂತ್ರ್ಯೋತ್ಸವ ದಿನಾಚರಣೆ ವೇಳೆ ಪ್ಲಾಸಿಕ್ ಧ್ವಜದ ಮಾರಾಟ ಹಾಗೂ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿಯ ಸದಸ್ಯರು ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನಗೆ ಮನವಿ ಸಲ್ಲಿಸಿದರು.
ಸ್ಪಾತಂತ್ರ್ಯೋತ್ಸವ ದಿನಾಚರಣೆಯನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಈ ಸಂಭ್ರಮದಲ್ಲಿ ಬಳಸಿದ ಪ್ಲಾಸ್ಟಿಕ್, ಕಾಗದದ ರಾಷ್ಟ್ರಧ್ವಜವನ್ನು ಎಲ್ಲೆಂದರಲ್ಲಿ ಬಿಸಾಡಲಾಗುತ್ತದೆ. ಪ್ಲಾಸ್ಟಿಕ್ ಬೇಗ ನಾಶವಾಗದ ಕಾರಣ ಕೆಲ ದಿನಗಳವರೆಗೆ ಚರಂಡಿ, ರಸ್ತೆಯ ಇಕ್ಕೆಗಳಲ್ಲಿ ಬಿದ್ದಿರುತ್ತದೆ. ಇದರಿಂದ ರಾಷ್ಟ್ರಧ್ವಜಕ್ಕೆ ನಾವು ಅವಮಾನ ಮಾಡಿದಂತಾಗುತ್ತಿದೆ ಎಂದರು. ಈ ಬಗ್ಗೆ ಹಿಂದು ಜನಜಾಗೃತಿ ಸಮಿತಿಯು ಕಳೆದ 15 ವರ್ಷಗಳಿಂದ ರಾಷ್ಟ್ರಧ್ವಜದ ಗೌರ ಕಾಪಾಡುವುದರ ಬಗ್ಗೆ ಅಭಿಯಾನವನ್ನು ನಡೆಸುತ್ತಿದೆ. ಅಲ್ಲದೆ ರಾಷ್ಟ್ರಧ್ವಜವನ್ನು ಪ್ಲಾಸ್ಟಿಕ್‍ನಿಂದ ತಯಾರಿಸುವುದನ್ನು ಮತ್ತು ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ. ಇಷ್ಟಾದರು ಎಲ್ಲ ಭಾಗಗಳಲ್ಲಿ ಪ್ಲಾಸ್ಟಿಕ್ ಧ್ವಜದ ಮಾರಾಟ ಹಾಗೂ ಬಳಕೆ ನಡೆಯುತ್ತಿದೆ. ಆದ್ದರಿಂದ ಕೂಡಲೇ ಜಿಲ್ಲೆಯಾದ್ಯಂತ ಸಂಪೂರ್ಣವಾಗಿ ಇದನ್ನು ಮಾರಾಟ ಮಾಡುವುದನ್ನು ನಿಷೇಧಿಸಬೇಕು. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗಣೇಶ ಚತುರ್ಥಿಯಂದು ಕೆಲ ಭಾಗಗಳಲ್ಲಿ ಡಿಜೆ ಸೇರಿದಂತೆ ಇನ್ನಿತರ ಧ್ವನಿವರ್ಧಕಗಳನ್ನು ಬಳಸಿ ರಾತ್ರಿವರೆಗೂ ಡ್ಯಾನ್ಸ್ ಮಾಡಲಾಗುತ್ತಿದೆ. ಇದರ ಶಬ್ದ ಆಯಾ ಭಾಗದಲ್ಲಿರುವ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆಯೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬಿ.ಜಿ. ಮೋಹನ್, ಬಾಬು ಅಂಬೀಗ, ಗಿರೀಶ್ ಕುಡಾಳಕರ್, ನಾಗರಾಜ ಶೇಟ್, ಉಲ್ಲಾಸ್ ಮುಂಜೆ, ಪ್ರಭಾತ್ ಜನ್ನು, ಪ್ರಶಾಂತ ಪೆಡ್ನೇಕರ್, ಅಶೋಕ ವೇರ್ಣೆಕರ್, ರೇಖಾ ಹಿರೇಮಠ ಇದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Karwar News, Trending Tagged With: ಅಗಸ್ಟ್ 15, ಅಶೋಕ ವೇರ್ಣೆಕರ್, ಆಗ್ರಹ, ಉಲ್ಲಾಸ್ ಮುಂಜೆ, ಎಚ್. ಪ್ರಸನ್ನಗೆ, ಗಿರೀಶ್ ಕುಡಾಳಕರ್, ಜನಜಾಗೃತಿ, ದಿನಾಚರಣೆ, ದ್ವಜ, ಧ್ವನಿವರ್ಧಕ, ನಾಗರಾಜ ಶೇಟ್, ಪ್ರಭಾತ್ ಜನ್ನು, ಪ್ರಶಾಂತ ಪೆಡ್ನೇಕರ್, ಪ್ಲಾಸ್ಟಿಕ್, ಬಳಸದಂತೆ, ಬಾಬು ಅಂಬೀಗ, ಮನವಿ, ಮೋಹನ್, ರಾಷ್ಟ್ರಧ್ವಜ, ರೇಖಾ, ಸಮಿತಿ, ಸ್ಪಾತಂತ್ರ್ಯೋತ್ಸವ, ಹಿಂದು

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar