ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೃಷಿ ಭೂಮಿಯನ್ನು ಅಭಿವೃದ್ಧಿಪಡಿಸಲು, ಮನೆ ನಿರ್ಮಾಣ ಮಾಡಲು ಹಾಗೂ ಇತರೆ ಅನಿವಾರ್ಯ ಸಂದರ್ಭಗಳಲ್ಲಿ ಚಿರೇಕಲ್ಲು ಹಾಗೂ ಮುರ್ರಂ ಉಪಖನಿಜಗಳನ್ನು ತೆರವುಗೊಳಿಸಲು, ಅವಶ್ಯಕವಿದ್ದಲ್ಲಿ ಕಲ್ಲು ಗಣಿ ಗುತ್ತಿಗೆಯನ್ನು ಪಡೆಯದೇ ತೆರವುಗೊಳಿಸಲು ಅವಕಾಶ ಕಲ್ಪಿಸಲಾಗಿದೆ.
ಆಸಕ್ತಿಯುಳ್ಳವರು ಉಪ ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಾರವಾರ ಕಛೇರಿಗೆ ಲ್ಯಾಟ್‍ರೈಟ್ (ಚಿರೇಕಲ್ಲು) ತೆಗೆಯಲು ಬಯಸುವ ಅರ್ಜಿತ ಸ್ಥಳದ ಪೂರ್ಣ ವಿವರಗಳನ್ನು ಒಳಗೊಂಡ ಲಿಖಿತ ಅರ್ಜಿ.ಮುಚ್ಚಳಿಕೆ ಪತ್ರ (affidavit), ಅಕ್ಷಾಂಶ-ರೇಖಾಂಶ ಮತ್ತು ಚೆಕ್‍ಬಂದಿಗಳನ್ನು ಒಳಗೊಂಡ ನಕ್ಷೆ, ಅರ್ಜಿತ ಸ್ಥಳದ ಪಹಣಿ ಪತ್ರ.(ಖಖಿಅ) ಕೃಷಿ ಇಲಾಖೆಯಿಂದ ಪಡೆದ ಪ್ರಮಾಣ ಪತ್ರ. ಪಾನ್ ಕಾರ್ಡ್,ಆಧಾರ ಕಾರ್ಡ್ ಪ್ರತಿ, ಗ್ರಾಮ ನಕ್ಷೆ ಇತೀಚಿನ ಭಾವ ಚಿತ್ರ-2, ತಹಶೀಲ್ದಾರ್‍ರವರಿಂದ ಜಮೀನಿನ ಒಡೆತನದ/ಮಾಲೀಕತ್ವದ ಬಗ್ಗೆ ದೃಢೀಕರಣ ಪತ್ರ. ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಾರವಾರ ಕಛೇರಿಯನ್ನು ನೇರವಾಗಿ ಸಂಪರ್ಕಿಸಬಹುದು. ಎಂದು ಕಾರವಾರ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
Leave a Comment