ಕಾರವಾರ:
ಹಬ್ಬುವಾಡಾದಲ್ಲಿರುವ ಇಸ್ಕಾನ್ನ ಶ್ರೀ ಜಗನ್ನಾಥ್ ಮಂದಿರದಲ್ಲಿ ಆ. 14,15 ಮತ್ತು 16 ರಂದು ಶ್ರೀ ಕೃಷ್ಣ ಜನ್ಮಾಷ್ಠಮಿ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಮಂದಿರದಲ್ಲಿ ಆ. 14 ರಿಂದ ಪ್ರತಿದಿನ ಸಾಯಂಕಾಲ 5.30 ಗಂಟೆಗೆ ಜನ್ಮಾಷ್ಠಮಿ ಮಹೋತ್ಸವವು ವಿಜೃಂಭಣೆಯಿಂದ ನಡೆಯಲಿದೆ. ಮೂರು ದಿನಗಳವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಅಭಿಷೇಕ, ಭಜನೆ, ಕೀರ್ತನೆ, ನಾಟಕ, ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮ, ಪ್ರವಚನ, ಪೂಜೆ, ಮಂಗಳಾರತಿ ನಂತರ ಮಹಾಪ್ರಸಾದ ರೂಪದಲ್ಲಿ ರಾತ್ರಿ 8 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.
ಜಿಲ್ಲೆಯ ಸಮಸ್ತ ಭಕ್ತರು ಮೂರೂ ದಿನದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀಕೃಷ್ಣ ನ ಕೃಪೆಗೆ ಪಾತ್ರರಾಗಬೇಕೆಂದು ಇಸ್ಕಾನ್ನ ಶ್ರೀ ಜಗನ್ನಾಥ್ ಮಂದಿರದ ಕಾರ್ಯಕಾರಿ ಸಮಿತಿಯು ಪ್ರಕಟಣೆಯಲ್ಲಿ ಕೋರಿದೆ.
Leave a Comment