ಪರಮಪೂಜ್ಯ ಪದ್ಮವಿಭೂಷಣ ಡಾ|| ಡಿ ವಿರೇಂದ್ರ ಹೆಗ್ಗಡೆಯವರು ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮಗಳಿಗೆ ರಾಜ್ಯಾದಾದ್ಯಂತ ಕರೆ ನೀಡಿದ ಹಿನ್ನೆಲೆಯಲ್ಲಿ ಹೊನ್ನಾವರ-ಭಟ್ಕಳ ತಾಲೂಕಿನಲ್ಲಿ 69 ಕಡೆಗೆ ದೇವಸ್ತಾನದ ಒಳಾಂಗಣ – ಹೊರಾಂಗಣ ಆವರಣ, ನಾಗನಕಟ್ಟೆ, ಚೌಡಿಕಟ್ಟೆ, ಜಟಕ, ಗುಡಿ-ಗೋಪುರಗಳ ಆವರಣ ಸ್ವಚ್ಛತಾ ಕಾರ್ಯಕ್ರಮಗಳನ್ನು ಪ್ರಗತಿಬಂಧು ಸ್ವ ಸಹಾಸಂಘಗಳ ಒಕ್ಕೂಟ, ದೇವಸ್ಥಾನ ಆಡಳಿತ ಸಮಿತಿ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಸ್ವಚ್ಛತೆಗೊಳಿಸಲಾಯಿತು.ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಶಿರಾಣಿಯಲ್ಲಿ ದೇವಸ್ಥಾನದ ಆವರಣ ಸ್ವಚ್ಛತಾ ಕಾರ್ಯಕ್ರಮದೊಂದಿಗೆ ಶ್ರದ್ಧಾಕೇಂದ್ರಗಳ ಸ್ವಚ್ಛತೆ ಬಗ್ಗೆ ಮಾಹಿತಿ ಅಭಿಯಾನ ಕಾರ್ಯಕ್ರಮವನ್ನು ವಾಲ್ಮಿಕಿ ಸಮಾಜದ ರಾಜ್ಯ ನಿರ್ದೇಶಕರಾದ ಶ್ರೀ ವೆಂಕಟೇಶ ಗೊಂಡ ಉದ್ಘಾಟಿಸಿ ಮಾತನಾಡಿ ನಮ್ಮ ಧಾರ್ಮಿಕ ಕ್ಷೇತ್ರಗಳಲ್ಲಿ ತಾವು ಪ್ಲಾಸ್ಟಿಕ್, ತ್ಯಾಜ್ಯ ವಸ್ತುಗಳನ್ನು ಬಿಸಾಡಿ ಹೋಗಬಾರದು ನಾವು ಕ್ಷೇತ್ರಕ್ಕೆ ಬರುವಾಗ ಎಷ್ಟು ಮಡಿವಂತಿಕೆ ಇದೆಯೋ ಅಷ್ಟೇ ತೆರಳುವಾಗಲೂ ಪರಿಸರವನ್ನು ಮಡಿವಂತಿಕೆ ಇರಿಸುವಂತೆ ಮಾಡಬೇಕು. ಇದು ಶಾಸ್ವತವಾಗಿ ಇರುವಂತೆ ಧಾರ್ಮಿಕ ಕೇಂದ್ರಗಳನ್ನು ಸ್ವಚ್ಛತೆಗೊಳಿಸುವುದು ಪ್ರತಿಯೊಬ್ಬ ಭಕ್ತ ಮನದಲ್ಲಿ ಮೂಡಬೇಕು ಎಂದರು. ಉತ್ತರ ಕನ್ನಡ ಜಿಲ್ಲಾ ನಿರ್ದೇಶಕರವರಾದ ಲಕ್ಷ್ಮಣರವರು ಮಾತನಾಡಿ ದೇಶದಲ್ಲಿ ಸ್ವಚ್ಛ ಧಾರ್ಮಿಕ ನಗರ ಎಂದು ಕೇಂದ್ರ ಸರಕಾರ ಬಿರುದು ನೀಡಿದ್ದು, ಈ ಸಂತೋಷ ಅಲ್ಲಿಯ ಜನರಿಗೆ ಮಾತ್ರವಲ್ಲ ಈಡೀ ರಾಜ್ಯದಲ್ಲಿ ಎಲ್ಲ ಧಾರ್ಮಿಕ ಕ್ಷೇತ್ರಗಳಿಗೆ ಸಿಗುವಂತಾಗಬೇಕು ಆ ನಿಟ್ಟಿನಲ್ಲಿ ಸ್ಥಳೀಯ ಸಂಘ – ಸಂಸ್ಥೆಗಳ ಸಹಕಾರದಿಂದ ಉತ್ತರಕನ್ನಡ ಜಿಲ್ಲೆಯಲ್ಲಿ 400 ಕ್ಕಿಂತ ಅಧಿಕ ಧಾರ್ಮಿಕ ಕೇಂದ್ರಗಳ ಹೊರಾಂಗಣವನ್ನು ಸ್ವಚ್ಛತೆ ಗೊಳಿಸಲಾಗುವುದೆಂದು ತಿಳಿಸಿ sಸ್ವಚ್ಛತಾ ಜಾಗ್ರತ ಕತಪತ್ರಗಳನ್ನು ಬಿಡುಗಡೆ ಮಾಡಿದರು. ಹೊನ್ನಾವರ ಯೋಜನಾಧಿಕಾರಿಯಾದ ಎಮ್. ಎಸ್. ಈಶ್ವರವರು ಮಾತನಾಡಿ ಭಕ್ತಾಧಿಗಳು ದೇವರ ಪ್ರಾರ್ಥನೆ, ಹರಕೆ, ಹೋಮ ಪೂಜೆ ಪುರಸ್ಕಾರ, ಎಳ್ಳಿನೀರು, ಹಸಿರು ಕಾಣಿಕೆ, ಹಿಂಗಾರ, ಬಾಳೆಲೆ, ವಿಳ್ಯದೆಲೆ, ತೆಂಗಿನಕಾಯಿ, ಹೂವಿನ ಮಾಲೆ ಮುಂತಾದಗಳನ್ನು ದೇವರಿಗೆ ಸಮರ್ಪಣೆ ಮಾಡುವ ಉದ್ದೇಶದಿಂದ ಕೊಂಡೋಗಿ ಅಲ್ಲಿ ಸಂಬಂಧಪಟ್ಟ ಅರ್ಚಕರಿಗೆ ನೀಡಿ ನಂತರ ಹಿಂತಿರುಗಿ ಬರುವಾಗ ಕೆಲವೊಂದು ದೇವರಿಗೆ ಸಮರ್ಪಣೆಗೆ ಗೊಳ್ಳದ ವಸ್ತುಗಳನ್ನು ಅಲ್ಲಿ ಬಿಟ್ಟು ಬರುವುದು ಅಥವಾ ಪಕ್ಕದಲ್ಲಿ ಕೆರೆ ಹಳ್ಳಕ್ಕೆ ಬಿಸಾಡಬಾರದು ಎಂದರು.ವೇದಿಕೆಯಲ್ಲಿ ಜಿಲ್ಲಾ ಜನಜಾಗೃತಿ ಸದಸ್ಯ ಶ್ರೀ ಸತೀಶ ಶೇಟ್, ಒಕ್ಕೂಟ ಅಧ್ತಕ್ಷ ಗಜಾನನ ಗೊಂಡ, ಭಾರತಿ, ಸಣ್ಕೂಸ ದೇವಾಡಿಗ, ನಾಗರಾಜ ಗೊಂಡ, ಗ್ರಾ.ಪಂ.ಸದಸ್ಯೆಸುಕ್ರಿ ಗೊಂಡ,ನವಜೀವನ ಸಮಿತಿ ಅಧ್ಯಕ್ಷ ಗೋವಿಂದ ಮೇಲ್ವಿಚಾರಕರಾದ ರಮೇಶ ಉಪಸ್ಥಿತರಿದ್ದರು.ಸಭೆಯಲ್ಲಿ ಒಕ್ಕೂಟದ ಸದಸ್ಯರು, ಜನಪ್ರತಿನಿಧಿಗಳು, ಸೇವಾಪ್ರತಿನಿಧಿಗಳು, ಸಂಘ -ಸಂಸ್ಥೆಯ ಅಧಿಕಾರಿಗಳು, ಸಿ.ಹೆಚ್. ಎಸ್. ಸಿ.ಮ್ಯಾನೇಜರ್ ನಾಗರತ್ನರವರು ಉಪಸ್ಥಿತರಿದ್ದರು.
ಹೊನ್ನಾವರ-ಭಟ್ಕಳ ತಾಲೂಕಿನ ವಿವಿಧೆಡೆ ಈ ಕೆಳಗಿನಂತೆ ದೇವಸ್ಥಾನ ಗುಡಿ, ಗೋಪುರ, ಆವರಣಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು.
ಗ್ರಾಮದ ಹೆಸರು/ ಕಾರ್ಯಕ್ಷೇತ್ರ ಶ್ರದ್ಧಾಕೇಂದ್ರದಹೆಸರು ವಿಳಾಸ
ಕರಿಕಲ್, ಮಾವಿನಕುರ್ವೆ ದುರ್ಗಾದೇವಿ ದೇವಸ್ಥಾನ, ಕರಿಕಲ್ ಭಟ್ಕಳ
ಭಟ್ಕಳಸಿಟಿ ನಿಚ್ಛಲಮಕ್ಕಿ ನಾಮದಾರಿ ಸಭಾಭವನ ಭಟ್ಕಳ
ಭಟ್ಕಳ ಸಿಟಿ ರಾಘವೇಂದ್ರ ದೇವಸ್ಥಾನ ಭಟ್ಕಳ
ಮಾವಿನಕುರ್ವೆ ಗಣೇಶೋತ್ಸವ ಸಭಾಭವನ ಮಾವಿನಕುರ್ವೆ
ಕರ್ಕಿ ಹೊಸಬ ದೇವಸ್ಥಾ£, ಗಿಳಿಕಾರ ಕರ್ಕಿÀ
ಕರ್ಕಿ ಗೋಳಿಬೀರ ದೇವಸ್ಥಾನ ಇಳಿಕಾರ ಕರ್ಕಿ
ಕಾಸರಕೋಡ ಗಣಪತಿನಾರಾಯಣ ದೇವಸ್ಥಾನ ಕಾಸರಕೋಡು
ಹೊಸಗೋಡುಚಿಕ್ಕನಕೋಡ-ಎ ಶ್ರೀ ದುರ್ಗಾಂಬದೇವಸ್ಥಾನ ಹೊಸಗೋಡು
ಹೀರೇಬೈಲ್ ಚಿಕ್ಕನಕೋಡ-ಬಿ ಈಶ್ವರ ದೇವಸ್ಥಾನ ಹಿರೇಬೈಲ್
ಕಡ್ಲೆ ಮಹಾಲಕ್
ಸಾಲಿಕೇರಿ, ಹಳದೀಪುರ-ಬಿ ಮಾರಿಕಾಂಬ ದೇವಸ್ಥಾನ ಸಾಲಿಕೇರಿ, ಹಳದೀಪುರ
ಕಡತೋಕ ರಾಮನಾಥ ದೇವಸ್ಥಾನ ಕಡತೋಕ
ಹಳದೀಪುರ ತುಳಸಿಕಟ್ಟೆ ದೇವಸ್ಥಾನ
ಕುದ್ರಿಗಿ ಶಂಭುಲಿಂಗೇಶ್ವರ ದೇವಸ್ಥಾನ
ಚಿತ್ರಾಪುರ, ಶಿರಾಲಿ ದುರ್ಗಾಪರಮೇಶ್ವರಿ ದೇ ವಸ್ಥಾನ ಚಿತ್ರಾಪುರ
ಕಟಗಾರಕೊಪ್ಪ ಗ್ರಾಮದೇವತಾ ದೇವಸ್ಥಾನ, ಕಟಗಾರಕೊಪ್ಪ
ತೆಂಗಿನಗುಂಡಿ, ವೆಂಕ್ಟಾಪುರ ಗಣಪತಿ ದೇವಸ್ಥಾನ
ಹೊನ್ನಗದ್ದೆ, ಜಾಲಿ ಜಟಕೇಶ್ವರ ದೇವಸ್ಥಾನ ಹೊನ್ನಗದ್ದೆ
ಜಾಲಿ ಗಣಪತಿ ದೇವಸ್ಥಾನ ಜಾಲಿ
ಶಿರಾಲಿ ಈಶ್ವರ ಸೇವಾ ದೇವಸ್ಥಾನ
ಬೆದ್ರಕೇರಿ ಬೈಲೂರು-ಎ ನಾಗಮಾಸ್ತಿ ದೇವಸ್ಥಾನ ಬೆದ್ರಕೇರಿ
ಚಿತ್ತಾರ ಮಂಕಿ-ಡಿ ಶಂಭುಲಿಂಗೇಶ್ವರ ದೇವಸ್ಥಾ£ ಚಿತ್ತಾರÀ
ತಾಳಮಕ್ಕಿ ಮಂಕಿ-ಸಿ ದುರ್ಗಾಪರಮೇಶ್ವರಿ ದೇವಸ್ಥಾನ ತಾಳಮಕ್ಕಿ
ಬಲ್ಸೆ, ಬೈಲೂರು ವಿಷ್ಣುಮೂರ್ತಿ ದೇವಸ್ಥಾನ ಬೈಲೂರು
ಅಡಿಕೆಕುಳಿ ಮಂಕಿ-ಡಿ ವನದುರ್ಗಿ ದೇವಸ್ಥಾನ ಅಡಿಕೆಕುಳಿ
ದಬ್ಬೋಡ, ಮಂಕಿ-ಡಿ ಮಂಗಳಾದೇವಿ ದೇವಸ್ಥಾನ ದಬ್ಬೋಡ
ಕುಂಬಾರಕೇರಿ, ಮಂಕಿ-ಬಿ ಶಂಖ ಮಾಸ್ತಿ ದೇವಸ್ಥಾನ
ದೇವರಗದ್ದೆ,ಮಂಕಿ-ಸಿ ಸಿದ್ಧಿವಿನಾಯಕ ದೇವಸ್ಥಾನ
ಕಾಸರಗೇರಿ ಮಂಕಿ-ಬಿ ಅರಮ್ಮಾದೇವಿ ದೇವಸ್ಥಾನ ಕಾಸಗೇರಿ
ಬೆಳಕೆ ಸೋಡಿಗದ್ದೆ ದೇವಸ್ಥಾನ ಬೆಳಕೆ
ಗೊರಟೆ ರುಂಡವೀರ ಮಹಾಸತಿ ದೇವಸ್ಥಾನ ಹೊನ್ನೆಮಡಿ
ಶಿರಾಲಿ ಕೇಶವಮೂರ್ತಿ ದೇವಸ್ಥಾನ ಶಿರಾಲಿ
ಕೈಕಿಣಿ ಅನ್ನಪೂರ್ಣೇಶ್ವರಿ ದೇವಸ್ಥಾನ
ಉತ್ತರಕೊಪ್ಪ ಗಣೇಶೋತ್ಸವ ಸಮಿತಿ ಉತರಕೊಪ್ಪ
ಬೇಂಗ್ರೆ ಲಕ್ಷ್ಮೀನಾರಾಯಣ ದೇವಸ್ಥಾನ ಮಾಲಿಕೊಡ್ಲು
ಮೂಡಶಿರಾಲಿ ದುರ್ಗಾಪರಮೆಶ್ವರಿ ದೇವಸ್ಥಾನ
ಖರ್ವಾ ಸಿದ್ಧಿವಿನಾಯಕ ದೇವಸ್ಥಾನ ಖರ್ವ
ಗೇರುಸೊಪ್ಪ ಆಂಜನೇಯ ದೇವಸ್ಥಾನ ಗೇರುಸೊಪ್ಪ
ಮಹಿಮೆ ಮಹಿಷಾಸುರ ಮರ್ದಿನಿ ದೇವಸ್ಥಾನ
ಬೈಲಗದ್ದೆ ಉಪ್ಪೋಣಿ ಮಾರುತಿ ದೇವಸ್ಥಾನ
ಹೆರಂಗಡಿ ವೆಂಕಟ್ರಮಣ ದೇವಸ್ಥಾನ ಹೆರಂಗಡಿ
ನಗರಬಸ್ತಿಕೇರಿ ಹನುಮಂತ ದೇವಸ್ಥಾನ ನಗರಬಸ್ತಿಕೇರಿ
ಸಂಘ ಸಂಸ್ಥೆಗಳ ಹಾಗೂ ಒಕ್ಕೂಟದ ಸದಸ್ಯರು ಒಟ್ಟು 8000 ಕ್ಕಿಂತಲೂ ಹೆಚ್ಚು ಜನ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಯಶಸ್ವಿಗೊಳಿಸಿದ ಸಹಕರಿಸಿದ ಎಲ್ಲರಿಗೂ ಹಾಗೂ ಪತ್ರಿಕೆ ಮತ್ತು ಮಾದ್ಯಮ ಮಿತ್ರರಿಗೂ ಅಭಿನಂದನೆ ಸಲ್ಲಿಸಿದ್ದಾರೆ.
ದಿ: 14.08.2017 ಎಮ್. ಎಸ್. ಈಶ್ವರ
ಸ್ಥಳ: ಹೊನ್ನಾವರ ಯೋಜನಾಧಿಕಾರಿ
Éಹೊನ್ನಾವರ-ಭಟ್ಕಳ
ಮಾರ್ಗದರ್ಶನದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೊನ್ನಾವರ-ಭಟ್ಕಳ, ಹೊನ್ನಾವರ- ಭಟ್ಕಳ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಹೊನ್ನಾವರ-ಭಟ್ಕಳ, ಜಿಲ್ಲಾ ಜನಜಾಗೃತಿ ವೇದಿಕೆ ಹೊನ್ನಾವರ-ಭಟ್ಕಳ, ಶಿಕ್ಷಣ ಸಂಸ್ಥೆಗಳು & ಇಲಾಖೆಗಳು, ಶಾಲಾಅಭಿವೃದ್ಧಿ ಸಂಸ್ಥೆಗಳು, ಗ್ರಾಮ ಪಂಚಾಯತ್, ತಾಲೂಕು ಪಂಚಾಯತ, ಜಿಲ್ಲಾ ಪಂಚಾಯತ್ ಪುರಸಭೆ, ದೇವಸ್ಥಾನ ಸಮಿತಿಗಳು, ಸ್ಥಳೀಯ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಇಲಾಖಾ ಅಧಿಕಾರಿಕರಿಗಳು , ಮಾಧ್ಯಮ ಪತ್ರಕರ್ತ ಮಿತ್ರರು, ಇವರ ಸಹಭಾಗಿತ್ವದೊಂದಿಗೆ ದಿ: 22.07.217 ರಂದು ಹೊನ್ನಾವರ- ಭಟ್ಕಳ ತಾಲೂಕಿನಲ್ಲಿ 29 ಕಡೆ 1400 ಸದಸ್ಯರು & 1800 ಗಿಡಳನ್ನು ಶಾಲೆ, ದೇವಸ್ಥಾನದ ವಠಾರದಲ್ಲಿ ನಾಟಿ ಮಾಡಿ ವನಮಹೋತ್ಸವವನ್ನು ಯಶಸ್ವಿಯಾಗಿ ಆಚರಿಸಲಾಯಿತು. ಪಾಲ್ಗೊಂಡು ಸಹಕರಿಸಿದ ಎಲ್ಲರಿಗೂ ಸಂಸ್ಥೆಯ ಪರವಾಗಿ ಹೊನ್ನಾವರ-ಭಟ್ಕಳ ಯೋಜನಾಧಿಕಾರಿ ಎಮ್.ಎಸ್. ಈಶ್ವರ ಅಭಿನಂದನೆ ಸಲ್ಲಿಸುತ್ತಾ ಹೊನ್ನಾವರ-ಭಟ್ಕಳ ಅರಣ್ಯ ಇಲಾಖೆಯವರು, ಅರಣ್ಯ ಬೆಳೆಸುವ-ಉಳಿಸುವ ಯೋಜನೆಯನ್ನು ಯಶ್ವಸ್ವಿಗೊಳಿಸಲು ಎಲ್ಲರೂ ಕೈಜೋಡಿಸಬೇಕೆಂದರು.ಸಂಸ್ಥೆಯು ಯಾವಾಗಲೂ ಇದನ್ನು ಬೆಂಬಲಿಸುತ್ತದೆ.ಈ ವನಮಹೋತ್ಸವ ಕಾರ್ಯಕ್ರಮಕ್ಕೆ ಗಿಡಗಳನ್ನು ಉಚಿತವಾಗಿ ಅರಣ್ಯ ಇಲಾಖೆಯವರು ನೀಡಿದ್ದು, ಎಲ್ಲಾ ಹಿರಿಯ ಹಾಗೂ ಕಿರಿಯ ಅಧಿಕಾರಿ ವರ್ಗದವರ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ವಂದನೆಗಳೊಂದಿಗೆ,
ಇತೀ ತಮ್ಮ ವಿಶ್ವಾಸಿ,
ಸ್ಥಳ: ಹೊನ್ನಾವರ ಎಮ್. ಎಸ್. ಈಶ್ವರ
ದಿ: 14.08.2017 ಯೋಜನಾಧಿಕಾರಿ
Leave a Comment