ಕಾರವಾರ: ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರವೂ 2016-17 ನೇ ಸಾಲಿಗಾಗಿ ಜಿಲ್ಲಾ ಮಟ್ಟದ ಯುವ ಮಂಡಳ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸುವ ಯುವ ಮಂಡಳಗಳು ಕರ್ನಾಟಕ ಸಂಘ ಸಂಸ್ಥೆಗಳ ಕಾಯ್ದೆ 1960 ರ ಅಡಿಯಲ್ಲಿ ನೋಂದಣಿಯಾಗಿರಬೇಕು. ಪ್ರಸಕ್ತ ಸಾಲಿನಲ್ಲಿ ಸಮಾಜದ ಕೆಲಸ ನಿರ್ವಹಿಸುತ್ತಿರಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪರಿಸರ ಸೌಂರಕ್ಷಣೆ, ವೃತ್ತಿ ತರಬೇತಿ, ಸಾಕ್ಷರತೆ, ಮಹಿಳಾ ಸಬಲೀಕರಣ ಸಾಂಸ್ಕøತಿಕ ಕಾರ್ಯಕ್ರಮ, ಸ್ವಯಂ ಉದ್ಯೋಗ, ಸಾಮಾಜಿಕ ಪಿಡುಗು ನಿವಾರಣೆ, ಕ್ರೀಡೆಗಳು ಹಾಗೂ ಸಮಾಜ ಕಲ್ಯಾಣಗಳ ಬಗ್ಗೆ ಯುವ ಮಂಡಳಗಳು ಕೆಲಸ ಮಾಡಿರಬೇಕು. ಈ ಬಗ್ಗೆ ದಾಖಲೆಗಳನ್ನು ಹೊಂದಿರಬೇಕು. ಪ್ರಶಸ್ತಿಯೂ 25ಸಾವಿರ ರೂ ಬಹುಮಾನವನ್ನು ಒಳಗೊಂಡಿದೆ. ಆಸಕ್ತ ಯುವ ಮಂಡಳಗಳು ಜಿಲ್ಲಾ ಯುವ ಸಮನ್ವಯ ಅಧಿಕಾರಿಗಳು ನೆಹರು ಯುವ ಕೇಂದ್ರ, ಹಳೆ ಝಡ್. ಪಿ. ಕಟ್ಟಡ, ತಹಶೀಲ್ದಾರ ಕಛೇರಿಯ ಮೊದಲನೆ ಮಹಡಿ, ಕಾರವಾರ ಇವರನ್ನು ಸಂಪರ್ಕಿಸಿ ನಿಗದಿತ ಅರ್ಜಿ ನಮೂನೆಗಳನ್ನು ಪಡೆಯಬಹುದು. ಪೂರ್ಣವಾದ ಅರ್ಜಿಗಳನ್ನು ಪ್ರಸ್ತಾವಣೆಯೊಂದಿಗೆ ಸೆ. 5ರ ಒಳಗೆ ಕಚೇರಿಗೆ ಸಲ್ಲಿಸಬೇಕು. ಮಾಹಿತಿಗೆ 9958325151, 9449992195 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Leave a Comment