ಕಾರವಾರ: ಪ್ರಧಾನ ಮಂತ್ರಿಗಳ ಉಜ್ವಲ ಯೋಜನೆ ಅಡಿಯಲ್ಲಿ ಬಿ.ಪಿ.ಎಲ್ ಕಾರ್ಡಗಳನ್ನು ಹೊಂದಿರುವ ಮನೆಗಳ ಮಹಿಳೆಯರಿಂದ ಠೇವಣಿ ರಹಿತ ಎಲ್.ಪಿ.ಜಿ.( ಗ್ಯಾಸ್) ಸಂಪರ್ಕಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಮಹಿಳಾ ಅರ್ಜಿದಾರರು ತಮ್ಮ ಕೆ.ವೈ.ಸಿ (kyc)) ಯೊಂದಿಗೆ ನಿಗದಿತ ಅರ್ಜಿ ನಮೂನೆಯಲ್ಲಿ ಹತ್ತಿರದ ಎಲ್.ಪಿ.ಜಿ ವಿತರಕರಲ್ಲಿ ಸಲ್ಲಿಸಬಹುದು. ಕೆ.ವೈ.ಸಿ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ವಿರುವದಿಲ್ಲ. ಫಲಾನುಭವಿಗಳು ಸ್ಟೌವ್ ಹಾಗೂ ಪ್ರಥಮ ರಿಫಿಲ್ ಬೆಲೆ ಪಾವತಿಸಬೇಕು. ಫಲಾನುಭವಿ ಬಯಸಿದರೆ ಈ ಮೊತ್ತವನ್ನು ಕಂತಿನಲ್ಲಿ ಪಾತಿಸಬಹುದು. ಕಂತಿನ ಸೌಲಭ್ಯವು ವಿತರಕರ ಹತ್ತಿರ ಲಭ್ಯವಿರುವ ಇಕನಾಮಿ ಬಿ.ಪಿ.ಎಲ್ ಸ್ಟೌವಿಗೆ (ಬೆಲೆ 990 ರೂ.) ಮಾತ್ರ ಅನ್ವಯಿಸುತ್ತದೆ.
ಅರ್ಜಿದಾರರು ತಮ್ಮ ಕೆ.ವೈ.ಸಿ.ಯೊಂದಿಗೆ ಆಧಾರ ಕಾರ್ಡ ಪ್ರತಿ ಹಾಗೂ ಬ್ಯಾಂಕ ಖಾತೆ ಪ್ರತಿ, ವಿಳಾಸ ಪ್ರಮಾಣ ಪತ್ರ, ಬಿ.ಪಿ.ಎಲ್ ರೇಶನ ಕಾರ್ಡ ಪ್ರತಿ, , SECC--2011 ರಲ್ಲಿ ಇದ್ದಂತೆ ಕುಟುಂಬದ ಎಲ್ಲ ಸದಸ್ಯರ ಆಧಾರ ಕಾರ್ಡ ಪ್ರತಿಗಳು, ಎರಡು ಪಾಸಪೋರ್ಟ ಅಳತೆಯ ಭಾಚಿತ್ರಗಳನ್ನು ಸಲ್ಲಿಸುವಂತೆ ಉತ್ತರ ಕನ್ನಡ ಜಿಲ್ಲೆ ಎಲ್.ಪಿ.ಜಿ ವಿತರಣಾ ಕ್ಷೇತ್ರದ ನೊಡಲ್ ಅಧಿಕಾರಿ ಅಭಿಜೀತ ರಾವತ ಕೋರಿದ್ದಾರೆ.
Leave a Comment