ಕಾರವಾರ: ಆತ್ಮವಿಶ್ವಾಸ, ಶಿಸ್ತು, ಧೃಡ ಸಂಕಲ್ಪದೊಂದಿಗೆ ಸತತ ಪರಿಶ್ರಮದಿಂದ ಪ್ರಯತ್ನ ನಡೆಸಿದಾಗ ಮಾತ್ರ ಯಶಸ್ಸು ಸಿಗುತ್ತದೆ ಎಂದು ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಪ್ರೋ. ಸುರೇಂದ್ರ. ದಫೇದಾರ ಹೇಳಿದರು.
ದಿವೇಕರ ಪದವಿ ಪೂರ್ವ ಮಹಾವಿದ್ಯಾಲಯ ಆಯೋಜಿಸಿದ ತಾಲೂಕಾ ಮಟ್ಟದ ಪ್ರೌಢಶಾಲಾ ಮಕ್ಕಳ ಚರ್ಚಾ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.
ಪ್ರಯತ್ನ ಮಾಡದೇ ಪ್ರತಿಫಲ ನಿರೀಕ್ಷಿಸುವದು ಸರಿಯಲ್ಲ. ವಿದ್ಯಾರ್ಥಿಗಳು ಪ್ರಯತ್ನವಾದಿಗಳಾಗಿರಬೇಕು. ಪ್ರಯತ್ನವನ್ನೇ ಮಾಡದೆ ಪ್ರತಿಫಲ ನಿರೀಕ್ಷಿಸುವದು ತಪ್ಪು ಎಂದರು. ಯಾವುದೇ ವಿಷಯಕ್ಕೆ ಸಂಭಂದಿಸಿದಂತೆ ಸಾಕಷ್ಟು ಮಾಹಿತಿಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ, ಕ್ರೋಢಿಕರಿಸಿಕೊಂಡು ಸತತ ಪರಿಶ್ರಮದಿಂದ ಅಧ್ಯಯನ ಮಾಡಿದಾಗ ಆತ್ಮವಿಶ್ವಾಸ ಗಳಿಸಲು ಸಾಧ್ಯ ಎಂದು ಹೇಳಿದರು.
ದಿವೇಕರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯೆ ರೂಪಾ ಬಾಂದೇಕರ ಸ್ವಾಗತಿಸಿದರು. ತೇಜಲ್ ನಾಯಕ ಪ್ರ್ರಾರ್ಥಿಸಿದರು. ಹಿರಿಯ ಉಪನ್ಯಾಸಕಿ ಸ್ಮೀತಾ.ಸಾವಂತ ಚರ್ಚಾ ಸ್ಪರ್ಧೆಯ ನಿಯಮಗಳನ್ನು ತಿಳಿಸಿದರು. ಪ್ರೋಫೇಸರ ಶ್ರೀನಿತಾ ನಾಯ್ಕ ಮತ್ತು ಪ್ರೋಫೇಸರ ನಿಖಿತಾ ದುಬೆ ತೀರ್ಪುಗಾರರಾಗಿದ್ದರು. ಪ್ರೋಫೇಸರ ದೀಪಾ ಜುಮಾನಾಳಕರ ಪುಷ್ಪಗುಚ್ಚ ನೀಡಿ ಗೌರವಿಸಿದರು. ರತಿನಾಯಕ ನಿರ್ವಹಿಸಿದರು. ಸನೋಬರ ಮಾಂಡ್ಲೀಕ ವಂದಿಸಿದರು.
Leave a Comment