• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಚತುಷ್ಪಥ ಕಾಮಗಾರಿ;ನೆಲಸಮವಾಗಲಿರುವ ನೂರಾರು ವರ್ಷಗಳ ಹಿಂದಿನ ಐತಿಹಾಸಿಕ ಕಟ್ಟಡಗಳು

August 24, 2017 by Sachin Hegde Leave a Comment

ಕಾರವಾರ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗೆ ನಗರದಲ್ಲಿರುವ ನೂರಾರು ವರ್ಷಗಳ ಹಿಂದಿನ ಐತಿಹಾಸಿಕ ಕಟ್ಟಡಗಳು ನೆಲಸಮವಾಗಲಿದೆ.
ಬ್ರಿಟಿಷರು 1864ರಲ್ಲಿ ತಮ್ಮ ವ್ಯಾಪಾರಕ್ಕಾಗಿ ಕಾರವಾರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿಕೊಂಡು ನಗರಕ್ಕೆ ರೂಪವನ್ನು ನೀಡಿದ್ದರು. ನಂತರದ 50 ವರ್ಷಗಳ ಅವಧಿಯಲ್ಲಿ ಲೋಕೋಪಯೋಗಿ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿ, ಅಂಚೆ ಕಚೇರಿ, ಶಿಕ್ಷಣ ಇಲಾಖೆಗಳ ಕಚೇರಿಗಳನ್ನು ನಿರ್ಮಾಣ ಮಾಡಿದ್ದರು. ಅಂದು ನಿರ್ಮಿಸಿದ ಆ ಕಟ್ಟಡಗಳು ಈಗಲೂ ಬಲಿಷ್ಠವಾಗಿದ್ದು ಇಲಾಖೆ ಕಚೇರಿಗಳು ಅಲ್ಲಿಯೇ ಕಾರ್ಯ ನಿರ್ವಹಿಸುತ್ತಿವೆ. ಈಗ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಅವುಗಳನ್ನು ಒಡೆಯಲು ಗುರುತು ಹಾಕಲಾಗಿದೆ.
ತೋಡೂರಿನಲ್ಲಿ ಅತಿ ಹೆಚ್ಚು ಖಾಸಗಿ ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕಿದ್ದು ಮನೆಗಳ ಮೌಲ್ಯಮಾಪನ ಆಗಿದೆ. ಚೆಂಡಿಯಾ, ಚಿತ್ತಾಕುಲಾ ಗ್ರಾಮಗಳಲ್ಲಿ ಇನ್ನೂ ಸಾಕಷ್ಟು ಖಾಸಗಿ ಭೂಮಿ ವಶಕ್ಕೆ ಪಡೆಯುವುದು ಬಾಕಿ ಇದೆ. ಅಮದಳ್ಳಿಯಲ್ಲಿ ಬೈಪಾಸ್ ಮೂಲಕ ರಸ್ತೆ ನಿರ್ಮಿಸಲು ಸ್ಥಳೀಯರು ಹಾಗೂ ಶಾಸಕರು ಹೋರಾಟ ನಡೆಸಿದ್ದರಾದರೂ ಒಪ್ಪಿಗೆ ದೊರೆಯದೆ ಸದ್ಯ ಈಗಿರುವ ರಸ್ತೆಯ ಪಕ್ಕದಲ್ಲೇ 45 ಮೀಟರ್ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಬಿಣಗಾದಿಂದ ಕೈಗೊಂಡು ಕಾರವಾರದ ಲಂಡನ್ ಬ್ರಿಜ್‍ನವರೆಗೆ ಸುರಂಗದ ಮೂಲಕ ಚತುಷ್ಪಥ ಕಾಮಗಾರಿ ಮಾಡಲು ಯೋಜನೆ ರೂಪಿಸಲಾಗಿದ್ದು ಸುರಂಗ ನಿರ್ಮಾಣ ಕಾಮಗಾರಿ ಶೇ. 80 ರಷ್ಟು ಪೂರ್ಣಗೊಂಡಿದೆ. ಇನ್ನು ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವ ಕಾರ್ಯ ಬಾಕಿ ಇದೆ ಎಂದು ಐಆರ್‍ಬಿ ಕಂಪನಿ ಮಾಹಿತಿ ನೀಡಿದೆ. ಕಾಳಿ ನದಿಗೆ ನಿರ್ಮಿಸಲಾಗುತ್ತಿರುವ ಮತ್ತೊಂದು ಸೇತುವೆ ಕಾರ್ಯ ಕೂಡ ಮುಕ್ತಾಯ ಹಂತದಲ್ಲಿದೆ. ಇನ್ನು ಗುಡ್ಡಗಳನ್ನು ತೆರವು ಮಾಡುವ ಕಾರ್ಯ ಮಾತ್ರ ಬಂಡೆಗಳಿಂದಾಗಿ ಕಷ್ಟಕರ ಪರಿಸ್ಥಿತಿಯಲ್ಲಿದೆ.
ತಾಲೂಕಿನಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕಾಗಿ 38.35 ಹೆಕ್ಟೇರ್ ಭೂಮಿ ಸ್ವಾಧೀನಕ್ಕೆ 3ಡಿ ನೋಟಿಫಿಕೇಶನ್ ಹೊರಡಿಸಲಾಗಿತ್ತು. ಅದರಲ್ಲಿ 4.3 ಹೆಕ್ಟೇರ್ ಸರಕಾರಿ ಭೂಮಿಯಾಗಿದ್ದು ಉಳಿದವು ಖಾಸಗಿ ಭೂಮಿಯಾಗಿದೆ. ಅದರಲ್ಲಿ ಇದುವರೆಗೆ ಒಟ್ಟು 14.61 ಹೆಕ್ಟೇರ್ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಇನ್ನುಳಿದಂತೆ ಮಾಜಾಳಿಯಲ್ಲಿ 3.57 ಹೆಕ್ಟೇರ್ (0.14 ಹೆ. ಸರಕಾರಿ ಭೂಮಿ), ಚಿತ್ತಾಕುಲಾದಲ್ಲಿ 0.88(0.018), ಕೋಡಿಬಾಗದಲ್ಲಿ 1.24(1.07), ಬಾಡದಲ್ಲಿ ಕಾರವಾರ ನಗರ ಅಂದರೆ ಬಾಡದಲ್ಲಿ 0.70 ಸಂಪೂರ್ಣ ಸರ್ಕಾರಿ ಭೂಮಿ, ಬಿಣಗಾದಲ್ಲಿ 7.61(0.52 ಸರ್ಕಾರಿ ಭೂಮಿ), ಅರಗಾದಲ್ಲಿ 2.41(0.11), ಚೆಂಡಿಯಾದಲ್ಲಿ 7.15(0.01), ತೋಡೂರಿನಲ್ಲಿ 8.50(0.25), ಅಮದಳ್ಳಿಯಲ್ಲಿ 6.23(1.25). ಸ್ವಾಧೀನಕ್ಕೆ ಯೋಜನೆ ರೂಪಿಸಲಾಗಿದೆ. ಖಾಸಗಿ ಭೂಮಿ ಸ್ವಾಧೀನಕ್ಕಾಗಿ ಪರಿಹಾರ ವಿತರಿಸಲು 56 ಕೋಟಿ ರೂ. ಹಣ ಬಿಡುಗಡೆಯಾಗಿದೆ.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News, Karwar News Tagged With: 1864ರಲ್ಲಿ, 38.35, 3ಡಿ, ಅಂಚೆ, ಅಮದಳ್ಳಿಯಲ್ಲಿ, ಇಲಾಖೆ, ಐಆರ್‍ಬಿ, ಐತಿಹಾಸಿಕ, ಕಚೇರಿ, ಕಟ್ಟಡಗಳು, ಕಂಪನಿ, ಕಾಮಗಾರಿ, ಕಾರವಾರದ, ಕ್ರಮ, ಖಾಸಗಿ, ಗ್ರಾಮ, ಚತುಷ್ಪಥ, ಚಿತ್ತಾಕುಲಾ, ಚೆಂಡಿಯಾ, ತಮ್ಮ, ನಿರ್ಮಿಸಲು, ನೂರಾರು, ನೆಲಸಮವಾಗಲಿರುವ, ನೋಟಿಫಿಕೇಶನ್, ಬಲಿಷ್ಠ, ಬಿಣಗಾ, ಬೈಪಾಸ್, ಬ್ರಿಜ್‍, ಬ್ರಿಟಿಷರು, ಭೂಮಿ, ಮೂಲಕ, ರಸ್ತೆ, ರಾಷ್ಟ್ರೀಯ, ಲಂಡನ್, ವರ್ಷಗಳ, ವಶ., ವ್ಯಾಪಾರ, ಶಿಕ್ಷಣ, ಸುರಕ್ಷಾ, ಸ್ವಾಧೀನಕ್ಕೆ, ಹಿಂದಿನ, ಹೆಕ್ಟೇರ್‍, ಹೆದ್ದಾರಿ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,058 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar