ಭಟ್ಕಳ: ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಇಲಾಖೆ, ಭಟ್ಕಳ ಹಾಗೂ ಬೀನಾ ವೈದ್ಯ ಇಂಟರನ್ಯಾಷನಲ್ ಪಬ್ಲಿಕ್ ಸ್ಕೂಲ್ ಇವರ ಸಂಯುಕ್ತ ಆಶ್ರಯದಲ್ಲಿ ಮಾವಳ್ಳಿ ವಲಯ ಮಟ್ಟದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಇಲಾಖಾ ಕ್ರೀಡಾಕೂಟ ಸರಕಾರಿ ಪ್ರೌಢಶಾಲೆ ಬೈಲೂರಿನಲ್ಲಿ ನಡೆಯಿತು.
ಕ್ರೀಡಾ ಕೂಟವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಎಸ್. ಪಟಗಾರ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಲೂರು ಗ್ರಾಮ ಪಂಚಾಂiÀiತ್ ಅಧ್ಯಕ್ಷ ಮಂಜುನಾಥ ಎಂ. ನಾಯ್ಕ ವಹಿಸಿದ್ದರು. ಅತಿಥಿಗಳಾಗಿ ಬೀನಾ ವೈದ್ಯ ಎಜ್ಯುಕೇಶನ್ ಟ್ರಸ್ಟ್ನ ನಿರ್ದೇಶಕಿ ಪುಷ್ಪಲತಾ ಎಮ್. ಎಸ್., ತಾಲೂಕಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್. ಟಿ. ಹೆಗಡೆ, ಪ್ರಾ.ಶಾ.ಶಿ.ಸಂಘದ ಸದಸ್ಯರಾದ ರಫೀಕ, ನಾಗೇಶ ಕಾಮತ್, ಉಮೇಶ ಕೆರೆಕಟ್ಟೆ ಮುಂತಾದವರು ಉಪಸ್ಥಿತರಿದ್ದರು.
ಕ್ರೀಡಾಕೂಟದಲ್ಲಿ ಸ್ವಾಗತಿಸಿದ ಚಂದ್ರೇಶ್ವರ ಆಚಾರ್ಯ ಪ್ರತಿಜ್ಞಾ ವಿಧಿ ಬೋಧಿಸಿದರು. ಹೇಮಾವತಿ ನಾಯ್ಕ ವಂದಿಸಿದರು. ವಿಶ್ವನಾಥ ಆಚಾರ್ಯ ನಿರೂಪಿಸಿದರು.
Leave a Comment