ಕಾರವಾರ:
ನೆಹರು ಯುವ ಕೇಂದ್ರ ಕಾರವಾರ ಇವರು ಸ್ವಚ್ಛ ಸಂಕಲ್ಪದಿಂದ ಸ್ವಚ್ಛ ಸಿದ್ಧಿಯ ಅಂಗವಾಗಿ ಪ್ರಭಂದ ಸ್ಪರ್ಧೆ ಹಾಗೂ ಕಿರು ಚಿತ್ರ ಪ್ರದರ್ಶನ ಸ್ಪರ್ಧೆಯನ್ನು ಸೆಪ್ಟಂಬರ್ 7 ರಂದು ಮದ್ಯಾಹ್ನ 1.30 ಕ್ಕೆ ನಗರದ ದಿವೇಕರ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುತ್ತಾರೆ.
ಪ್ರಬಂಧ ವಿಷಯ “ಸ್ವಚ್ಛತೆಗಾಗಿ ನಾನು ಏನನ್ನು ಮಾಡಬೇಕು” ಎಂದಾಗಿರುತ್ತದೆ. ಮತ್ತು ಕಿರು ಚಿತ್ರದ ವಿಷಯ “ನನ್ನ ದೇಶವನ್ನು ಸ್ವಚ್ಛವಾಗಿಡುವಲ್ಲಿ ನನ್ನ ಪಾತ್ರ” ಎಂದಾಗಿರುತ್ತದೆ. ಕಾಲಾವಕಾಶ 2-3 ನಿಮಿಷ ಮಾತ್ರ ಪ್ರತಿ ಅಭ್ಯರ್ಥಿಯು ಈ ಕಿರು ಚಿತ್ರವನ್ನು ಸ್ವತಃ ನಾನೇ ಮಾಡಿರುವೆನೆಂದು ಧೃಢೀಕರಣ ಪತ್ರ ನೀಡಬೇಕು, ಕಿರು ಚಿತ್ರವನ್ನು ಸಿಡಿ/ಪೆನ್ಡೈವ್ ನಲ್ಲಿ ಹೆಸರನ್ನು ನಮೂದಿಸಿ ನೀಡಬೇಕು. ಸ್ಪರ್ಧಾ ವಿಜೇತರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಹಾಗೂ ಉಳಿದ ಎಲ್ಲಾ ಸ್ಪರ್ಧಾಳುಗಳಿಗೆ ಭಾಗವಹಿಸುವಿಕೆ ಪತ್ರ ನೀಡಲಾಗುತ್ತದೆ.ಜಿಲ್ಲಾ ಮಟ್ಟದ ವಿಜೇತರಾದವರು ರಾಜ್ಯಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದ ವಿಜೇತರು ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಲು ಆಯ್ಕೆಯಾಗುತ್ತಾರೆ. ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ಹೆಸರನ್ನು ಜಿಲ್ಲಾ ಯುವ ಸಮನ್ವಯಾಧಿಕಾರಿ, ನೆಹರು ಯುವ ಕೇಂದ್ರ, ಕಾರವಾರ ಇವರಲ್ಲಿ ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 083822 26965 ಮೋಬೈಲ್ ಸಂಖ್ಯೆ 9449992195 ಸಂಪರ್ಕಿಸಬಹುದಾಗಿದೆ.
Leave a Comment