ಕಾರವಾರ: ಸಾರ್ವಜನಿಕ ಶಿಕ್ಷಣ ಇಲಾಖೆಯು ಕಾರವಾರ ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಪದವೀಧರ ಪ್ರಾಥಮಿಕ ಶಿಕ್ಷಕ (6-8) ವೃಂದದ ಒಟ್ಟು 65 ಹುದ್ದೆಗಳ್ನು (ಗಣಿತ ಮತ್ತು ವಿಜ್ಞಾನ ಕನ್ನಡ ಮಾದ್ಯಮ -20 , ಗಣಿತ ಮತ್ತು ವಿಜ್ಞಾನ ಉರ್ದು ಮಾದ್ಯಮ -11 ಬಾಷೆ ಆಂಗ್ಲ-32 ಹಾಗೂ ಸಮಾಜ ಪಾಠಗಳು ಉರ್ದು ಮಾಧ್ಯಮ -02,) ನೇರ ನೇಮಕಾತಿಗಾಗಿ ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯ ಮುಖಾಂತರವಾಗಿ ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.
ಶಿಕ್ಷಕರ ನೇರ ನೇಮಕಾತಿ ಅಧಿಸೂಚನೆಯನ್ನು ಇಲಾಖಾ ವೆಬ್ ಸೈಟ್ www.schooleducation.kar.nic.in ನಲ್ಲಿ ಒದಗಿಸಲಾಗಿರುವ http://pstr.caconline.in/ ಲಿಂಕ್ ಮೂಲಕ ಅರ್ಜಿಗಳನ್ನು ಆನ್ಲೈನ್ನಲ್ಲಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಸೆಪ್ಟಂಬರ್ 25 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ವಿವರಗಳಿಗಾಗಿ ಇಲಾಖಾ ವೆಬ್ಸೈಟ್ನ್ನು ವಿಕ್ಷಿಸಬಹುದು ಅಥವಾ ಆಯ್ಕೆ ಮತ್ತು ನೇಮಕಾತಿ ಪ್ರಾಧಿಕಾರಿಗಳಾದ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಹಾಗೂ ನೋಡಲ್ ಅಧಿಕಾರಿ(9481478983) ಶಿಕ್ಷಣಾಧಿಕಾರಿ(08382-221345) ಸಂಪರ್ಕಿಸಬಹುದು ಎಂದು ಡಿ.ಡಿ.ಪಿ.ಐ ಪಿ.ಕೆ. ಪ್ರಕಾಶ ತಿಳಿಸಿದ್ದಾರೆ.
Leave a Comment