ಹೊನ್ನಾವರ;
ಬಿಜೆಪಿ ರಾಜ್ಯ ಯುವ ಮೋರ್ಚಾ ಸಂಘಟನೆಯಡಿ ಸೆ, 6 ರಿಂದ ಹಮ್ಮಿಕೊಂಡ ಮಂಗಳೂರು ಚಲೋ ರಥಾಯಾತ್ರೆ ಹುಬ್ಬಳ್ಳಿಯಿಂದ ಹೊರಟು ಸೆ, 6ರಂದು ಉ,ಕ,ಜಿಲ್ಲೆಗೆ ಆಗಮಿಸಲಿದೆ,ಅಂದು 11 ಘಂಟೆಗೆ ಹೊನ್ನಾವರಕ್ಕೆ ತಲುಪಲಿದ್ದು ಇಲ್ಲಿನ ಶರಾವತಿವೃತ್ತದಲ್ಲಿ ಭವ್ಯ ಸ್ವಾಗತ ಏರ್ಪಡಿಸಲಾಗಿದೆಎಂದುಹೊನ್ನಾವರ ಬಿಜೆಪಿ ತಾಲೂಕಾ ಮಂಡಳದ ಅಧ್ಯಕ್ಷ ಸುಬ್ರಯ ನಾಯ್ಕ ಹಾಗೂ ಯುವ ಮೋರ್ಚಾ ಅಧ್ಯಕ್ಷ ದೀಪಕ ಶೇಟ್ ಜಂಟಿಯಾಗಿ ತಿಳಿಸಿದ್ದಾರೆ,
ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು ಸೆ. 7 ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಹೊನ್ನಾವರದಿಂದ ಸುಮಾರು 200ಕ್ಕೂ ಹೆಚ್ಚು ಬೈಕ್ ಸವಾರರು ರಥದೊಂದಿಗೆ ಪಾಲ್ಗೊಳ್ಳಲಿದ್ದಾರೆ. ಇದನ್ನು ಪೋಲಿಸ್ ಇಲಾಖಾ ಅಧಿಕಾರಿಗಳನ್ನು ಬಳಸಿ ಸರಕಾರ ಹತ್ತಿಕ್ಕಲು ಮುಂದಾಗಿ ಪರಿಸ್ಥಿತಿ ಕೈಮೀರುವ ಸಾಧ್ಯತೆಗಳಿದ್ದು ಇದಕ್ಕೆ ಸರಕಾರ ಅವಕಾಶ ಕೊಡಬಾರದು.
ಸಿದ್ದರಾಮಯ್ಯನವರ ಸರಕಾರ ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದ ದಿನದಿಂದಲೂ ಈವರೆಗೆ ಆರ್.ಎಸ್.ಎಸ್ ಕಾರ್ಯಕರ್ತರ, ಹಿಂದೂ ಮುಖಂಡರ ಸರಣಿ ಹತ್ಯೆಗಳು ನಡೆದಿವೆ. ಈ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಬೇಕು. ಮಂಗಳೂರಿನಲ್ಲಿ ಈ ಎಲ್ಲಾ ಕೃತ್ಯಗಳಿಗೆ ಕಾರಣವಾದ ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸಬೇಕು. ಅಲ್ಲದೇ ಕೋಮು ಪ್ರಚೋದನೆ ನೀಡುತ್ತಿರುವ ಸಚಿವ ರಮಾನಾಥ ರೈ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಆಗ್ರಹಿಸಲಿರುವುದಾಗಿ ಅವರು ಹೇಳಿದ್ದಾರೆ.
ಪಕ್ಷದ ಪ್ರಮುಖರಾದ ವೆಂಕಟ್ರಮಣ ಹೆಗಡೆ, ಉಮೇಶ ನಾಯ್ಕ, ಮಂಜುನಾಥ ನಾಯ್ಕ, ಗಣಪತಿ ಗೌಡ ಚಿತ್ತಾರ, ವಿನಾಯಕ ಆಚಾರಿ, ವಿಘ್ನೇಶ್ವರ ಹೆಗಡೆ, ಚಿದಂಬರ ನಾಯ್ಕ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
Leave a Comment