• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಗೌರಿ ಲಂಕೇಶ ಕೊಲೆ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ;ಮುಖ್ಯಮಂತ್ರಿಗಳಿಗೆ ಮನವಿ

September 6, 2017 by Gaju Gokarna Leave a Comment

ಹೊನ್ನಾವರ:

ಪ್ರಗತಿಪರ ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ ಕೊಲೆ ಆರೋಪಿಯನ್ನು ತಕ್ಷಣ ಬಂಧಿಸಿ, ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಬುಧವಾರ ತಾಲೂಕಾ ಪತ್ರಕರ್ತರ ಸಂಘದ ವತಿಯಿಂದ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಜನಪರ ಚಳುವಳಿಗೆ, ಪ್ರಗತಿಪರ ಚಿಂತನೆಗಳಿಗೆ, ಮಾನವೀಯ ಮೌಲ್ಯಗಳಿಗೆ ತಮ್ಮ ಲೇಖನಿಯ ಮೂಲಕ ಧ್ವನಿ ನೀಡಿದ, ಹೋರಾಟಕ್ಕೆ ಕಾವು ನೀಡಿದ, ಸರಳ, ಸಜ್ಜನಿಕೆಯ, ಮಾನವೀಯ ಸಂವೇದನಿಯ, ಗೌರಿ ಲಂಕೇಶ ಅವರ ಕೊಲೆ ಮಾನವ ಜನಾಂಗವೇ ತಲೆ ತಗ್ಗಿಸುವ ಹೇಯ ಕೃತ್ಯ. ತನ್ನ ಚಿಂತನೆಯ ಮೂಲಕ ಜನತೆಯನ್ನು ಮೌಢ್ಯದ ವಿರುದ್ಧ, ಕೋಮುವಾದದ ವಿರುದ್ಧ, ಹಿಂಸೆಯ ವಿರುದ್ಧ, ಶೋಷಣೆಯ ವಿರುದ್ಧ ಅಣಿಗೊಳಿಸುತ್ತಾ ಮಾನವೀಯ ಮೌಲ್ಯವನ್ನು ಅವರು ಎತ್ತಿ ಹಿಡಿಯುವ ಪರಿಯನ್ನು ಸಹಿಸದ ದುಷ್ಟ ಶಕ್ತಿಗಳು ಮತ್ತು ಸಂಘಟನೆಗಳು ಅವರನ್ನು ಅಮಾನುಷವಾಗಿ, ಹೇಡಿಗಳಂತೆ ಕೊಂದಿರುವುದು ಅವಮಾನದ ವಿಷಯ. ಮತಾಂಧಶಕ್ತಿಗಳ ವಿರುದ್ಧ ಸತತ ಹೋರಾಟ ನಡೆಸಿದ ಅವರು ಈದ್ಗಾ ವಿವಾಧ, ಲವ್‍ಜಿಹಾದಿ, ನೈತಿಕ ಪೋಲೀಸ್‍ಗಿರಿ, ಮಂಗಳೂರು ಚರ್ಚ್ ಮೇಲಿನ ದಾಳಿ, ನಕ್ಸಲೈಟ್ ಸಮಸ್ಯೆಗಳ ಕುರಿತು ತನ್ನದೇ ಆದ ಧ್ಯೇಯ ಧೋರಣೆಯಿಂದ ಮೂಲಭೂತ ವಾದಿಗಳ ಕೋಪಗಳಿಗೆ ತುತ್ತಾಗಿಯೂ, ಸಮಾಜದ ಮಾನವೀಯ ಮೌಲ್ಯಗಳಿಗೆ ಜೀವ ತುಂಬಲು ಪ್ರಯತ್ನಿಸಿದವರು. ರಾಜ್ಯ ಸರ್ಕಾರವು ತಕ್ಷಣ ಗೌರಿ ಲಂಕೇಶ ಅವರ ಕೊಲೆಗೆ ಕಾರಣರಾದ ವ್ಯಕ್ತಿಗಳನ್ನು ಬಂಧಿಸಿ, ಈ ಹತ್ಯೆಯಲ್ಲಿ ಪಾಲ್ಗೊಂಡ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಸುಬ್ರಹ್ಮಣ್ಯ, ಕಾರ್ಯದರ್ಶಿ ಸತೀಶ ತಾಂಡೇಲ, ಪತ್ರಕರ್ತರಾದ ಕೃಷ್ಣಮೂರ್ತಿ ಭಟ್, ದಿನೇಶ ಹೆಗಡೆ, ಎಚ್.ಎಂ.ಮಾರುತಿ, ಸುಧೀರ ಕಡ್ನೀರ, ಗೋಪಾಲಕೃಷ್ಣ ಭಟ್, ಗಜು ಗೋಕರ್ಣ, ಮುರಳಿಧರ ಗಾಯತೊಂಡೆ ಇತರರು ಉಪಸ್ಥಿತರಿದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Honavar News Tagged With: ಅಧ್ಯಕ್ಷ ಎಂ.ಎನ್. ಸುಬ್ರಹ್ಮಣ್ಯ, ಆಗ್ರಹಿಸಿ, ಆರೋಪಿ, ಈದ್ಗಾ ವಿವಾಧ, ಎಚ್.ಎಂ.ಮಾರುತಿ, ಎಂದು, ಕಾರ್ಯದರ್ಶಿ ಸತೀಶ ತಾಂಡೇಲ, ಕೈಗೊಳ್ಳಬೇಕು, ಕೊಲೆ, ಕ್ರಮ, ಗಜು ಗೋಕರ್ಣ, ಗೋಪಾಲಕೃಷ್ಣ ಭಟ್, ಗೌರಿ ಲಂಕೇಶ, ಜನಪರ ಚಳುವಳಿಗೆ, ದಿನೇಶ ಹೆಗಡೆ, ನಕ್ಸಲೈಟ್ ಸಮಸ್ಯೆ, ನೈತಿಕ ಪೋಲೀಸ್‍ಗಿರಿ, ಪತ್ರಕರ್ತರ ಸಂಘದ, ಪತ್ರಕರ್ತರಾದ ಕೃಷ್ಣಮೂರ್ತಿ ಭಟ್, ಪ್ರಗತಿಪರ ಚಿಂತನೆಗಳಿಗೆ, ಬಂಧಿಸಿ, ಮಂಗಳೂರು ಚರ್ಚ್ ಮೇಲಿನ ದಾಳಿ, ಮನವಿ, ಮಾನವೀಯ ಮೌಲ್ಯಗಳಿಗೆ ತಮ್ಮ ಲೇಖನಿಯ ಮೂಲಕ ಧ್ವನಿ ನೀಡಿದ, ಮಾನವೀಯ ಸಂವೇದನಿಯ, ಮುಖ್ಯಮಂತ್ರಿಗಳಿಗೆ, ಮುರಳಿಧರ ಗಾಯತೊಂಡೆ, ಲವ್‍ಜಿಹಾದಿ, ಸಜ್ಜನಿಕೆಯ, ಸರಳ, ಸುಧೀರ ಕಡ್ನೀರ, ಹೋರಾಟಕ್ಕೆ ಕಾವು ನೀಡಿದ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar