• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮನೆಯಂಗಳದಲ್ಲಿ ಕೈ ತೋಟ ; ಇಲಾಖೆಯಿಂದ ಪ್ರೋತ್ಸಾಹ ಯೋಜನೆ

September 11, 2017 by Sachin Hegde Leave a Comment

ಕಾರವಾರ:

ತೋಟಗಾರಿಕೆ ನಡೆಸಲು ಆಸಕ್ತಿ ಇದ್ದರೂ ಜಾಗದ ಸಮಸ್ಯೆಯಿಂದ ಕೃಷಿ ಕಾರ್ಯದಿಂದ ದೂರ ಇರುವ ನಗರ ಪ್ರದೇಶದ ಜನರಿಗೆ ತಮ್ಮ ಮನೆಯ ಅಂಗಳದಲ್ಲಿ ಕೈತೋಟ ಹಾಗೂ ಛಾವಣಿಯ ಮೇಲೆ ತಾರಸಿ ತೋಟ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆಯು ಪ್ರೋತ್ಸಾಹ ನೀಡುವ ಯೋಜನೆಯೊಂದನ್ನು ಸಿದ್ಧ ಪಡಿಸಿದೆ. ತಮಗೆ ಅಗತ್ಯ ಇರುವ ರಾಸಾಯನಿಕ ರಹಿತ ಹಣ್ಣು ಹಾಗೂ ತರಕಾರಿಗಳನ್ನು ಜನರು ತಾವೇ ಬೆಳೆದುಕೊಳ್ಳುವಂತೆ ಇಲಾಖೆಯು ಸಹಕಾರ ನೀಡಲಿದೆ.
ರಾಜ್ಯ ಸರಕಾರವು 2017-18ನೇ ಸಾಲಿನ ಬಜೆಟ್‍ನಲ್ಲಿ ಘೋಷಿಸಿರುವ ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆ ಅಡಿಯಲ್ಲಿ ನಗರದಲ್ಲಿ ವಾಸಿಸುವ ಜನರಿಗೆ ಈ ಯೋಜನೆಯ ಉಪಯೋಗ ಲಭಿಸಲಿದೆ. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಈ ಯೋಜನೆಯು ಜಾರಿಯಾಗುತ್ತಿದ್ದು ಪ್ರಾರಂಭದ ಹಂತವಾಗಿ ಕಾರವಾರ, ಸಿದ್ದಾಪುರ ಹಾಗೂ ಯಲ್ಲಾಪುರದ ನಗರವಾಸಿಗಳಿಗೆ ಯೋಜನೆಯ ಲಾಭ ದೊರೆಯಲಿದೆ. ಆಯ್ಕೆಯಾದ ಫಲಾನುಭವಿಗಳಿಗೆ ತರಬೇತಿ ನೀಡುವುದರೊಂದಿಗೆ ಅಗತ್ಯ ಪರಿಕರಗಳನ್ನು ಒದಗಿಸಿ ತಮ್ಮ ಆಹಾರ ತಾವೇ ತಯಾರಿಸಿಕೊಳ್ಳುವುದರ ಜೊತೆಗೆ ಪರಿಸರ ರಕ್ಷಣೆಯ ಜಾಗೃತಿ ಮೂಡಿಸಲಿದೆ.
ಮೊದಲಿನಿಂದಲೂ ತೋಟಗಾರಿಕೆ ಮಾಡುವುದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿತ್ತು. ಆದರೆ ಕಾಲ ಕ್ರಮೇಣ ವಿವಿಧ ಕಾರಣಗಳಿಂದ ಜನರು ಅದರಿಂದ ಹಿಂದೆ ಸರಿಯುತ್ತ ಬಂದರು. ಅಲ್ಲದೆ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತಿದ್ದ ರಾಸಾಯನಿಕಯುಕ್ತ ತರಕಾರಿ, ಹಣ್ಣು, ಇತರ ಬೆಳೆಗಳಿಗೆ ಮಾರುಹೋಗಲಾರಂಭಿಸಿದರು. ಆದರೆ ಇದು ವಿವಿಧ ರೀತಿಯ ಕಾಯಿಲೆಗಳಾದ ರಕ್ತದೊತ್ತಡ, ಹೃದಯ ಸಂಬಂಧಿ ತೊಂದರೆÀಗಳಿಗೆ ಕಾರಣವಾಗತೊಡಗಿದೆ. ಆದ್ದರಿಂದ ಈ ಎಲ್ಲ ಸಮಸ್ಯೆಗಳಿಂದ ಮುಕ್ತಿ ಹೊಂದಲು ಸಾವಯವ ಪದ್ಧತಿಗೆ ಸಹಕಾರ ನೀಡುವ ಮೂಲಕ ಪರಿಸರ ಕಾಳಜಿ, ಪೌಷ್ಠಿಕ ಆಹಾರ, ದೈಹಿಕ ಹಾಗೂ ಮಾನಸಿಕ ಆರೋಗ್ಯ, ನೀರು, ತ್ಯಾಜ್ಯ, ಕಸ-ಕಡ್ಡಿಗಳ ಬಳಕೆಯ ಕುರಿತು ಮಾಹಿತಿಯನ್ನು ಯೋಜನೆಯಲ್ಲಿ ಒದಗಿಸಲಾಗುವುದು.
ತಾರಸಿ ತೋಟದ ಫಲಾನುಭವಿಗಳಿಗೆ 2 ಸಾವಿರ ಮೌಲ್ಯದ 10 ಕೆ.ಜಿ. ಬಯೋಮಿಕ್ಸ್, ಕುಂಡ ಅಥವಾ ಟ್ರೇ ಸೇರಿದಂತೆ ಇನ್ನಿತರ ಸಲಕರಣಗಳಿರುವ ಕಿಟ್ ವಿತರಿಸಲಾಗುತ್ತದೆ. ಜತೆಗೆ ಕೈತೋಟ ಹಾಗೂ ತಾರಸಿ ತೋಟದ ಫಲಾನುಭವಿಗಳಿಗೆ 750 ರೂ ಮೌಲ್ಯದ ತರಕಾರಿ ಬೀಜ, ಸಸಿಗಳನ್ನು ತರಬೇತಿ ಸಮಯದಲ್ಲಿ ವಿತರಣೆ ಮಾಡಲಾಗುತ್ತದೆ. ಒಂದೊಮ್ಮೆ ಹೆಚ್ಚಿನ ಪರಿಕರಗಳು ಬೇಕಾದಲ್ಲಿ ಇಲಾಖೆ ಆಯ್ಕೆ ಮಾಡಿದ ಸಂಸ್ಥೆಗಳಿಂದ ಕಡಿಮೆ ಬೆಲೆ ನೀಡಿ ಫಲಾನುಭವಿಗಳು ತಮ್ಮ ಸ್ವಂತ ಖರ್ಚಿನಲ್ಲಿಯೇ ಪಡೆಯಬಹುದಾಗಿದೆ. ಒಟ್ಟಿನಲ್ಲಿ ಇಷ್ಟು ದಿನ ವಿಷಯುಕ್ತ ಹಣ್ಣು, ತರಕಾರಿ ಇತರೆÀ ಬೆಳೆಗಳನ್ನು ತಿಂದು ಹಣದ ಜತೆಗೆ ಉತ್ತಮ ಆರೋಗ್ಯವನ್ನು ಕಳೆದುಕೊಂಡಿರುವವರಿಗೆ ತೋಟಗಾರಿಕೆ ಇಲಾಖೆಯ ಈ ಹೊಸ ಯೋಜನೆಯಿಂದ ಸಹಾಯವಾಗಲಿದೆ. ಮನೆಯಲ್ಲಿ ಖಾಲಿ ಇರುವ ಬದಲು ಸ್ವಲ್ಪ ಸಮಯವನ್ನು ಮೀಸಲಿಟ್ಟು ದಿನಕ್ಕೊಮ್ಮೆ ಗಮನ ಹರಿಸಿದರು ಉತ್ತಮ ಪರಿಸರ, ಸೌಂದರ್ಯದ ಜೊತೆಗೆ ಆರೋಗ್ಯಕರ ಬೆಳೆಗಳನ್ನು ಬೆಳೆಯಲು ಇದು ಸಹಕಾರಿಯಾಗಿದೆ.
ಪ್ರಸ್ತುತ ಯೋಜನೆಯನ್ನು ಸರಕಾರ ಘೋಷಣೆ ಮಾಡಿ, ಜಿಲ್ಲೆಯ ತೋಟಗಾರಿಕಾ ಇಲಾಖೆಗಳಿಗೆ ಸುತ್ತೋಲೆ ಕಳುಹಿಸಿದೆಯಾದರೂ, ಅನುದಾನ ಬಿಡುಗಡೆಯಾಗಿಲ್ಲ. ಯೋಜನೆಯಲ್ಲಿ ಜಿಲ್ಲೆಯ ಮೂರು ತಾಲೂಕುಗಳ ನಗರ ಹಾಗೂ ಪಟ್ಟಣಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆದರೆ ಸದ್ಯ ಮಳೆಗಾಲವಿರುವುದರಿಂದ ಜಿಲ್ಲೆಯಲ್ಲಿ ತೋಟಗಾರಿಕ ಬೆಳೆಗಳನ್ನು ಬೆಳೆಯಲು ಸಾಧ್ಯವಿಲ್ಲ. ಆದ್ದರಿಂದ ಅನುದಾನ ಬಂದ ಬಳಿಕವೇ ಯೋಜನೆಯ ಲಾಭ ಜನರಿಗೆ ದೊರೆಯಲಿದೆ.

****************

ಫಲಾನುಭವಿಗಳ ಆಯ್ಕೆ:
ಕೈತೋಟ ಇಲ್ಲವೇ ತಾರಸಿ ತೋಟದ ಫಲಾನುಭವಿಗಳಾಗುವವರು ಸ್ವಂತ ಮನೆಯನ್ನು ಹೊಂದಿರಬೇಕಾದುದು ಕಡ್ಡಾಯವಾಗಿದೆ. ಇದಕ್ಕೆ ದಾಖಲೆಯಾಗಿ ಮನೆಯ ಯಜಮಾನರ ಎರಡು ಭಾವಚಿತ್ರಗಳು, ವಿದ್ಯುತ್ ಪಾವತಿಸಿದ ಬಿಲ್ ಹಾಗೂ ಮನೆಕರದ ಪಾವತಿ ನೀಡಬೇಕು. ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಒಳ್ಳೆಯ ಜಾಗವಿದ್ದಲ್ಲಿ ಅಲ್ಲಿ ಕೈತೋಟ ನಿರ್ಮಿಸಲು ಒಟ್ಟು 100 ಜನರಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಇದರ ಹೊರತಾಗಿ ಜಾಗವೇ ಇಲ್ಲದಿರುವವವರಿಗೆ ಮನೆಯ ಛಾವಣಿ ಮೇಲೆ ಹೂ, ಹಣ್ಣು, ತರಕಾರಿಗಳನ್ನು ಬೆಳೆಯಲು ಇಚ್ಚಿಸುವ ಒಟ್ಟು 200 ಮಂದಿಗೆ ತಾರಸಿತೋಟದ ಕಿಟ್ ವಿತರಿಸಲಾಗುತ್ತದೆ. ಹೀಗೆ ಜಾಗದ ಲಭ್ಯತೆ ಆಧಾರದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡಿದ ಬಳಿಕ ಅವರಿಗೆ ಒಂದು ದಿನದ ಅಗತ್ಯ ತರಬೇತಿಯನ್ನು ಕೂಡ ನೀಡಲಾಗುತ್ತದೆ.

******************** ಕೋಟ್

ಕೈತೋಟ ಅಥವಾ ತಾರಸಿ ತೋಟಗಳ ಮೂಲಕ ಅವಶ್ಯವಿರುವ ಬೆಳೆಗಳನ್ನು ಬೆಳೆಯಲು ಸರಕಾರ ಪ್ರೋತ್ಸಾಹ ನೀಡಲು ಮುಂದಾಗಿದೆ. ಈಗಾಗಲೇ ಜಿಲ್ಲೆಗೆ ಯೋಜನೆ ಘೋಷಣೆಯಾಗಿದ್ದು, ಅನುದಾನ ಬಿಡುಗೆಯಾಗುವುದು ಬಾಕಿ ಇದೆ. ಇನ್ನೆರಡು ತಿಂಗಳಿನಲ್ಲಿ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ.
-ದಯಾನಂದ, ಸಹಾಯಕ ತೋಟಗಾರಿಕೆ ಇಲಾಖೆ ಅಧಿಕಾರಿ,ಕಾರವಾರ

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News, Karwar News Tagged With: ಇಲಾಖೆಯಿಂದ ಪ್ರೋತ್ಸಾಹ, ಕಾರವಾರ, ಕೈತೋಟ ಹಾಗೂ ಛಾವಣಿಯ, ಘೋಷಿಸಿರುವ ಸಮಗ್ರ ತೋಟಗಾರಿಕಾ ಅಭಿವೃದ್ಧಿ, ಜಾಗದ ಸಮಸ್ಯೆಯಿಂದ ಕೃಷಿ ಕಾರ್ಯ, ಪ್ರದೇಶದ ಜನರಿಗೆ, ಭಾವಚಿತ್ರಗಳು, ಮನೆಯಂಗಳದಲ್ಲಿ ಕೈ ತೋಟ, ಮೇಲೆ ತಾರಸಿ ತೋಟ, ಯೋಜನೆ, ರಾಸಾಯನಿಕ ರಹಿತ ಹಣ್ಣು ಹಾಗೂ ತರಕಾರಿ, ವಿದ್ಯುತ್ ಪಾವತಿಸಿದ ಬಿಲ್ ಹಾಗೂ ಮನೆಕರ, ಸಾಲಿನ ಬಜೆಟ್‍, ಸಿದ್ದಾಪುರ ಹಾಗೂ ಯಲ್ಲಾಪುರ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,059 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar