ಕಾರವಾರ: ಆದರ್ಶ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುವಲ್ಲಿ ಗುರುಗಳ ಪಾತ್ರ ಅಮೂಲ್ಯವಾದದ್ದು ಎಂದು ಲಯನ್ಸ ಕ್ಲಬ್ ಅಧ್ಯಕ್ಷ ಅಲ್ತಾಫ್ ಶೇಖ್ ಹೇಳಿದರು.
ಲಯನ್ಸ ಕ್ಲಬ್ನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಅಭಿವೃದ್ದಿಗೆ ಉತ್ತಮ ಪ್ರಜೆಗಳ ಅವಷ್ಯಕತೆ ಇದ್ದು, ಶಿಕ್ಷಕರ ಮೂಲಕ ನಾಡಿಗೆ ಯೋಗ್ಯ ವ್ಯಕ್ತಿಗಳು ಹೊರ ಹೊಮ್ಮುತ್ತಿದ್ದಾರೆ. ಶಿಕ್ಷಕರು ಆದರ್ಶ ವ್ಯಕ್ತಿತ್ವವನ್ನು ಹೊಂದಿದಲ್ಲಿ ಅದನ್ನು ವಿದ್ಯಾರ್ಥಿಗಳು ಅನುಕರಿಸುತ್ತಾರೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಆದರ್ಶ ಶಿಕ್ಷಕರಾದ ಕಮಲಾ ಎಲ್ ಭಟ್ಟ, ಸತವಪ್ಪಾ ದೇಸಾಯಿ ಹಾಗೂ ಸಯ್ಯದ ಅಹಮದ್ರನ್ನು ಗೌರವಿಸಲಾಯಿತು.
ಲಯನ್ಸ ಪ್ರಮುಖರಾದ ಗಜಾನನ ಆಳ್ವಾ, ರಸಲ್ ಪಿಂಟೋ, ಡಿ.ಪಿ ಮಂತ್ರಿ, ಕೆ.ಎಸ್. ಕಿನ್ನರಕರ, ಅನಿರುದ್ದ ಹಳದಿಪುರಕರ, ಎಲ್.ಎಂ ಪ್ರಭು, ಪ್ರೀತಂ ಮಾಸೂರಕರ್, ಶಶಿನಂದ ಮಸೂರಕರ್, ಐಶ್ವರ್ಯ ಮಸೂರಕರ್, ಪಿ.ಎಸ್ ಭಟ್ಟ, ಹನೀಫ್ ಮುಲ್ಲಾ, ಶಿವಾನಂದ ಶೆಟ್ಟಿ, ಮಂಜುನಾಥ ಪವಾರ್, ವಿನೋದ ನಾಯ್ಕ, ಪಿ.ವಿ ಪ್ರಾಜೀತ್, ಇಮ್ತಿಯಾಜ ಬುಕಾರಿ ಇದ್ದರು.
Leave a Comment