ಕಾರವಾರ: ಸಿಪ್ಲಾ ಗೋವಾ ಹಾಗೂ ಲಾಯನ್ಸ್ ಕ್ಲಬ್ ಸಹಯೋಗದಲ್ಲಿ ಸೆ.17ರಂದು ನಗರದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಲಾಯನ್ಸ್ ಕ್ಲಬ್ ಅಧ್ಯಕ್ಷ ಅಲ್ತಾಫ್ ಶೇಖ್ ಹೇಳಿದರು.
ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಹಿಂದೂ ಹೈಸ್ಕೂಲ್ ಆವರಣದಲ್ಲಿ ಬೆಳಿಗ್ಗೆ 9.30ರಿಂದ ಸಂಜೆ 4 ಗಂಟೆಯವರೆಗೆ ಗೋವಾದ ಹೆಸರಾಂತ ಔಷಧೀಯ ಕಂಪನಿಯಲ್ಲಿನ ಹುದ್ದೆಗಳ ಭರ್ತಿಗೆ ಈ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಸ್ಕಿಲ್ ಡೆವಲಪ್ಮೆಂಟ್ ಕಾರ್ಯಕ್ರಮದ ಅಡಿಯಲ್ಲಿ 100 ಜನ ಅಬ್ಯರ್ಥಿಗಳನ್ನು ಆಯ್ಕೆ ಆಡಲಾಗುವುದು. ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ 18 ರಿಂದ 25ವಷ್ದೊಳಗಿನ ಅಭ್ಯರ್ಥಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳು ಗೋವಾದಲ್ಲಿ ಉದ್ಯೋಗ ಮಾಡಬೇಕಿದ್ದು ಮಾಸಿಕ ವೇತನ ಮೊದಲ ವರ್ಷ 8500ರೂ. ಹಾಗೂ ಎರಡನೇ ವರ್ಷ 9000ರೂ. ಇರುತ್ತದೆ ಎಂದು ತಿಳಿಸಿದರು.
ಇಲೆಕ್ಟ್ರಿಕಲ್, ಮೆಕ್ಯಾನಿಕಲ್, ಫಾರ್ಮಾಸಿ ವಿಭಾಗದಲ್ಲಿ ಡಿಪ್ಲೋಮಾ ಅಧ್ಯಯನ ಮಾಡಿದ 50 ಅಬ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಈ ಮೊದಲು 1 ರಿಂದ 3 ವರ್ಷ ಫಾರ್ಮಾಸಿ ಕಂಪನಿಯಲ್ಲಿ ಅನುಭವ ಹೊಂದಿದ ಅಬ್ಯರ್ಥಿಗಳಿಗೆ ಮೊದಲ ಆದ್ಯತೆ ನಿಡಲಾಗುತ್ತದೆ. ಮಾಸಿಕ ವೇತನವನ್ನು ಅವರ ಅನುಭವವನ್ನು ಪರಿಗಣಿಸಿ ನೀಡಲಾಗುವುದು. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಬ್ಯರ್ಥಿಗಳು ಎಸ್.ಎಸ್.ಎಲ್.ಸಿ. ಹಾಗೂ ಡಿಪ್ಲೋಮಾ ಉತ್ತೀರ್ಣರಾದ ಅಂಕ ಪಟ್ಟಿಯ ಮೂಲ ಪ್ರತಿಯೊಂದಿಗೆ ಫೋಟೋ ಪ್ರತಿ ತರಬೇಕು. ಅನುಭವ ಸೂಚಿಸುವ ಪ್ರಮಾಣ ಪತ್ರ ಹಾಗೂ ಫೊಟೋ ಪ್ರತಿ ತರತಕ್ಕದ್ದು. ಅಬ್ಯರ್ಥಿಗಳನ್ನು ಸ್ಥಳದಲ್ಲಿಯೇ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಈ ಉದ್ಯೋಗ ಮೇಳದಲ್ಲಿ ಯಾರು ಬೇಕಾದರೂ ಪಾಲ್ಗೊಳ್ಳಬಹುದಾಗಿದ್ದು ನಿರುದ್ಯೋಗಿ ಯುವಕರು ಇದರ ಲಾಭ ಪಡೆಯಬೇಕು ಎಂದು ತಿಳಿಸಿದ್ದಾರೆ. ಇ ಸಂದರ್ಭದಲ್ಲಿ ಲಾಯನ್ಸ್ ಕ್ಲಬ್ ಅಧ್ಯಕ್ಷ ಲಾ. ಇಬ್ರಾಹಿಂ ಕಲ್ಲೂರ, ಎಂ.ಜೆ.ಎಫ್. ಲಾ. ವಿನೋದ ನಾಯ್ಕ, ಲಾ.ಗಜಾನನ ಆಳ್ವ, ಲಾ.ಶಶಿನಂದನ್ ಮಸೂರಕರ್, ಲಾ.ಸಾಧಿಕ್ ಖಾನ್ ಇದ್ದರು.
Leave a Comment