ಸೂರ್ಯನ ಕೆಳಗೆ ಎಲ್ಲಾ ಜೀವ ಸಂಕುಲವನ್ನು ರಕ್ಷಿಸುವ ಓಝೋನ್ ಪದರವು ಜಾಗತಿಕತೆಯ ಪ್ರಭಾವದಿಂದ ಇಂದು ವಿನಾಶದ ಅಂಚಿನಲ್ಲಿದೆ. ಹಾನಿಕಾರಕ ನೇರಳಾತೀತ ವಿಕಿರಣದಿಂದ ಭೂಮಿಯನ್ನು ರಕ್ಷಿಸುವ ರಕ್ಷಣಾ ಕವಚ ಓಝೋನ್ ಪದರವನ್ನು ರಕ್ಷಿಸುವ ಪ್ರಮುಖವಾದ ಸಂದೇಶವನ್ನು ಅರಿಸುವ ಉದ್ದೇಶದಿಂದ ಸೆಪ್ಟೆಂಬರ್ 16 ಓಝೋನ್ ದಿನವನ್ನಾಗಿ ಆಚಿರಿಸಲಾಗುತ್ತದೆ.
ಸ್ಥಳೀಯ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ ಓಝೋನ್ ದಿನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ವೈಶಿಷ್ಠ್ಯಪೂರಕವಾಗಿ ತಿಳಿಸುವುದರ ಮೂಲಕ ವಿದ್ಯಾರ್ಥಿಗಳು ಓಝೋನ್ ಪದರದ ರಕ್ಷಣೆಯ ಘೋಷಣೆಯನ್ನು ಓಝೋನ್ನ ಅಣುಸೂತ್ರದ ಮಾದರಿಯಲ್ಲಿ ನಿಂತು ಪ್ರಮಾಣೀಕರಿಸಿದರು. ವಿಜ್ಞಾನ ಮತ್ತು ಭೂಗೋಳ ಸಂಘದ ಆಶ್ರಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Leave a Comment