ಕಾರವಾರ:
ಗೋವಾದ ಸಿಪ್ಲಾ ಔಷಧ ಕಂಪೆನಿಯ ವಿವಿಧ ಹುದ್ದೆಗಳ ಭರ್ತಿಗೆ ನಗರದ ಹಿಂದು ಹೈಸ್ಕೂಲನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ 91 ಜನರು ಆಯ್ಕೆಯಾಗಿದ್ದಾರೆ.
ಗೋವಾದ ಸಿಪ್ಲಾ ಕಂಪೆನಿ ಹಾಗೂ ಲಾಯನ್ಸ್ ಕ್ಲಬ್ ಸಹಯೋಗದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಜಿಲ್ಲೆಯಿಂದ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದ ಸುಮಾರು 381 ಜನರು ಭಾಗವಹಿಸಿದ್ದರು. ಕಂಪೆನಿಗೆ ಅವಶ್ಯವಿದ್ದ 100 ಅಭ್ಯರ್ಥಿಗಳಲ್ಲಿ 91 ಜನರು ಆಯ್ಕೆಯಾಗಿದ್ದು, ಅದರಲ್ಲಿ 47 ಪುರುಷರು ಹಾಗೂ 44 ಮಹಿಳೆಯರು ಸೇರಿದ್ದಾರೆ. ಇದರಲ್ಲಿ ಐವರನ್ನು ಡಾಟಾ ಎಂಟ್ರಿ ಆಫರೇಟರ್ಗಳಾಗಿ ಆಯ್ಕೆ ಮಾಡಲಾಗಿದೆ. ಉದ್ಯೋಗ ಮೇಳದಲ್ಲಿ ಆಯ್ಕೆಯಾದವರನ್ನು ಕೂಡಲೇ ಕಂಪೆನಿಗೆ ಸೇರಿಸಿಕೊಳ್ಳಲಾಗುವುದು ಎಂದು ಲಾಯನ್ಸ್ ಕ್ಲಬ್ ಶಶಿನಂದನ್ ಮಸೂರಕರ್ ತಿಳಿಸಿದರು.
Leave a Comment