ಹೊನ್ನಾವರ
ತಾಲೂಕಿನಲ್ಲಿ ಮನೆಮನೆಗೆ ಕಾಂಗ್ರೆಸ್ ಅಭಿಯಾನ ನಡೆಯಲಿದ್ದು ರಾಜ್ಯ ಕಾಂಗ್ರೆಸ್ ಸರಕಾರದ ಸಾಧನೆಯ ಕಿರುಹೊತ್ತಿಗೆಯನ್ನು ಪ್ರತಿ ಮನೆಗೆ ತಲುಪಿಸಿ ಯಶಸ್ವೀ ಗೊಳಿಸಲಾಗುವುದು ಎಂದು ಮಂಕಿಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ ತಿಳಿಸಿದರು.
ಪಟ್ಟಣದ ಸಾಗರ ರೆಸಿಡೆನ್ಸಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಪ್ಟಂಬರ್ 23 ರಮದು ಬೆಳಿಗ್ಗೆ 10 ಗಂಟೆಗೆ ಭಟ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊನ್ನಾವರ ತಾಲೂಕಿನ ಹೊಸಾಡ ಬೂತ್ದಲ್ಲಿ ಶಾಸಕ ಮಂಕಾಳ ವೈದ್ಯ, ಕೆಪಿಸಿಸಿ ಸದಸ್ಯ ಉಪಸ್ಥಿತಿಯಲ್ಲಿ ಅಭಿಯಾನದ ಉದ್ಘಾಟನೆ ನಡೆಯಲಿದೆ ಎಂದು ತಿಳಿಸಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಮನೆಮನೆಗೆ ಕಾಂಗ್ರೆಸ್ ಅಭಿಯಾನವನ್ನು ಪ್ರತಿ ಹಂತದಲ್ಲೂ ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕೆಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಪಕ್ಷದ ಎಲ್ಲ ಪದಾಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಈ ನಿಟ್ಟಿನಲ್ಲಿ ಅಭಿಯಾನವನ್ನು ಉಶಸ್ವೀಗೊಳಿಸಲು ಕ್ಷೇತ್ರ ವ್ಯಾಪ್ತಿಯ ಹೊನ್ನಾವರ ತಾಲೂಕಿನಲ್ಲಿ 50 ಮುಖಂಡರಿಗೆ ಎರಡು ಮೂರು ಬೂತ್ಗಳ ಜವಾಬ್ದಾರಿ ವಹಿಸಲಾಗಿದೆ. ಕೆಪಿಸಿಸಿ, ಡಿಸಿಸಿ ಮತ್ತು ಬ್ಲಾಕ್ ಕಾಂಗ್ರೆಸ್ ಪದಾಧುಇಕಾರಿಗಳು ಸ್ಥಳೀಯ ಸಂಸ್ಥೇಗಳ ಸದಸ್ಯರು ಭಾಗವಹಿಸುವರು ಎಂದು ತಿಳಿಸಿದರು.
ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ 165 ಆಶ್ವಾಸನೆಗಳಲ್ಲಿ 155 ಆಶ್ವಾಸನೆಗಳನ್ನು ಈಡೇರಿಸಲಾಗಿದೆ. ಇನ್ನು ಉಳಿದ 10 ಆಶ್ವಾಸನೆಗಳಿ ಈಡೇರಲಿವೆ ಎಂದರು.
ಚಂದ್ರಕಾಂತ ಕೊಚರೇಕರ ಮಾತನಾಡಿ ಪ್ರತಿ ಬೂತ್ ಸವೀತಿಯ 10 ಜನರ ತಂಡವು ಪ್ರತಿ ಮನೆಗೆ ತೆರಳಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ರಾಜ್ಯ ಸರಕಾರದ ಸಾಧನೆಯ ಕಿರುಹೊತ್ತಿಗೆಯನನು ವಿತರಿಸಿ ಜನರಿಗೆ ಸರಕಾರದ ಸಾಧನೆಯ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಕುದ್ರಗಿ ಗ್ರಾ.ಪಂ. ಅಧ್ಯಕ್ಷ ಈಶ್ವರ ನಾಯ್ಕ ಮಾತನಾಡಿ 1980 ರಲ್ಲಿ ಶರಾವತಿ ನದಿಗೆ ನೆರೆ ಬಂದಾಗ ಅಂದು ಸಚಿವರಾಗಿದ್ದ ಎಸ್.ಎಂ. ಯಾಹ್ಯಾ ಅವರು 30 ಸಾವಿರ ಮನೆಗಳಿಗೆ ಹಾನಿಯಾಗಿರುವ ಬಗ್ಗೆ ಪಂಚನಾಮೆ ಮಾಡಿಸಿ ಪರಿಹಾರ ಕೊಡಿಸಿದ್ದರು. ಆದರೆ 2007 ರಲ್ಲಿ ಅದೇ ರೀತಿ ನೆರೆ ಬಂದಾಗ ಬಿಜೆಪಿ ಸರಕಾರ ಜನರಿಗೆ ಸ್ಪಂದಿಸಲಿಲ್ಲ. ತಮಗೆ ಬೇಕಾದ ಕೆಲವರಿಗೆ ಮಾತ್ರ ಪರಿಹಾರ ಕೊಡಿಸಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಕಿ ಬ್ಲಾಕ್ ಕಿಸಾನ್ ಮತ್ತು ಖೇತ್ ಮಜ್ದೂರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಣ್ಣಪ್ಪ ನಾಯ್ಕ, ಜಿ.ಪಂ. ಸದಸ್ಯೆ ಪುಷ್ಪಾ ನಾಯ್ಕ ಜಿ. ಪಂ. ಮಾಜಿ ಸದಸ್ಯ ಕೃಷ್ಣ ಗೌಡ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಯೋಗೇಶ ರಾಯ್ಕರ, ತಾ.ಪಂ. ಸದಸ್ಯ ಗಣಪಯ್ಯ ಗೌಡ, ಮಂಕಿ ವಿ.ಎಸ್. ಎಸ್ ಬ್ಯಾಂಕ್ ಅಧ್ಯಕ್ಷ ಗಜಾನನ ನಾಯ್ಕ, ತಾ.ಪಂ. ಸದಸ್ಯ ಅಣ್ಣಯ್ಯ ನಾಯ್ಕ, ಗ್ರಾ.ಪಂ. ಸದಸ್ಯ ಐ. ವಿ. ನಾಯ್ಕ, ಗಣೇಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
Leave a Comment