ಹೊನ್ನಾವರ ರೋಟರಿ ಕ್ಲಬ್ನಿಂದ ತಾಲೂಕಿನ ಶಾಲಾ ಕಾಲೇಜುಗಳಿಗೆ ಬೆಂಚ್ ಮತ್ತು ಡೆಸ್ಕ ಹಾಗೂ ವಾಟರ್ ಪೀಲ್ಟರ್ ವಿತರಣೆ ಹೊನ್ನಾವರ ರೋಟರಿ ಕ್ಲಬ್ 2015 -16 ನೇ ಸಾಲಿನ ರೋಟರಿ ಅಂತರರಾಷ್ರ್ಟಿಯ ಗ್ಲೋಬಲ್ ಅನುದಾನದಲ್ಲಿ ಸುಮಾರು 9 ಲಕ್ಷ ಮೌಲ್ಯದ 160 ಬೆಂಚ್ ಮತ್ತು ಡೆಸ್ಕ ಹಾಗೂ 33 ವಾಟರ್ ಪೀಲ್ಟರ್ನ್ನು ತಾಲೂಕಿನ ವಿವಿಧ ಶಾಲಾ ಕಾಲೇಜುಗಳಿಗೆ ವಿತರಿಸುವ ಕಾರ್ಯಕ್ರಮವನ್ನು ದಿ.ಡಾ|| ರೋಹಿತ ಎಸ್. ಭಟ್ಟ ಸ್ಮರಣಾರ್ಥ ರೋಟರಿ ಕಟ್ಟಡದಲ್ಲಿ ಹಮ್ಮಿಕೊಂಡಿತ್ತು
ಕಾರ್ಯಕ್ರಮದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತಾನಾಡಿದ 2015-16 ನೇ ಸಾಲಿನ ಆಧ್ಯಕ್ಷ, ಹಾಲಿ ರೋಟರಿ ರೆವಿನ್ಯೂ ಡಿಸ್ಟಿಕ್ ಛೇರಮೆನ್ ರೋ|| ಸತ್ಯಾ ಜಾವಗಲ್ ಇಂತಹ ದೊಡ್ಡ ಮೊತ್ತದ ಅನುದಾನವನ್ನು ನೀಡಿದ ಆಗಿನ ಗವನರ್ ರೋ|| ಶ್ರೀನಿವಾಸ ಮಾಲು ಅವರಿಗೆ ಅಭಿನಂದಿಸಿ, ಜಿಲ್ಲೆಯಲ್ಲಿಯೇ ಅತಿ ಹೆಚ್ಚಿನ ಅನುದಾನವನ್ನು ಹೊನ್ನಾವರ ರೋಟರಿ ಕ್ಲಬ್ಗೆ ನೀಡಲು ನನ್ನ 1ವರ್ಷದ ಅವಧಿಯಲ್ಲಿ 300ಕ್ಕೂ ಹೆಚ್ಚು ಜನಪ್ರಿಯ ಕಾರ್ಯಕ್ರಮಗಳು ಸಹಕಾರಗೊಂಡವು. ಅದಕ್ಕೆ ಸಹಕರಿಸಿದವರಿಗೆ ಅಭಿನಂದಿಸಿದರು.
ಜಿಲ್ಲಾ3170 ಪರವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಆಗಿನ ಅಸಿಸ್ಟೆಂಟ ಗವನರ್ ರೋ|| ಅಜಯ ಶೆಟ್ಟಿ ಮಾತನಾಡಿ 2015-16ನೇ ಸಾಲಿನಲ್ಲಿ ಹೊನ್ನಾವರ ರೋಟರಿ ಜಿಲ್ಲಾ3170ನಲ್ಲಿ ಅತಿ ಹೆಚ್ಚು ಕಾರ್ಯಕ್ರಮಗಳ ಜೊತೆಗೆ ಹೊಸ ಸದಸ್ಯರ ನೇಮಕಾತಿ, ಅತಿ ಹೆಚ್ಚಿನ 25 ಫೋಲೋರಿಸ್ ಪ್ರಶಸ್ತಿ, ರೋಟರಿಯ ಅಂತರರಾಷ್ಟ್ರಿಯ, ರಾಷ್ಟ್ರಿಯ, ಜಿಲ್ಲಾ ಮಟ್ಟದ 28 ಪ್ರಶಸ್ತಿಗಳ, ಜೊತೆಗೆ ಕ್ಲಬ ನೀಡಿದ ಚಿನ್ನದ ಅಧ್ಯಕ್ಷ ಪ್ರಶಸ್ತಿ ಪಡೆದು ಜಿಲ್ಲಾ3170 (ಸೌತಮಹಾರಾಷ್ಟ್ರ, ಸಂಪೂರ್ಣ ಗೋವಾರಾಜ್ಯ, ಉತ್ತರಕರ್ನಾಟಕ ಸೇರಿ) ದಲ್ಲಿ ಸಣ್ಣಕ್ಲಬ್ ವಿಭಾಗದಲ್ಲಿ ನಂ1 ಸ್ಥಾನ, ಅತಿ ಹೆಚ್ಚಿನ ಸದಸ್ಯರನ್ನು ದಾಖಲಿಸಿದ ಕ್ಲಬ್ ಎಂಬ ಪ್ರಶಸ್ತಿಗಳನ್ನ ಪಡೆಯುವುದರ ಜೊತೆಗೆ ಜಿಲ್ಲಾ3170 ದಲ್ಲಿ ಹಲವು ದಾಖಲೆಗಳನ್ನು ದಾಖಲಿಸಿ, ರೋಟರಿ ಅಂತರರಾಷ್ಟ್ರಿಯ ಮಟ್ಟದಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ 3 ಪದಕಗಳನ್ನು ವೈಯಕ್ತಿಕವಾಗಿ ಪಡೆದ ರೋ|| ಸತ್ಯಾ ಜಾವಗಲ್ ಹಾಗೂ ತಂಡದವದರ ಪರಿಶ್ರಮಕ್ಕೆ ಅಭಿನಂದಿಸಿದರು. 2015-16 ನೇ ಸಾಲಿನಲ್ಲಿ ಜಿಲ್ಲಾ ಅನುದಾನ ಹಾಗೂ ಅಂತರರಾಷ್ರ್ಟಿಯ ಗ್ಲೋಬಲ್ ಅನುದಾನದಲ್ಲಿ ಹೆಚ್ಚಿನ ಮೊತ್ತದಲ್ಲಿ ಕಂಪ್ಯೂಟರ್, ಪ್ರೋಜೆಕ್ಟರ್, ಉನ್ನತ ಶಿಕ್ಷಣದ ಪುಸ್ತPಗಳು, ವಾಟರ್ ಫೀಲ್ಟರ್, ಬೆಂಚ್ ಮತ್ತು ಡೆಸ್ಕಗಳನ್ನು ತಾಲೂಕಿನ ಶಿಕ್ಷಣ ಸಂಸ್ಥೆಗೆ ಒದಗಿಸಿರುವುದಕ್ಕೆ ಅಭಿನಂದಿಸಿದರು.
ಪಟ್ಟಣಪಂಚಾಯತನ ಅಧ್ಯಕ್ಷೆ ಶ್ರೀಮತಿ ಜೈನಾಬಿ ಸಾಬ ಮಾತನಾಡಿ ರೋಟರಿ ಸಂಸ್ಥೆ ನೀಡುತ್ತಿರುವ ಸೇವೆ ನಿರಂತರವಾಗಿ ನಡೆಯಲಿ ಇದಕ್ಕೆ ನಮ್ಮ ಸಹಕಾರವಿದೆ ಎಂದರು.
ಅಧ್ಯಕ್ಷ ರೋ|| ಡಾ|| ಅನಂತಮೂರ್ತಿ ಶಾಸ್ರ್ತಿ 3 ಶಾಲೆಗಳ ಇಂಟರೆಕ್ಟ ಕ್ಲಬ್ನ ಪದಗ್ರಹಣ ನಡೆಸಿ, ಇಂಟರೆಕ್ಟ ಸೇವೆಗಳ ಬಗ್ಗೆ ಮಾತನಾಡಿ, ಹೊನ್ನಾವರ ರೋಟರಿ ಇತಿಹಾಸದಲ್ಲಿ ಅತಿ ಹೆಚ್ಚಿನ ಅನುದಾನವನ್ನು ಪಡೆದ 2015-16 ನೇ ಸಾಲಿನ ಅಧ್ಯಕ್ಷ ಹಾಗೂ ತಂಡದವರಿಗೆ ಅಭಿನಂದಿಸಿದರು.
ಹೊನ್ನಾವರ ಕ್ಷೇತ್ರ ಶಿಕ್ಷಣಾಧಿಕಾರಿ ಗೀರಿಶ ಪದಕಿ ಮಾತನಾಡಿ ಹೊನ್ನಾವರ ರೋಟರಿಕ್ಲಬ್ ಹಲವು ವರ್ಷಗಳಿಂದ ನಮ್ಮ ಶಾಲೆಗಳಿಗೆ ನೀಡುತ್ತಿರುವ ಕೊಡುಗೆಗೆ ಶಿಕ್ಷಕರು ಹಾಗೂ ವಿಧ್ಯಾರ್ಥಿಗಳ ಪರವಾಗಿ ಅಭಿನಂದಿಸಿ ಮುಂದಿನ ದಿನದಲ್ಲಿ ರೋಟರಿ ಸಂಸ್ಥೆಯ ಕಾರ್ಯಕ್ರಮಗಳಿಗೆ ಸಹಕರಿಸುವುದಾಗಿ ತಿಳಿಸಿದರು.
ಹಿರಿಯ ರೋ|| ಜಿ.ಪಿ.ಹೆಗಡೆ ಮಾತನಾಡಿ ರೋಟರಿ ಸಂಸ್ಥೆ ಮಾಡುತ್ತಿರುವ ಸೇವೆಗಳ ಬಗ್ಗೆ ವಿವರಿಸಿ ಮಾತನಾಡಿದರು.
ಹಿರಿಯ ರೋ|| ಡಾ|| ಕಿರಣ ಬಳಕೂರ 2015-16 ನೇ ಸಾಲಿನಲ್ಲಿ ಪಡೆದ ಪ್ರಶಸ್ತಿ ಪತ್ರವನ್ನು ರೋ|| ಸತ್ಯಾ ಜಾವಗಲ್ ರವರಿಗೆ ಹಸ್ತಾಂತರಿಸಿದರು.
ರೋ|| ಎಸ್.ಎನ್. ಹೆಗಡೆ ರೋಟರಿ ಚತುರ್ವಿಧ ಪರೀಕ್ಷೆ ಬೊದಿಸಿದರು. ರೋ|| ಎಸ.ಎಮ್. ಭಟ್ಟ ನಗೆಹನಿ ನಡೆಸಿದರು. ರೋ|| ಜಿ.ಜಿ. ಶಂಕರ, ರೋ|| ದಿನೇಶ ಕಾಮತ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕಾರ್ಯದರ್ಶಿ ಸ್ಟೀಫನ್ ರೊಡ್ರಗಿಸ್ ವಂದಿಸಿದರು. ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಶಾಲೆಯ ಶಿಕ್ಷಕರು, ಕಾಲೇಜಿನ ಅಧ್ಯಾಪಕರು ಹಾಗೂ ವಿಧ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಯ ಸದಸ್ಯರು, ರೋಟರಿ ಪರಿವಾರದವರು ಉಪಸ್ಥಿತರಿದ್ದರು.
Leave a Comment