ಕಾರವಾರ:
ಕನ್ನಡ ಭವನದಲ್ಲಿ ಶನಿವಾರ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು.
ಸಂಘಟನೆ ಜಿಲ್ಲಾ ಕಾರ್ಯದರ್ಶಿಯಾಗಿ ದೇವಿದಾಸ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ರೋಶನ ಹರಿಕಂತ್ರ, ಎಸ್.ಎಸ್.ಟಿ ಅಧ್ಯಕ್ಷರಾಗಿ ಅರುಣ ಹರಿಜನ, ಯುವ ಘಟಕದ ಕಾರ್ಯದ್ಯಕ್ಷರಾಗಿ ಮೋಹನ ಉಳ್ವೇಕರ್, ಸಹ ಕಾರ್ಯದರ್ಶಿಯಾಗಿ ನಾಗರಾಜ ರಾಯ್ಕರ್ ಆಯ್ಕೆಯಾದರು. ಕಾರವಾರ ನಗರಾಧ್ಯಕ್ಷರಾಗಿ ಸುಭಾಷ ಗುನಗಿ, ಉಪಾಧ್ಯಕ್ಷರಾಗಿ ಸಮೀರ ಶೇಜವಾಡಕರ್ ನೇಮಕವಾದರು. ಜಯ ಕರ್ನಾಟಕ ಜಿಲ್ಲಾಧ್ಯಕ್ಷ ದಿಲೀಪ ಅರ್ಗೇಕರ್ ಆಯ್ಕೆ ಪ್ರಕ್ರಿಯೆ ನಡೆಸಿದರು.
Leave a Comment