ಕಾರವಾರ: ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ವತಿಯಿಂದ 18 ರಿಂದ 35 ವರ್ಷ ವಯೋಮಿತಿಯೊಳಗಿರುವ ಸ್ವ ಉದ್ಯೋಗ ಮಾಡಲು ಆಸಕ್ತಿಯುಳ್ಳವರಿಗೆÀ ವಿವಿಧ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅಕ್ಟೋಬರ ತಿಂಗಳಲ್ಲಿ ಫಾಸ್ಟ ಫುಡ್ ಸ್ಟಾಲ್ ಉದ್ಯಮಿ, ಶಾಪ್ ಕೀಪರ, ಕಂಪ್ಯೂಟರ್ ಡಿ.ಟಿ.ಪಿ. ಕೋಳಿ ಸಾಕಾಣಿಕೆ ಹಾಗೂ ಗೃಹಪೋಗಿ ವಿದ್ಯುತ್ ಉಪಕರಣಗಳ ದುರಸ್ಥಿ ತರಬೇತಿ ನೀಡಲಾಗುವದು.
ಆಸಕ್ತ ಅಭ್ಯರ್ಥಿಗಳು ನಿರ್ದೇಶಕರು, ಕೆನರಾ ಬ್ಯಾಂಕ್ ದೇಶಪಾಂಡೆ, ಆರ್ಸೆಟ್ ಸಂಸ್ಥೆ,(ರಿ) ಉದ್ಯೋಗ ವಿದ್ಯಾನಗರ, ದಾಂಡೇಲಿ ರಸ್ತೆ ಹಳಿಯಾಳ (ಉ.ಕ) ಇಲ್ಲಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08284-220807, ಮೋಬೈಲ್ ಸಂಖ್ಯೆ 9483485489, 9482188780 ಸಂಪರ್ಕಿಸಬಹುದು.
Leave a Comment