ಹಳಿಯಾಳ:
ರಾಷ್ಟ್ರೀಯ ಸೇವಾ ಯೋಜನೆಯು ಕೇವಲ ಪರಿಸರ ಸ್ವಚ್ಚತೆಗಾಗಿ ಅಲ್ಲದೇ ಸಾಮಾಜಿಕ ಸೇವೆಗೆ ಮೀಸಲಾಗಿದ್ದು ವಿದ್ಯಾರ್ಥಿಗಳು “ಸೇವೆಯ ಅರ್ಥವನ್ನು ತಿಳಿದುಕೊಂಡು ಸದ್ಭಾವದಿಂದ ಸೌಹಾರ್ದ ವಾತಾವರಣವನ್ನು ನಿರ್ಮಿಸಲು ಪ್ರಯತ್ನಿಸಬೇಕು ಎಂದು ಡಾ||ವಿನಯಾ ವಕ್ಕುಂದ ಹೇಳಿದರು.
ಪಟ್ಟಣದ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಎನ್.ಎಸ್.ಎಸ್. ಘಟಕದ 12ನೇಯ ವರ್ಷದ ದೈನಂದಿನ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ವಾರ್ಷಿಕ ಸಂಚಿಕೆ “ಸಾಫಲ್ಯ ಹಾಗೂ “ಎನ್.ಎಸ್.ಎಸ್. ಸಾಗಿ ಬಂದ ಹಾದಿ” ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಎನ್.ಎಸ್.ಎಸ್. ಸಂಯೋಜಕ ದಿನೇಶ ಡಿ.ನಾಯ್ಕ, ಎನ್.ಎಸ್.ಎಸ್. ದೈಯೋದ್ದೇಶಗಳು ಹಾಗೂ ಉದ್ದೇಶಗಳ ಬಗ್ಗೆ ಮಾಹಿತಿ ನೀಡಿದರು. ಪ್ರಾಂಶುಪಾಲ ದಿನೇಶ ಡಿ. ನಾಯ್ಕ ಉಪಪ್ರಾಂಶುಪಾಲ ವಿ.ಎಮ್.ಜೋಶಿ, ಟ್ರೇನಿಂಗ್ ಮತ್ತು ಪ್ಲೇಸ್ಮೆಂಟ್ ಆಫೀಸರ್ ನಂದಕುಮಾರ ತೋರಸ್ಕರ ಕಿ.ತ.ಅಧಿಕಾರಿಗಳಾದ ಅವಿನಾಶ ಲೋಣಿ ನಿರೂಪಿಸಿದರು ಶಂಕರ ಮಿರಾಶಿ ವಂದಿಸಿದರು.
Leave a Comment