ಹಳಿಯಾಳ: ನೆರೆ ರಾಜ್ಯ ಗೋವಾದ ಬೈನಾ ಕಡಲ ತೀರದಲ್ಲಿರುವ ಬಡ ಕನ್ನಡಿಗರ ಮನೆಗಳನ್ನು ಕೆಡವಿಹಾಕಿ ಕನ್ನಡಿಗರನ್ನು ನಿರಾಶ್ರಿತರನ್ನಾಗಿ ಮಾಡಿರುವ ಗೋವಾ ಸರ್ಕಾರದ ಅಮಾನವೀಯ ಕೃತ್ಯವನ್ನು ಬಲವಾಗಿ ಖಂಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ಈ ಹಿಂದೆ ಕೂಡ ಬೈನಾದಲ್ಲಿನ ಕನ್ನಡಿಗರ ಕುಟುಂಬಗಳನ್ನು ಎತ್ತಂಗಡಿ ಮಾಡಲು ಗೋವಾ ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ಮಾಡಿತ್ತು ಆದರೇ ರಾಜ್ಯ ಕಾಂಗ್ರೇಸ್ ಸರ್ಕಾರದ ಬಲವಾದ ವಿರೋಧ ಹಾಗೂ ತಾವು ಖುದ್ದಾಗಿ ಗೊವಾಗೆ ತೆರಳಿ ಅಲ್ಲಿನ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕುಟುಂಬಗಳನ್ನು ಎತ್ತಂಗಡಿ ಮಾಡದಂತೆ ಹಾಗೂ ಕನ್ನಡಿಗರ ಹಿತರಕ್ಷಣೆ ಮಾಡುವಂತೆ ಮನವಿ ಮಾಡಿದ್ದು ಗೋವಾ ಸರ್ಕಾರ ಒಪ್ಪಿತ್ತು ಆದರೇ ಇಂದು ದಿಢೀರಣೆ ಕನ್ನಡಿಗರ ಮನೆಗಳನ್ನು ಧ್ವಂಸಗೊಳಿಸಿ ಅವರನ್ನು ಬಿದಿಗೆ ತಳ್ಳುವ ಮೂಲಕ ಅಮಾನವೀಯವಾಗಿ ನಡೆದುಕೊಂಡಿರುವ ಸರ್ಕಾರ ಭರವಸೆ ಹುಸಿಗೊಳಿಸಿದ್ದು ಅವರ ಕ್ರಮ ಖಂಡನಾರ್ಹವಾಗಿದ್ದು ತಕ್ಷಣ ಗೋವಾ ಸರ್ಕಾರ ನಿರಾಶ್ರಿತರಿಗೆ ಗಂಜಿ ಕೇಂದ್ರಗಳನ್ನು ಹಾಗೂ ಪುನರ್ವಸತಿ ಕೇಂದ್ರಗಳನ್ನು ತೆರೆಯಬೇಕೆಂದು ಅಲ್ಲದೇ ಅವರಿಗೆ ಪರಿಹಾರ ನೀಡುವಂತೆ ದೇಶಪಾಂಡೆ ಆಗ್ರಹಿಸಿದ್ದಾರೆ.
Leave a Comment