ಹಳಿಯಾಳ: ನವರಾತ್ರಿ ಉತ್ಸವದ ಅಂಗವಾಗಿ ಹಳಿಯಾಳ ಪಟ್ಟಣದ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಗುರುವಾರ ಬೆಳಿಗ್ಗೆ ಅಶ್ವೀಜಿ ಶುದ್ದ ಅಷ್ಟಮಿ ಅಂಗವಾಗಿ ನಡೆದ ಶ್ರೀ ನವಚಂಡಿ ಹವನದಲ್ಲಿ ಶ್ರೀ ತುಳಜಾಭವಾನಿ ಧಾರ್ಮಿಕ ಶೈಕ್ಷಣಿಕ ಮತ್ತು ಧರ್ಮಾರ್ಥ ಟ್ರಸ್ಟ್ ಅಧ್ಯಕ್ಷರಾದ ಸಚಿವ ಆರ್.ವಿ.ದೇಶಪಾಂಡೆ ಮತ್ತು ಧರ್ಮಪತ್ನಿ ರಾಧಾಬಾಯಿ ದೇಶಪಾಂಡೆ ಹವನದಲ್ಲಿ ಭಾಗವಹಿಸಿದ್ದರು.
ಇಂದು ದುರ್ಗಾಷ್ಠಮಿ ನಿಮಿತ್ತ ಹಳಿಯಾಳದ ಗ್ರಾಮದೇವಿ ಉಡಚಮ್ಮಾ ಸೇರಿದಂತೆ ಇತರ ಮಂದಿರಗಳಲ್ಲೂ ವಿಶೇಷ ಪೂಜನಗಳು ನಡೆದವು. ಶ್ರೀ ತುಳಜಾಭವಾನಿ ಮಂದಿರದಲ್ಲಿ ಬೆಳಿಗ್ಗೆಯಿಂದ ನಡೆದ ಶ್ರೀ ನವಚಂಡಿ ಹವನ ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿಯೊಡನೆ ಸಂಪನ್ನಗೊಂಡಿತು. ಪೂಜಾ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಹಾಗೂ ನೂರಾರು ಭಕ್ತರು ಪಾಲ್ಗೊಂಡಿದ್ದರು.
ಇದೇ ದೇವಸ್ಥಾನದಲ್ಲಿ ದಿ. 29 ರಂದು ಶುಕ್ರವಾರ ಅಶ್ವಿಜ ಶುದ್ಧ ನವಮಿ ನವರಾತ್ರಿ ಉತ್ಥಾಪನ, ನವಮಿಪೂಜೆ ಇತ್ಯಾದಿ ದಿ.30 ಶನಿವಾರ ವಿಜಯದಶಮಿ ಕಾರ್ಯಕ್ರಮ, ಶಮಿ ಪೂಜನ, ಊಡಿ ತುಂಬುವುದು ಹಾಗೂ ದಸರಾ ಆಚರಣೆ ನಡೆಯಲಿದೆ.
Leave a Comment