ಹೊನ್ನಾವರ
ತಾಲೂಕಾ ಮಂಕಿ ಬ್ಲಾಕ್ ಜೆಡಿಎಸ್ ಅಧ್ಯಕ್ಷರಾಗಿ ರಾಜು ಎಂ. ನಾಯ್ಕ ನೇಮಕಗೊಂಡಿದ್ದಾರೆ.
ಜಿಲ್ಲಾಧ್ಯಕ್ಷ ಬಿ. ಆರ್. ನಾಯ್ಕ ನೇಮಕಾತಿ ಆದೇಶ ನೀಡಿದ್ದು ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇಮಕಾತಿ ಪತ್ರವನ್ನು ಬೆಂಗಳೂರಿನ ಜೆಪಿ ಭವನದಲ್ಲಿ ನಡೆದ ರಾಜ್ಯ ಮಟ್ಟದ ಬೂತ್ ಸಮಾವೇಶದಲ್ಲಿ ಹಸ್ತಾಂತರಿಸಿದರು.
ರಾಜು ನಾಯ್ಕ ಅವರು ಹೊನ್ನಾವರ ತಾಲೂಕಾ ಪಂಚಾಯಿತಿ ಮಾಜಿ ಸದಸ್ಯರಾಗಿ, ಗ್ರಾ.ಪಂ. ಮಾಜಿ ಸದಸ್ಯರಾಗಿ, ತಾಲೂಕಾ ಯುವ ಜನತಾದಳದ ಮಾಜಿ ಅಧ್ಯಕ್ಷರಾಗಿ, ಹಾಲಿ ಶರಾವತಿ ಸಹಕಾರ ಸಂಘದ ಉಪಾಧ್ಯಕ್ಷರಾಗಿ, ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷರಾಗಿ, ಮಂಕಿಯ ರಿಕ್ಷಾ ಚಾಲಕ ಮಾಲPರÀ ಸಂಘದ ಅಧ್ಯಕ್ಷರಾಗಿ, ಸ್ವರ್ಣವಲ್ಲೀ ರಾಮಕ್ಷತ್ರಿಯ ಸೀಮಾ ಪರಿಷತ್ ಸದಸ್ಯರಾಗಿ ಹಾಗೂ ಇನ್ನಿತರ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Leave a Comment