ಹೊನ್ನಾವರ . ತಾಲೂಕಾ ಆಡಳಿತ ಹಾಗೂ ಪಟ್ಟಣ ಪಂಚಾಯತ ಅಡಿಯಲ್ಲಿ ನಡೆಯುವ ಬೃಹತ್ ಸ್ವಚ್ಛತಾ ಅಭಿಯಾನದಲ್ಲಿ ಪಟ್ಟಣ ಪಂಚಾಯತ್ ಜೊತೆಯಾಗಿ ಉದ್ಯಮನಗರದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಲಾಯನ್ಸ್ ಅಧ್ಯಕ್ಷರಾದ ಲಾ.ಡಿ.ಡಿ.ಮಡಿವಾಳ, ಖಜಾಂಚಿ ಲಾ.ಎಮ್.ವಿ.ನಾಯ್ಕ ರೀಜನ್ ಚೇರಪರ್ಸನ ಪಿ.ಎಮ್.ಜೆಎಫ್ ಲಾ.ಜಿ.ವಿ.ಬಿಂದಗಿ, ಲಾ.ಮಂಜು ಆಚಾರ್ಯ, ಲಾ.ರಾಜೇಶ ಸಾಲೆಹಿತ್ತಲ್, ಲಾ. ಸಂತೋಷ ನಾಯ್ಕ ಭಾಗವಹಿಸಿದ್ದರು. ಪಟ್ಟಣ ಪಂಚಾಯತ್ದಿಂದ ಅಧ್ಯಕ್ಷರಾದ ಜೈನಾಬಿ ಶೇಖ್, ಸದಸ್ಯರಾದ ಬಾಳಾ ಬಾಳೇರಿ ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರು ಸ್ವಚ್ಛತೆಯಲ್ಲಿ ಪಾಲ್ಗೊಂಡಿದ್ದರು.
Leave a Comment