ಕಾರವಾರ: ಜಿಲ್ಲೆಯಲ್ಲಿ ಈ ಬಾರಿ ಪ್ರಕೃತಿ ವಿಕೋಪದಡಿ ಸಾಕಷ್ಟು ಆಸ್ತಿ-ಪಾಸ್ತಿ ಹಾನಿ, ಬೆಳೆ ಹಾನಿಯಾಗಿದ್ದು ಒಟ್ಟೂ ಎಂಟು ಸಾವು ಸಂಭವಿಸಿದೆ. ಜಿಲ್ಲಾಡಳಿದಿಂದ ಈವರೆಗೆ ಒಟ್ಟೂ 5.41 ಕೋಟಿ ಪರಿಹಾರದ ರೂಪದಲ್ಲಿ ಬಿಡುಗಡೆಯಾಗಿದೆ.
ಪ್ರಕೃತಿ ವಿಕೋಪದಡಿಯಲ್ಲಿ ವಿವಿಧ ರೂಪದ ಪರಿಹಾರಗಳನ್ನು ವಿತರಿಸಲು ಕೇಂದ್ರ ಸರಕಾರ ಪರಿಹಾರದ ನಿಧಿಯನ್ನು ಬಿಡುಗಡೆಗೊಳಿಸುತ್ತಿದೆ. ಅದರಂತೆ ಜಿಲ್ಲಾಡಳಿತದ ಬಳಿ ಏಪ್ರಿಲ್ 1ರೆಗೆ ಹಿಂದಿನ ಸಾಲಿನ ಒಟ್ಟೂ 1265.90 ಲಕ್ಷರೂ ರೂ. ಉಳಿದುಕೊಂಡಿತ್ತು. ಅಲ್ಲದೆ ಪ್ರಸಕ್ತ ಸಾಲಿನಲ್ಲಿ ಒಟ್ಟೂ 465.00 ಲಕ್ಷರೂ. ಬಿಡುಗಡೆಯಾಗಿದ್ದು ಒಟ್ಟೂ 1730.0 ಲಕ್ಷ ರೂ. ಅನುದಾನ ಜಿಲ್ಲಾಡಳಿತ ಖಾತೆಯಲಿದೆ. ಈ ಅನುದಾನಲ್ಲಿ ಈಗಾಗಲೇ 541.63 ಲಕ್ಷ ರೂ. ಪರಿಹಾರ ನೀಡಲಾಗಿದ್ದು 1189.27 ಲಕ್ಷ ರೂ. ಬಾಕಿ ಅನುದಾನ ಜಿಲ್ಲಾಡಳಿತ ಖಾತೆಯಲಿದ್ದು ಈ ಅನುದಾನವನ್ನು ಮಳೆಗಾಲ ಮುಕ್ತಾಯದವರೆಗೆ ಬಳಕೆ ಮಾಡಿಕೊಳ್ಳಲಾಗುವುದು.
ಪ್ರಸಕ್ತ ಸಾಲಿನಲ್ಲಿ ಜೀವಹಾನಿಗೆ 32 ಲಕ್ಷ ರೂ., ಗಾಯಗೊಂಡವರಿಗೆ 0.7 ಲಕ್ಷ ರೂ. ಜಾನುಗಾರು ಹಾನಿಗೆ 1.20ಲಕ್ಷರೂ. ಬೆಳೆಹಾನಿಗೆ 4.30 ಲಕ್ಷ ರೂ., ಮನೆಹಾನಿಗೆ 29.37 ಲಕ್ಷರೂ. ಇತರೆ ಹಾನಿಗಳಿಗೆ ಒಟ್ಟೂ 104.23 ಲಕ್ಷ ರೂ. ಪರಿಹಾರ ವಿತರಣೆಯಾಗಿದೆ. ಒಟ್ಟೂ 171.17 ಲಕ್ಷರೂ ಪರಿಹಾರ ನೀಡಲಾಗಿದೆ.
ಏಪ್ರಿಲ್ನಿಂದ ಜುಲೈ ವರೆಗೆ ಒಟ್ಟು 8 ಜೀವಹಾನಿ ಸಂಭವಿಸಿದ್ದು ತಲಾ 4ಲಕ್ಷ ರೂಗಳಂತೆ ಒಟ್ಟೂ 32 ಲಕ್ಷ ರೂ. ಪರಿಹಾರ ವಿತರಣೆಯಾಗಿದೆ. ಅದರಲ್ಲಿ ಕುಮಟಾದ ತಂಡ್ರಕುಳಿ ಗುಡ್ಡಕುಸಿದು ಮೃತಪಟ್ಟ ಮೂವರು. ಮುಂಡಗೋಡ ತಾಲೂಕಿನ ಎರಡು ಸಾವು. ಭಟ್ಕಳ, ಹಳಿಯಾಳ, ಕಾರವಾರದಲ್ಲಿ ತಲಾ ಒಂದು ಸಾವು ಸಂಭವಿಸಿದೆ. ಅದರಂತೆ ಜಿಲ್ಲೆಯಲ್ಲಿ ಏ.1ರಿಂದ ಜು.31ರವರೆಗೆ ಒಟ್ಟೂ 8 ಜಾನುವಾರುಗಳು ಮೃತಪಟ್ಟಿದೆ. ಅದರಲ್ಲಿ ಮುಂಡಗೋಡದಲ್ಲಿ ನಾಲ್ಕು ಸಿದ್ದಾಪುರದಲ್ಲಿ 3, ಯಲ್ಲಾಪುರದಲ್ಲಿ 1 ಪ್ರಕರಣಗಳಾಗಿದ್ದು 1.18 ಲಕ್ಷರೂ ಪರಿಹಾರ ವಿರಣೆಹಾಗಿದೆ. ಸಿದ್ದಾಪುರದಲ್ಲಿ ಎರಡು ಅರ್ಜಿಗಳು ತಿರಸ್ಕøತವಾಗಿದ್ದು ಸಿದ್ದಾಪುರದಲ್ಲೇ ಒಂದು ಪ್ರಕರಣ ಬಾಕಿ ಉಳಿದುಕೊಂಡಿದೆ.
ಒಟ್ಟೂ 719 ಮನೆಗಳಿಗೆ ಹಾನಿಯಾಗಿದ್ದು ಅದರಲ್ಲಿ 509 ಮನೆಗಳಿಗೆ 29.10 ಪರಿಹಾರ ಮೊತ್ತವನ್ನು ವಿತರಣೆ ಮಾಡಲಾಗಿದೆ. 174 ಪ್ರಕರಣಗಳು ತಿರಸ್ಕøತಗೊಂಡಿದ್ದು 36 ಪ್ರಕರಣಗಳು ಬಾಕಿ ಉಳಿದುಕೊಂಡಿದೆ. ಹಳಿಯಾಳದಲ್ಲಿ ಒಟ್ಟೂ 316 ಮನೆಗಳಿಗೆ ಹಾನಿಯಾಗಿದ್ದು 2.43 ಲಕ್ಷ ರೂ. ಪರಿಹಾರ ನೀಡಲಾಗಿದೆ. ಹೊನ್ನಾವರದಲ್ಲಿ 218 ಮನೆಗಳ ಪೈಕಿ 117 ಮನೆಗಳಿಗೆ 12.22 ಲಕ್ಷ ಪರಿಹಾರ ದೊರೆತ್ತಿದ್ದು 101 ಅರ್ಜಿಗಳು ತಿರಸ್ಕøತವಾಗಿದೆ. ಭಟ್ಕಳ ತಾಲೂಕಿನಲ್ಲಿ 47 ಮನೆಗೆ ಹಾನಿಯಾಗಿದ್ದು 30 ಪ್ರಕರಣಗಳಿಗೆ 5.10ಲಕ್ಷ ಪರಿಹಾರ ಲಭ್ಯವಾಗಿದ್ದು 11 ಪ್ರಕರಣಗಳು ತಿರಸ್ಕøತಗೊಂಡಿದೆ. ಸಿದ್ದಾಪುರದಲ್ಲಿ 34 ಮನೆಗಳಿಗೆ ಹಾನಿಯಾಗಿದ್ದು ಕೇವಲ 2 ಮನೆಗಳಿಗೆ 6 ಸಾವಿರ ರೂ. ಪರಿಹಾರ ವಿತರಿಸಲಾಗಿದೆ. 28 ಪ್ರಕರಣಗಳು ತಿರಸ್ಕøತವಾಗಿದ್ದು 4 ಪ್ರಕರಣಗಳು ಬಾಕಿ ಇದೆ. ಕುಮಟಾದಲ್ಲಿ 29 ಮನೆಗಳಿಗೆ ಹಾನಿಯಾಗಿದ್ದು 22 ಮನೆಗಳಿಗೆ 8.30 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. 7 ಪ್ರಕರಣ ತಿರಸ್ಕøತಗೊಂಡಿವೆ. ಶಿರಸಿ ತಾಲೂಕಿನಲ್ಲಿ 22 ಮನೆಗಳಿಗೆ ಹಾನಿಯಾಗಿದ್ದು 7 ಮನೆಗಳಿಗೆ 22 ಸಾವಿರ ರೂ. ಪರಿಹಾರ ಲಭ್ಯವಾಗಿದ್ದು 11 ಪ್ರಕರಣಗಳು ತಿರಸ್ಕøತಗೊಂಡಿದೆ. ನಾಲ್ಕು ಬಾಕಿ ಇದೆ. ಅಂಕೋಲಾದಲ್ಲಿ 16 ಪ್ರಕರಣಗಳಲ್ಲಿ ಕೇವಲ ಒಂದು ಮನೆಗೆ 5 ಸಾವಿರ ವಿತರಣೆಯಾಗಿದುದ 15 ಪ್ರಕರಣಗಳು ಬಾಕಿ ಇದೆ.
ಯಲ್ಲಾಪುರದಲ್ಲಿ 14 ಪ್ರಕರಣಗಳಲ್ಲಿ 8 ಮನೆಗಳಿಗೆ 41 ಸಾವಿರ ರೂ. ಪರಿಹಾರ ಲಭ್ಯವಾಗಿದ್ದು 5ಪ್ರಕರಣಗಳು ತಿರಸ್ಕøಗೊಂಡಿದೆ. ಕಾರವಾರದ 10 ಪ್ರಕರಣಗಳಲ್ಲಿ 4 ಮನೆಗಳಿಗೆ 21 ಸಾವಿರ ರೂ. ಪರಿಹಾರ ವಿತರಿಸಲಾಗಿದ್ದ 6 ಪ್ರಕರಣಗಳು ತಿರಸ್ಕøತಗೊಂಡಿದೆ. ಜೊಯಿಡಾದ 8 ಪ್ರಕರಣಗಳಲ್ಲಿ 2 ಮನೆಗಳಿಗೆ 10 ಸಾವಿರ ರೂ. ಪರಿಹಾರ ಲಭ್ಯವಾಗಿದ್ದು 6 ಪ್ರಕರಣಗಳು ಬಾಕಿ ಇದೆ. ಮುಂಡಗೋಡ ತಾಲೂಕಿನ 5 ಪ್ರಕರಣಗಳು ತಿರಸ್ಕøತಗೊಂಡಿದೆ.
——–
ಬೆಳೆಹಾನಿ:
ಅತಿವೃಷ್ಟಿ, ಪ್ರವಾಹದಿಂದಾಗಿ ಒಟ್ಟೂ 25.07 ಹೆಕ್ಟೇರ್ ಕ್ಷೇತ್ರದಲ್ಲಿ ಬೆಳೆ ಹಾನಿಹಾಗಿದ್ದು ಒಟ್ಟೂ 93 ಪ್ರಕರಣಗಳಿಗೆ 3.35 ಲಕ್ಷ ರೂ. ವಿತರಣೆ ಮಾಡಲಾಗಿದೆ. ಅದರಲ್ಲಿ 14 ಪ್ರಕರಣಗಳು ಬಾಕಿ ಉಳಿದುಕೊಂಡಿದ್ದು 2 ಪ್ರಕರಣಗಳು ತಿರಸ್ಕøತಗೊಂಡಿದೆ. ಅದರಲ್ಲಿ ಮುಂಡಗೋಡ ತಾಲೂಕಿನಲ್ಲೇ 14.92 ಹೆಕ್ಟೇರ್ ಪ್ರದೇಶ ಹಾನಿಯಾಗಿದ್ದು 41 ಪ್ರಕರಣಗಳಲ್ಲಿ 2.01ಲಕ್ಷರೂ. ಪರಿಹಾರ ನೀಡಲಾಗಿದೆ. ಹಳಿಯಾಳದಲ್ಲಿ 9.15 ಹೆಕ್ಟೇರ್ ಪ್ರದೇಶ ಹಾನಿಯಾಗಿದ್ದು 50ಪ್ರಕರಣಗಳಲ್ಲಿ 1.27ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. 14 ಪ್ರಕರಣಗಳು ಬಾಕಿ ಇದೆ. ಸಿದ್ದಾಪುರದಲ್ಲಿ ಒಂದು ಹೆಕ್ಟೇರ್ ಪ್ರದೇಶ ಹಾನಿಯಾಗಿದ್ದು ಎರಡು ಪ್ರಕರಣಗಳಲ್ಲಿ 7 ಸಾವಿರ ರೂ. ಪರಿಹಾರ ವಿತರಿಸಲಾಗಿದೆ. 2 ಪ್ರಕರಣಗಳು ತಿರಸ್ಕøತವಾಗಿದೆ.
———–
ಇಲ್ಲಿಯವರೆಗೆ ಬಿಡುಗಡೆಯಾದ ಅನುದಾನ(ಲಕ್ಷಗಳಲ್ಲಿ)
ತಾಲೂಕು ಬಿಡುಗಡೆ ಅನುದಾನ ಖರ್ಚಾದ ಅನುದಾನ ಉಳಿದ ಅನುದಾನ
ಅಂಕೋಲಾ 38.87 4.06 34.81
ಭಟ್ಕಳ 46.13 26.56 19.57
ಹಳಿಯಾಳ 46.00 37.21 8.29
ಹೊನ್ನಾವರ 52.14 29.24 22.90
ಕಾರವಾರ 34.43 13.18 21.25
ಕುಮಟಾ 55.40 40.91 14.49
ಮುಂಡಗೋಡ 29.16 12.28 14.88
ಸಿದ್ದಾಪುರ 32.88 18(ಸಾವಿರ) 32.70
ಶಿರಸಿ 31.03 2.63 28.40
ಜೊಯಿಡಾ 35.81 2.74 33.07
ಯಲ್ಲಾಪುರ 27.32 2.20 25.12
————————————————————
ಒಟ್ಟೂ 427.17 171.19 225.98
Leave a Comment