ಹೊನ್ನಾವರ:
ಪಟ್ಟಣದ ಪ್ರಮಿಳಾ ಬಾರ್ ಎಂಡ್ ರೆಸ್ಟೋರೆಂಟ್ನಲ್ಲಿ ಗುರುವಾರ ಗ್ರಾಹಕ ಮಂಜುನಾಥ ಚಂದ್ರ ನಾಯಕ ಮೇಲೆ ಹಲ್ಲೆ ನಡಸಿ ಕೊಲೆಗ್ಯೆದ ಪ್ರಕರಣಕ್ಕೆ ಸಂಬಂಧಿಸಿ ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ,
ಆದರೆ ತಮ್ಮ ಬಾರ್ ನೆಲ್ಲೇ ಬಾರ್ ಮಾಲೀಕರರಾಗಲಿ ಇಲ್ಲವೇ ಕೆಲಸವದರಾಗಲಿ ಪೋಲಿಸರಿಗೆ ಕೊಲೆ ಬಗ್ಗೆ ಮಾಹಿತಿ ನೀಡದೇ ನಿರ್ಲಕ್ಷಿಸಿದ್ದು ಅದನ್ನು ಗಮನಿಸಿದರೆ ಈ ಕೊಲೆಯಲ್ಲಿ ಬಾರ್ ಮಾಲೀಕನ ಹಾಗೂ ಕೆಲಸಗಾರ ಪಾತ್ತವಿದೆಯೋ ಎನ್ನುವುದು ತನಿಖೆ ಯಿಂದ ಹೊರ ಬರಬೇಕಾಗಿದೆ
ಅಂಕೋಲಾ ತಾಲೂಕಿನ ಮೊಗಟಾ ನಿವಾಸಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಚಾಲಕ ಮಂಜುನಾಥ ಚಂದ್ರ ನಾಯಕ [41] ಮೃತಪಟ್ಟಿ ವ್ಯಕ್ತಿಅದೇ ಬಾರ್ ನಲ್ಲಿ ಕುಡಿಯಲು ಬಂದಿದ್ದನ್ನೆನ್ನಲಾದ ಪಟ್ಟಣದ ಕಮಟೆಹಿತ್ತಲಿನ ಲಕ್ಷ್ಮೀನಾರಾಯಣ ಪಿ ಮೇಸ್ತನನ್ನು ಈ ಸಂಬಂಧ ಬಂಧಿಸಲಾಗಿದೆ .
ಆದರೆ ಈ ಕೊಲೆ ಪ್ರಕರಣದಲ್ಲಿ ಲಕ್ಷ್ಮೀನಾರಾಯಣ ಪಿ ಮೇಸ್ತನ್ನು ಬಲಿಪಶು ಮಾಡಲಾಗಿದೆಯೋ ಎನ್ನುವ ಸಂಶಯ ಸಹ ಕೇಳಿ ಬಂದಿದೆ.
ಈತನ್ನು ಬಾರಿನವರು ಹೊಡೆದು ಕೊಲೆ ಮಾಡಿದ್ದಾರೆ ಎಂದು ಮೃತನ ಪತ್ನಿ ಹೊನ್ನಾವರ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ ಪೊಲೀಸರು ಈ ಸಾವಿಗೆ ನಿಜವಾದ ಕಾರಣ ತಿಳಿಯಬಹುದು ಎಂಬ ಉದ್ದೇಶದಿಂದ ಮೃತದೇಹವನ್ನು ಮರಣೋತ್ತರ ಪರೀಕ್ಷೆಯನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸದೇ ತಜ್ಞ ವೈದ್ಯರಿರುವ ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ನಡೆಸಿದ್ದಾರೆ. ಬಾರಿನ ಮಾಲೀಕರು ಮತ್ತು ಕೆಲಸಗಾರರನ್ನು ವಿಚಾರಣೆ ನಡೆಸಿದ್ದಾರೆ.
ಆರೋಪಿ ಎಲ್.ಪಿ.ಮೇಸ್ತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಹಲ್ಲೆ ನಡೆದ ಪ್ರಮಿಳಾ ಬಾರ್ನ ಮಾಲೀಕನ ವಿರುದ್ದವೂ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುವುದಾಗಿ ಪೊಲೀಸ್ ಮೂಲ ತಿಳಿಸಿದೆ. ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಸಾವಿನೊಂದಿಗೆ ಅಂತ್ಯವಾಗಿರುವುದು ತಾಲೂಕಿನ ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ.
Leave a Comment