ಕಾರವಾರ:
ಪಹರೆ ವೇದಿಕೆಯವರು 150ನೇ ಸ್ವಚ್ಚತಾ ವಾರದ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ಜನರಿಗಾಗಿ ಮುಕ್ತ ಪ್ರಬಂಧ ಸ್ಪರ್ಧೆ ನಡೆಸುತ್ತಿದ್ದಾರೆ.
ಇ-ತ್ಯಾಜ್ಯ ನಿರ್ವಹಣೆ ಎಂಬ ವಿಷಯದ ಕುರಿತು 200 ಪದಗಳ ಮಿತಿಯಲ್ಲಿ ಕನ್ನಡ ಅಥವಾ ಇಂಗ್ಲೀಷ್ ಭಾಷೆಯಲ್ಲಿ ಪ್ರಬಂಧ ಬರೆಯಬಹುದು. ಅ. 17ರ ಒಳಗೆ ಪ್ರಬಂಧವನ್ನು ನಿರ್ಣಾಯಕರಿಗೆ ತಲುಪಿಸುವಂತೆ ಕೋರಿದೆ. ಸ್ಪರ್ಧೆಯ ಪ್ರಥಮ ಬಹುಮಾನ 3ಸಾವಿರ, ದ್ವಿತೀಯ 2ಸಾವಿರ ಹಾಗೂ ತೃತೀಯ 1ಸಾವಿರ ಎಂದು ಇರಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಹೆಸರು, ವಿಳಾಸ ಹಾಗೂ ಸಂಪರ್ಕ ಸಂಖ್ಯೆ ನಮೂದಿಸುವದು ಕಡ್ಡಾಯ. ಮಾಹಿತಿಗೆ ಜೆ.ಡಿ ಮನೋಜ (8762613441)ರನ್ನು ಸಂಪರ್ಕಿಸಬಹುದಾಗಿದೆ.
Leave a Comment