• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಬಹಿರಂಗ ಜೂಜಾಟವನ್ನು ಕೂಲಡೇ ಬಂದ್ ಮಾಡಬೇಕು ಎಂದು ;ಮನವಿ

October 21, 2017 by Sachin Hegde Leave a Comment

ಹಳಿಯಾಳ:

ತಾಲೂಕಿನ ಪಟ್ಟಣ, ಗ್ರಾಮೀಣ ಭಾಗದಲ್ಲಿ ಹಾಗೂ ರಿಕ್ರೇಶನ್ ಕ್ಲಬ್‍ಗಳಲ್ಲಿ ಮೀತಿ ಮೀರಿ ರಾಜಾರಾಷೋವಾಗಿ ನಡೆದಿರುವ ಗ್ಯಾಂಬ್ಲಿಂಗ್(ಜೂಜು) ಹಾವಳಿಯನ್ನು ಕೂಡಲೇ ತಡೆಗಟ್ಟಬೇಕು ಇಲ್ಲವಾದಲ್ಲಿ ಸಂಬಂಧಿಸಿದ ಇಲಾಖೆಗಳ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಹಳಿಯಾಳ ತಾಲೂಕ ಬಿಜೆಪಿ ಘಟಕ ಮನವಿ ಸಲ್ಲಿಸುವ ಮೂಲಕ ತಾಲೂಕಾಡಳಿತಕ್ಕೆ ಎಚ್ಚರಿಕೆ ನೀಡಿದೆ.
ಇಲ್ಲಿಯ ಮಿನಿ ವಿಧಾನಸೌಧಕ್ಕೆ ತೆರಳಿದ ಬಿಜೆಪಿ ಪದಾಧಿಕಾರಿಗಳ ನಿಯೋಗವು ತಹಸೀಲ್ದಾರ ವಿದ್ಯಾಧರ ಗುಳಗುಳೆ ಹಾಗೂ ಸಿ.ಪಿ.ಐ ಸುಂದ್ರೇಶ ಹೊಳೆಣ್ಣನವರರೊಂದಿಗೆ ಸಭೆ ನಡೆಸಿ ಗ್ಯಾಂಬ್ಲಿಂಗ್ ಜೂಜಾಟ, ಬೆಟ್ಟಿಂಗ್‍ನಿಂದ ಕುಟುಂಬದ ಮೇಲಾಗುವ ಹಾಗೂ ಸಾಮಾಜಿಕ ಸ್ವಾಸ್ಥ್ಯ ಹದಗೆಡುವುತ್ತಿರುವುದರ ಬಗೆಗೆ ಸುಧೀರ್ಘ ಚರ್ಚಿಸಿ ಬಳಿಕ ಮನವಿಯನ್ನು ಸಲ್ಲಿಸಿದರು.
ರಿಕ್ರೇಶನ್ ಕ್ಲಬ್-ಯುವಕ ಮಂಡಳಗಳ ಹೆಸರಿನಲ್ಲಿ ಪರವಾನಿಗೆ ಪಡೆದು ಅಲ್ಲಿ ಅನಧಿಕೃತವಾಗಿ ಇಸ್ಫೀಟ್ ಆಡಿಸಲಾಗುತ್ತಿದ್ದು ಇದರಿಂದ ಯುವಜನಾಂಗ ದಾರಿ ತಪ್ಪುತ್ತಿದ್ದಾರೆ. ತಾಲೂಕಿನಲ್ಲಿ ನಡೆದಿರುವ ಗ್ಯಾಂಬ್ಲಿಂಗ್ ಹಾಗೂ ದೀಪಾವಳಿಯ ನಿಮಿತ್ತ್ಯ ಆರಂಭಗೊಂಡ ಬಹಿರಂಗ ಜೂಜಾಟವನ್ನು ಕೂಡಲೇ ಬಂದ್ ಮಾಡಬೇಕೆಂದು ಗಡವು ನೀಡಿದ್ದಾರೆ, ಇಲ್ಲವಾದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಮನವಿಯಲ್ಲಿ ನೀಡಲಾಗಿದೆ.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಶಾಸಕ ಸುನೀಲ್ ಹೆಗಡೆ ಹಳಿಯಾಳ ಬಸ್ ನಿಲ್ದಾಣ ರಸ್ತೆ ಸೇರಿದಂತೆ ಪಟ್ಟಣದ ಹೃದಯ ಭಾಗದಲ್ಲಿ ರಿಕ್ರೇಶನ್ ಕ್ಲಬ್ ಹೆಸರಿನಲ್ಲಿ ರಾಜಾರೋಷವಾಗಿ ಜೂಜು ಇದಷ್ಟೇ ಅಲ್ಲದೇ ಬೆಟ್ಟಿಂಗ್, ಮಟಕಾ, ವೈಶ್ಯಾವಾಟಿಕೆ ಇನ್ನಿತರ ಅನೃತಿಕ ಹಾಗೂ ಅಕ್ರಮ ಚಟುವಟಿಕೆಗಳನ್ನು ನಡೆಸಲಾಗುತ್ತಿದ್ದು ಈ ದಂಧೆಗಳಲ್ಲಿ ಕೆಲವು ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಭಾಗಿಯಾಗಿರುವುದು ದುರದೃಷ್ಠಕರ ಎಂದಿರುವ ಅವರು ಈ ಬಗ್ಗೆ ತಾವು ಪೋಲಿಸ್ ಮಹಾನಿರ್ದೇಶಕ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅವರಿಗೆ ದೂರು ನೀಡಿದ್ದು ಈ ದಂಧೆಗಳಿಗೆ ಸಂಪೂರ್ಣ ಕಡಿವಾಣ ಹಾಕಬೇಕು ಇಲ್ಲವಾದಲ್ಲಿ ತಾಲೂಕಾಡಳಿತ, ಪೋಲಿಸ್ ಠಾಣೆ ಎದುರು ನೊಂದ ಕುಟುಂಬಗಳ ಜೊತೆ ತಮ್ಮ ಮುಂದಾಳತ್ವದಲ್ಲಿ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.

ಮನವಿ ಸಲ್ಲಿಸುವಾಗ ಬಿಜೆಪಿ ಅಧ್ಯಕ್ಷ ಶಿವಾಜಿ ನರಸಾನಿ, ಮುಖಂಡರಾದ ವಿ.ಎಮ್.ಪಾಟೀಲ, ಅನಿಲ ಮುತ್ನಾಳ, ಉದಯ ಹೂಲಿ, ಉಮೇಶ ದೇಶಪಾಂಡೆ, ಅಣ್ಣಪ್ಪ ಬಂಡಿವಾಡ, ನಾರಾಯಣ ಬೆಳಗಾಂವಕರ, ಪ್ರದೀಪ ಹಿರೇಕರ, ಬಸಣ್ಣ ಕುರುಬಗಟ್ಟಿ, ಇಲಿಯಾಸ ಬಳಿಗಾರ, ರಾಘು ನಾಯ್ಕÀ, ಅಣ್ಣಪ್ಪಾ ವಡ್ಡರ ಇತರರು ಇದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News Tagged With: ಅಕ್ರಮ ಚಟುವಟಿಕೆ, ಇನ್ನಿತ, ಎಂದು, ಕೂಲಡೇ ಬಂದ್ ಮಾಡಬೇಕು, ಗ್ಯಾಂಬ್ಲಿಂಗ್ ಜೂಜಾಟ, ಗ್ಯಾಂಬ್ಲಿಂಗ್(ಜೂಜು) ಹಾವಳಿ, ತಾಲೂಕಾಡಳಿತಕ್ಕೆ ಎಚ್ಚರಿಕೆ, ಬಹಿರಂಗ ಜೂಜಾಟ, ಬಿಜೆಪಿ ಘಟಕ ಮನವಿ, ಬೆಟ್ಟಿಂಗ್, ಬೆಟ್ಟಿಂಗ್‍ನಿಂದ, ಮಟಕಾ, ಮನವಿ, ಯುವಜನಾಂಗ ದಾರಿ, ರ ಅನೃತಿಕ, ರಾಜಾರಾಷೋವಾಗಿ, ರಿಕ್ರೇಶನ್ ಕ್ಲಬ್‍, ವಿದ್ಯಾಧರ ಗುಳಗುಳೆ ಹಾಗೂ ಸಿ.ಪಿ.ಐ ಸುಂದ್ರೇಶ, ವೈಶ್ಯಾವಾಟಿಕೆ, ಹಾಗೂ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,059 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar