• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸಾರಿಗೆ ಬಸ್ ನಲ್ಲಿ ಕುಡಿಯುವ ನೀರಿನ ಸೇವೆ – ಚಾಲಕನ ಕೆಲಸಕ್ಕೆ ಪ್ರಯಾಣಿಕರ ಮೆಚ್ಚುಗೆ

October 21, 2017 by Sachin Hegde Leave a Comment

ಕಾರವಾರ:

ಪ್ರಯಾಣಿಕರನೀರಿನ ದಾಹ ತೀರಿಸಲು ಸರ್ಕಾರಿ ಬಸ್ ಚಾಲಕರೊಬ್ಬರು ಬಸ್‍ನಲ್ಲಿ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಶಿರಸಿ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿರುವ ಚಾಲಕ ಕಮಲಾಕರ ಹಾನಗಲ್-ಶಿರಸಿ-ಪಣಜಿ ಮಾರ್ಗದಲ್ಲಿ ಚಲಿಸುವ ಬಸ್ಸಿನಲ್ಲಿ ಕಾರ್ಯ ನಿರ್ವಹಿಸುತ್ತಾರೆ. ನಿತ್ಯ ಪ್ರಯಾಣಿಕರಿಗಾಗಿ ಸ್ವತ ಖರ್ಚಿನಲ್ಲಿ 20ಲೀಟರ್‍ನ ನೀರಿನ ಟ್ಯಾಂಕ್ ಅಳವಡಿಸುವ ಮೂಲಕ ಪ್ರಯಾಣಿಕರ ಕುಡಿಯುವ ನೀರಿನ ದಾಹ ತೀರಿಸುತ್ತಿದ್ದಾರೆ. ಬಸ್ಸಿನಲ್ಲಿ ಪ್ರಯಾಣಿಸಬೇಕಾದರೆ ಪ್ರಯಾಣಿಕರಿಗೆ ಕುಡಿಯುವ ನೀರು ಸೇರಿದಂತೆ ಇನ್ನಿತರ ಸಾಮಗ್ರಿಗಳು ಬೇರೆದರೆ ಅವರೇ ತಂದುಕೊಳ್ಳಬೇಕು. ಐಷಾರಾಮಿ ಬಸ್ ಪ್ರಯಾಣಿಕರಿಗೆ ಈ ಹಿಂದೆ ಸಂಸ್ಥೆಯೇ ಕುಡಿಯುವ ನೀರಿನ ಬಾಟಲ್ ಒದಗಿಸುತ್ತಿತ್ತು. ಆದರೆ, ಈಗ ಅದನ್ನು ಸ್ಥಗಿತ ಮಾಡಲಾಗಿದೆ. ಹೀಗಿರುವಾಗ ಕಮಲಾಕರ್, ತಾವೇ ಕುಡಿಯುವ ನೀರಿನ ಪೂರೈಕೆ ಮಾಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಈ ಸೇವೆಯಲ್ಲಿ ತೊಡಗಿರುವ ಕಮಾಲಕರ ಕೆಲಸದ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಈ ಬಸ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರಂತೂ ನೀರು ಕುಡಿದು ಸಂತೃಪ್ತರಾಗುತ್ತಿದ್ದಾರೆ. ಬಸ್‍ನಲ್ಲಿ ನೀರು ಚೆಲ್ಲಿ ಗಲೀಜು ಆಗಬಾರದು ಎಂದು ಚಾಲಕ ಆಸನದ ಪಕ್ಕದಲ್ಲೇ ನೀರಿನ ಟ್ಯಾಂಕ್ ಅಳವಡಿಸಲಾಗಿದೆ. ನೀರು ಖಾಲಿಯಾದರೆ ಮತ್ತೆ ಶುದ್ದ ನೀರನ್ನು ತುಂಬಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗುತ್ತದೆ. ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಮಾಡಬೇಕಿದ್ದ ಕಾರ್ಯವನ್ನು ಚಾಲಕ ಮಾಡಿ ತೋರಿಸಿರುವ ಬಗ್ಗೆ ಪ್ರಯಾಣಿಕರು ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಹಾನಗಲ್ – ಶಿರಸಿ – ಪಣಜಿ ಮಾರ್ಗ ಬಹುದೂರದ ಪ್ರಯಾಣವಾಗಿದೆ. ಸಾಕಷ್ಟು ಜನರು ಬಸ್ಸಿನಲ್ಲಿ ಪ್ರಯಾಣಿಸುತ್ತಾರೆ. ಅದರಂತೆ ಬಡವರು ಸಹ ಬಸ್ಸಿನಲ್ಲಿರುತ್ತಾರೆ. ಹೀಗಾಗಿ ಜನರ ದಾಹ ತಣಿಸಬೇಕು ಎನ್ನವು ದೃಷ್ಟಿಯಿಂದ ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವದಾಗಿ ಚಾಲಕ ಕಮಲಾಕರ ತಿಳಿಸಿದರು.

watermarked H20 KAR01A

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Karwar News Tagged With: 20, ಅವರೇ, ಉಚಿತ ಕುಡಿಯುವ, ಕುಡಿಯುವ ನೀರಿನ ಸೇವೆ, ಚಾಲಕನ ಕೆಲಸಕ್ಕೆ, ತಂದುಕೊಳ್ಳಬೇಕು. ಐಷಾರಾಮಿ ಬಸ್, ನೀರಿನ ಟ್ಯಾಂಕ್, ನೀರಿನ ವ್ಯವಸ್ಥೆ, ಪ್ರಯಾಣಿಕರ, ಮೆಚ್ಚುಗೆ, ಲೀಟರ್‍ನ, ಸಾಮಗ್ರಿಗಳು ಬೇರೆದರೆ, ಸಾರಿಗೆ ಬಸ್ ನಲ್ಲಿ, ಹಾನಗಲ್-ಶಿರಸಿ-ಪಣಜಿ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...