ಕುಮಟಾ. ತಾಲೂಕಿನ ಕೋಡ್ಕಣಿಯಲ್ಲಿ ಯಂಗ್ ಸ್ಟಾರ ಕ್ರಿಕೆಟ್ ಕ್ಲಬ್ ಇವರ ಆಶ್ರಯದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪಂದ್ಯಾವಳಿಯನ್ನು ಉದ್ಯಮಿ ಸುಬ್ರಾಯ ವಾಳ್ಕೆ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಪಂದ್ಯಾವಳಿಗಳ ಧ್ಯೇಯೋದ್ದೇಶಗಳ ಕುರಿತು ವಿವರಿಸಿ ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಬಿಜೆಪಿ ಮುಖಂಡ ನಾಗರಾಜ ನಾಯಕ ತೊರ್ಕೆ ಮಾತನಾಡಿ ಸುದೀರ್ಘವಾಗಿ 31 ವರ್ಷಗಳ ಕಾಲ ಇಂತಹ ಕ್ರಿಕೆಟ್ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿರುವ ಸಂಘಟಕರ ಸಂಘಟನಾ ಚಾತುರ್ಯ ಶ್ಲಾಘನೀಯವಾದದ್ದು. ಉತ್ತಮ ಪರಿಸರ ಹೊಂದಿರುವ ಈ ಕ್ರೀಡಾಂಗಣದಲ್ಲಿ ಆರೇಳು ದಿನಗಳವರೆಗೆ ಈ ಪಂದ್ಯಾವಳಿ ಜರುಗುತ್ತಿದ್ದು ಈ ಭಾಗದ ಜನರಿಗೆ ಕ್ರೀಡಾ ಮನರಂಜನೆಯನ್ನು ಒದಗಿಸುತ್ತಿದೆ. ಕ್ರೀಡಾಕೂಟಗಳು ಸಂಘಟನೆಯ ಒಂದು ಸಾಧನವಾಗಿದೆ. ಸೋಲು ಗೆಲುವುಗಳು ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿದ್ದು ಸೋತಾಗ ಕುಗ್ಗದೇ ಗೆದ್ದಾಗ ಅತಿಯಾಗಿ ಹಿಗ್ಗದೇ ಸೋಲು ಗೆಲುವುಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಪ್ರವೃತ್ತಿಯನ್ನು ಕ್ರೀಡೆಗಳು ಕಲಿಸುತ್ತವೆ. ಅಲ್ಲದೇ ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ಒದಗಿಸುತ್ತವೆ ಎಂದುರು.
ಗ್ರಾಮ ಪಂಚಾಯತ ಅಧ್ಯಕ್ಷೆ ಸುಮಿತ್ರಾ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷೀಯ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ ಸದಸ್ಯ ಈಶ್ವರ ಎಚ್. ನಾಯ್ಕ, ಮಂಜುನಾಥ ಆರ್. ನಾಯ್ಕ, ಪ್ರಕಾಶ ನಾಯ್ಕ, ವಿನಾಯಕ ಎಚ್. ನಾಯ್ಕ, ಚಂದ್ರಶೇಖರ ಗುನಗ, ದತ್ತಾತ್ರೇಯ ಅಂಬಿಗ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮಹೇಶ ಆಚಾರ್ಯ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.
Leave a Comment