ಕಾರವಾರ:
ದಿ ಎಮೆರೇಟ್ಸ್ ಏರ್ ಲೈನ್ ಸೌಜನ್ಯ ಹಾಗೂ ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಇಂಪ್ಯಾಕ್ಸ್ ಇಂಡಿಯಾ ಪೌಂಡೇಶನರವರ ವತಿಯಿಂದ ಜಿಲ್ಲೆಯ ಕುಮಟಾ ರೇಲ್ವೆ ನಿಲ್ದಾಣದಲ್ಲಿ ಅಕ್ಟೋಬರ 29 ರಿಂದ ನವ್ಹಂಬರ 18ರ ವರೆಗೆ ಸಂಚಾರಿತ ಲೈಪ್‍ಲೈನ್ ಎಕ್ಸ್‍ಪ್ರೇಸ್ ಉಚಿತ ಆರೋಗ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಶುಲ್ಕರಹಿತ ತಪಾಸಣಾ ಚಿಕಿತ್ಸೆಯನ್ನು ಸುಪ್ರಸಿದ್ದ ಪರಿಣಿತ ಚಿಕಿತ್ಸಕರಿಂದ ಕಣ್ಣಿನ ತಪಾಸಣೆ, ಕಿವಿ ರೋಗ, ಹಾಗೂ ಸುಟ್ಟ ಗಾಯಗಳಿಂದ ಸಂಕೋಚನವಾದವುಗಳ ಚಿಕಿತ್ಸೆ, ಪೋಲಿಯೋ ತಪಾಸಣೆ , ಸ್ತ್ರೀರೋಗ ತಪಾಸಣೆ, ಬಾಯಿ ರೋಗ ತಪಾಸಣೆ ಮತ್ತು ಚಿಕಿತ್ಸೆ, ದಂತಗಳ ತಪಾಸಣೆ ಮತ್ತು ಚಿಕಿತ್ಸೆ, ಮುರ್ಛೆರೋಗಳಿಗೆ ಸೂಕ್ತವಾದ ಚಿಕಿತ್ಸೆ ಮತ್ತು ಕುಟುಂಬ ಯೋಜನೆಯ ಸೇವೆಗಳು ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ನಡೆಯುತ್ತವೆ. ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಸೇವೆಗಳ ಪ್ರಯೋಜನವನ್ನು ಸಾರ್ವಜನಿಕರುನ ಪಡೆದುಕೊಳ್ಳಬಹುದಾಗಿದೆ.
ಹೆಚ್ಚಿನ ಮಹಿತಿಗಾಗಿ ಮತ್ತು ಸಹಕಾರಕ್ಕಾಗಿ ಲೈಫ್ ಲೈನ್ ಇಂಪ್ಯಾಕ್ಟ ಇಂಡಿಯಾ ಫೌಂಡೇಶನ್ ಯೋಜನಾ ಉಪನಿರ್ದೇಕÀ ನೋಡೆಲ ಅಧಿಕಾರಿ ಡಾ|| ಯಾಗ್ನಿಕ್ ವಾಝಾ (ದೂರವಾಣಿ 7022252221)ಹಾಗೂ 08386222021 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Leave a Comment