ಕಾರವಾರ:
ಗೋವಾದಿಂದ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ವ್ಯಕ್ತಿಯೊಬ್ಬರನ್ನು ಬಂಧಿಸಿದ ಘಟನೆ ಅನಮೋಡ ತನಿಖಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಲಾರಿಯೊಂದರಲ್ಲಿ ತುಂಬಿಸಲಾದ ಕಟ್ಟಿಗೆ ತಳಭಾಗದಲ್ಲಿ 1.15ಲಕ್ಷ ಮೌಲ್ಯದ 373.140 ಲೀಟರ್ ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಲಾರಿ ತಪಾಸಣೆ ನಡೆಸಿದ ಅಧಿಕಾರಿಗಳು ಆರೋಪಿ ಚಾಲಕ ಕೃಷ್ಣಾ ಮಾರುತಿ ಪರವರ ಎಂಬಾತನನ್ನು ಬಂಧಿಸಿದ್ದಾರೆ. ಲಾರಿಯಲ್ಲಿದ್ದ ವಸ್ತುಗಳು ರಾಮನಗರದ ಹುಸೇನಸಾಬ್ ಮುಲ್ಲಾ ಹಾಗೂ ಸಂತೋಷ ವಸಂತ ಮಿರಾಶಿ ಎಂಬಾತರಿಗೆ ತಲುಪುತ್ತಿದ್ದವು ಎಂಬುದನ್ನು ಅರಿತ ಅಧಿಕಾರಿಗಳು ಅವರ ವಿರುದ್ದವೂ ಪ್ರಕರಣ ದಾಖಲಿಸಿದ್ದಾರೆ. ಕಾರ್ಯಚರಣೆಯಲ್ಲಿ ಅನಮೋಡ ತನಿಖಾ ಠಾಣೆಯ ಅಬಕಾರಿ ಉಪ ನಿರೀಕ್ಷಕ ಕೆ. ಮನೋಹರ, ಶ್ರೀಕಾಂತ ಅಸೋದೆ ಹಾಗೂ ಸಿಬ್ಬಂದಿ ಎಂ. ಎಚ್. ಅನಮಟ್ಟಿ, ಪುಷ್ಪಾ ಜೊಗಳೇಕರ, ಎಸ್. ಬಿ. ಬನ್ಸೋಡೆ, ಶ್ರೀಕಾಂತ ಜಾಧವ ಮತ್ತು ಯಲ್ಲಾಪುರ ಉಪ ವಿಭಾಗದ ಅಬಕಾರಿ ನಿರೀಕ್ಷಕ ಜಿ. ಎಸ್. ನಾಯ್ಕ ಭಾಗವಹಿಸಿದ್ದರು.
Leave a Comment