ಕಾರವಾರ:
ಅಕ್ಟೋಬರ್ 30 ರಂದು ಮಡಿವಾಳ ಸಮಾಜದವರಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಯಲಿದೆ.
ಮಡಿವಾಳ ಸಮಾಜದವರನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು. ಸರಕಾರ ನೇಮಿಸಿದ ಡಾ. ಅನ್ನಪೂರ್ಣಮ್ಮ ತಂಡದ ವರದಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ ನಡೆಯಲಿದೆ. ದೇಶದ 18 ರಾಜ್ಯ ಹಾಗೂ 5 ಕೇಂದ್ರಾಡಳಿತ ಪ್ರದೇಶದಲ್ಲಿ ಮಡಿವಾಳ ಸಮಾಜದ ಕುಲ ಕಸುಬಿನ ಆಧಾರದ ಮೇಲೆ ಕೆಲಸ ಮಾಡುವ ಜನರಿದ್ದು, ಕರ್ನಾಟಕ ಸರಕಾರ 1978 ರಿಂದ ಇಂದಿನವರೆಗೂ ತಮ್ಮ ಬೇಡಿಕೆ ಈಡೇರಿಸಿಲ್ಲ. ಹೀಗಾಗಿ ಅ. 30 ರಂದು ಕರ್ನಾಟಕ ರಾಜ್ಯದಾದ್ಯಂತ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಂಡಿರುವದಾಗಿ ಪ್ರಕಟಣೆ ತಿಳಿಸಿದೆ. ಕಾರವಾರದ ಮಿತ್ರ ಸಮಾಜ ಬಯಲಿನಲ್ಲಿ ಸಮಾಜ ಬಾಂಧವರು 11.30ಕ್ಕೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಲಿದ್ದಾರೆ. ನಂತರ ಮನವಿ ಸಲ್ಲಿಕೆ ನಡೆಯಲಿದೆ ಎಂದು ಸಂಘಟನೆ ಪ್ರಮುಖ ವಿ.ಬಿ ಹೊಸೂರು ತಿಳಿಸಿದ್ದಾರೆ.
Leave a Comment