• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಎಂಟು ವರ್ಷ ಕಳೆದರೂ ಕೇಂದ್ರ ಸರ್ಕಾರದ ಪರಿಹಾರ ಬಂದಿಲ್ಲ

October 28, 2017 by Sachin Hegde Leave a Comment

ಕಾರವಾರ: 2009ರ ಅಕ್ಟೋಬರ್ 2ರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಬಾರೀ ಮಳೆಗೆ ಕಡವಾಡದಲ್ಲಿ ಗುಡ್ಡ ಕುಸಿತ ನಡೆದು 22 ಮಂದಿ ಸಾವನಪ್ಪಿದ್ದರು. ಹೀಗೆ ಸಾವನಪ್ಪಿದವರ ಕುಟುಂಬದವರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ತಲಾ 1 ಲಕ್ಷ ರೂ ಪರಿಹಾರ ಘೋಷಿಸಿದ್ದು, ಎಂಟು ವರ್ಷ ಕಳೆದರೂ ಕೇಂದ್ರ ಸರ್ಕಾರದ ಪರಿಹಾರ ಬಂದಿಲ್ಲ.
ಅಂದು ಸುರಿದ ಮಳೆಗೆ ಉತ್ತರ ಕನ್ನಡ ಜಿಲ್ಲೆ ಸಂಪೂರ್ಣವಾಗಿ ನಲುಗಿ ಹೋಗಿತ್ತು. ಕಡವಾಡದ ಝರಿವಾಡ ಗ್ರಾಮದಲ್ಲಿನ ಗುಡ್ಡ ಕುಸಿದಿತ್ತು. ಈ ದುರಂತದಲ್ಲಿ 1,636 ಮನೆಗಳು ಹಾನಿಗೊಳಗಾಗಿದ್ದವು. 2,461 ಮಂದಿ ಸಂತ್ರಸ್ತರಾಗಿದ್ದರು. 21 ಗಂಜಿ ಕೇಂದ್ರಗಳನ್ನು ತೆರೆದು ಸಂತ್ರಸ್ಥರಿಗೆ ಆಶ್ರಯ ಒದಗಿಸಲಾಗಿತ್ತು. ಘಟನೆಯಲ್ಲಿ 22 ಮಂದಿ ಮಣ್ಣಿನಡಿ ಸಿಲುಕಿ ಸಾವು ಕಂಡಿದ್ದರು. ವಾರಗಳ ನಂತರ ಒಬ್ಬರಾದ ಮೇಲೆ ಒಬ್ಬರಂತೆ ಮೃತ ದೇಹಗಳು ದೊರೆತಿದ್ದವು. 200ಕ್ಕೂ ಅಧಿಕ ಮಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಕೆಲವರ ಕುರುಹುಗಳು ಮಾತ್ರ ದೊರೆತಿದ್ದು, ಉಳಿದವು ಮಣ್ಣಿನಲ್ಲಿಯೇ ಮಣ್ಣಾಗಿ ಹೋಗಿದ್ದವು. ಘಟನೆ ನಂತರ ಹಲವು ನಾಯಕರು ಸ್ಥಳ ಭೇಟಿ ಮಾಡಿದರು. ವಿವಿಧ ಆಶ್ವಾಸನೆಗಳನ್ನು ನೀಡಿದರು. ಅಂದಿನ ರಾಜ್ಯ ಸರ್ಕಾರ ಮೃತರ ಕುಟುಂಬದವರಿಗೆ 1 ಲಕ್ಷ ರೂ ಪರಿಹಾರ ಘೋಷಿಸಿತು. ಕೇಂದ್ರ ಸರ್ಕಾರವೂ 1 ಲಕ್ಷ ರೂ ಪರಿಹಾರ ಘೋಷಿಸಿತು. ಆದರೆ, ಘಟನೆಯಿಂದ ನೊಂದಿರುವ ರಾಜನ್ ಕೊಠಾರಕರ್ ಎಂಬಾತರಿಗೆ ಈವರೆಗೂ ಕೇಂದ್ರ ಸರ್ಕಾರ ಘೋಷಿಸಿದ ಹಣ ಬಂದಿಲ್ಲ.
ಘಟನೆ ನಡೆದ ದಿನ ರಾಜನ್ ಗೋವಾದಲ್ಲಿದ್ದರು. ಕೂಲಿ ಕೆಲಸ ಮಾಡಿ ಬದುಕುವ ಇವರಿಗೆ ಗೋವಾದಲ್ಲಿ ಕೆಲಸವಿದ್ದ ಕಾರಣ ಬದುಕುಳಿದರು. ರಭಸ ಮಳೆಯಿದ್ದ ಕಾರಣ ನಾಲ್ಕೈದು ದಿನಗಳ ಕಾಲ ಯಾವದೇ ಸಂಪರ್ಕ ಸಾದ್ಯವಾಗಿರಲಿಲ್ಲ. ಕೆಲಸ ಮುಗಿಸಿ ಬರುವ ವೇಳೆಗಾಗಲೇ ತಾಯಿ, ತಂಗಿ ಹಾಗೂ ತಮ್ಮ ದುರಂತದಲ್ಲಿ ಮಣ್ಣುಪಾಲಾಗಿದ್ದರು. ಇದಾಗಿ ತಿಂಗಳ ನಂತರ ಇವರ ಖಾತೆಗೆ ರಾಜ್ಯ ಸರ್ಕಾರ ಘೋಷಿಸಿದ 1ಲಕ್ಷ ರೂ ಪರಿಹಾರ ಬಂದಿದೆ. ಆದರೆ, ಕೇಂದ್ರ ಸರ್ಕಾರ ಇನ್ನು ಹಣ ನೀಡಿಲ್ಲ. ಈ ಘಟನೆಯಲ್ಲಿ ಮಣ್ಣು ಪಾಲಾಗಿದ್ದ ಬಹುತೇಕ ಕುಟುಂಬದವರಿಗೆ ಕೇಂದ್ರದಿಂದ ಪರಿಹಾರ ಬಂದಿದೆ. ಆದರೆ, ಇವರಿಗೆ ಅದು ತಪ್ಪಿ ಹೋಗಿದೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳನ್ನು ಭೇಟಿ ಮಾಡಿದರೂ ಯಾವದೇ ಪ್ರಯೋಜನವಾಗಿಲ್ಲ ಎಂದು ರಾಜನ್ ಅಳಲು ತೋಡಿಕೊಂಡರು.

*********************

ಗುಡ್ಡ ಕುಸಿತದ ವೇಳೆ ಪಾಲಕರನ್ನು ಕಳೆದುಕೊಂಡು ಅನಾಥರಾಗಿದ್ದ ಮೂವರು ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಳ್ಳುವದಾಗಿ ಸಂಸದ ಅನಂತಕುಮಾರ ಹೆಗಡೆ ಘೋಷಿಸಿದ್ದರು. ಆದರೆ, ಈವರೆಗೂ ಅವರಿಗೆ ಅನಂತರಿಂದ ಯಾವದೇ ಸಹಾಯವಾಗಿಲ್ಲ. ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ ನಿರಾಶ್ರಿತರಾದ ವಿದ್ಯಾವಂತರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಅದೂ ಈಡೇರಿಲ್ಲ. ಹೀಗಾಗಿ ರಾಜನ್ ಈ ಬಗ್ಗೆ ಜಿಲ್ಲಾಡಳಿತದ ಮೂಲಕ ಪ್ರಧಾನಿಗೆ ಪತ್ರ ಬರೆದಿದ್ದಾರೆ.

********************

1. ಗುಡ್ಡ ಕುಸಿತದಿಂದ ಸಂತ್ರಸ್ಥರಾದವರಿಗೆ ಸರ್ಕಾರ ನ್ಯಾಯ ಕೊಡಿಸಬೇಕು. ರಾಜನ್‍ರಂತಹ ಹಲವು ಕುಟುಂಬದವರಿಗೆ ಪರಿಹಾರ ಸಿಗದ ಸಾದ್ಯತೆಗಳಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಜರುಗಿಸಬೇಕು.

– ಮಾಧವ ನಾಯಕ, ಅಧ್ಯಕ್ಷರು ಜನಶಕ್ತಿ ವೇದಿಕೆ
2. ಕೇಂದ್ರ ಸರ್ಕಾರದಿಂದ ಪರಿಹಾರ ಬಾರದಿರುವ ಬಗ್ಗೆ ವಿಚಾರಿಸಲಾಗುವದು. ರಾಜನ್ ಅವರಿಂದ ಸ್ವೀಕರಿಸಿದ ಮನವಿಯನ್ನು ಪ್ರಧಾನಿ ಕಚೇರಿಗೆ ರವಾನಿಸಿ ಸಂತ್ರಸ್ಥರಿಗೆ ನ್ಯಾಯ ದೊರಕಿಸಿಕೊಡುವ ಪ್ರಯತ್ನ ನಡೆಸಲಾಗುತ್ತದೆ.
– ಎಚ್. ಪ್ರಸನ್ನ, ಅಪರ ಜಿಲ್ಲಾಧಿಕಾರಿ. ಉತ್ತರ ಕನ್ನಡ

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News, Karwar News Tagged With: 1, 200ಕ್ಕೂ ಅಧಿಕ ಮಂದಿ, 636 ಮನೆ, ಉತ್ತರ ಕನ್ನಡ ಜಿಲ್ಲೆ, ಎಂಟು ವರ್ಷ, ಕಳೆದರೂ, ಕೇಂದ್ರ ಸರ್ಕಾರ ತಲಾ 1 ಲಕ್ಷ, ಕೇಂದ್ರ ಸರ್ಕಾರದ, ಗುಡ್ಡ ಕುಸಿತ ನಡೆದು 22 ಮಂದಿ, ಝರಿವಾಡ ಗ್ರಾಮ, ತಂಗಿ ಹಾಗೂ ತಮ್ಮ, ತಾಯಿ, ಪರಿಹಾರ ಬಂದಿಲ್ಲ, ಮೃತರ ಕುಟುಂಬ, ಸುರಿದ ಬಾರೀ ಮಳೆ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,059 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar