ಹೊನ್ನಾವರ. ಇಲ್ಲಿನ ಕವಲಕ್ಕಿಯ ಶ್ರೀ ಸುಬ್ರಹ್ಮಣ್ಯ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ರಾಗಶ್ರೀ ಸಂಗೀತ-ಸಾಂಸ್ಕøತಿಕ ಸಂಸ್ಥೆ (ರಿ.) ಹಡಿನಬಾಳ ಇದರ ಆಶ್ರಯದಲ್ಲಿ ಪದ್ಮಶ್ರೀ ದಿ| ಚಿಟ್ಟಾಣಿ ರಾಮಚಂದ್ರ ಹೆಗಡೆ ಸಂಸ್ಕರಣ ಕಾರ್ಯಕ್ರಮದ ಅಂಗವಾಗಿ ಉತ್ತಮ ಶಾಸ್ತ್ರೀಯ ಸಂಗೀತ ಪ್ರಿಯರಾದ ಅವರಿಗೆ ನಾದನಮನ – ನುಡಿನಮನ ಹಾಗೂ ಯಕ್ಷ ನಮನ ಕಾರ್ಯಕ್ರಮವನ್ನು ಏರ್ಪಡಿಸಿ ಶೃದ್ಧಾಂಜಲಿ ಸಲ್ಲಿಸಲಾಯಿತು. ನಾದ ನಮನದಲ್ಲಿ ರಾಗಶ್ರಿ ವಿದ್ಯಾರ್ಥಿನಿ ಕುಮಾರಿ ಭಾಗ್ಯಲಕ್ಷ್ಮೀ ಭಟ್ಟ ಇವಳಿಗೆ ವಿನಾಯಕ ಹಾಗೂ ಹರಿಶ್ಚಂದ್ರ ನಾಯ್ಕ ತಬಲಾ ಹಾರ್ಮೋನಿಯಂ ಸಾಥ್ ನೀಡಿದರು.
ಪಂ| ಅಶೋಕ ಹುಗ್ಗಣ್ಣವರ ನಾದನಮನ ಸಮರ್ಪಿಸಿದರು. ಇವರಿಗೆ ಪಂ | ಗೋಪಾಲಕೃಷ್ಣ ಹೆಗಡೆ ಕಲ್ಬಾಗ ತಬಲಾ ಸಾಥ್ನ್ನು ವಿಶ್ವೇಶ್ವರ ಭಟ್ಟ ಸಂವಾದಿನಿ ಸಾಥ್ ನೀಡಿದರು. ನಂತರ ನುಡಿನಮನದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಜಲವಳ್ಳಿ ವೆಂಕಟೇಶ ರಾವ್ ಚಿಟ್ಟಾಣಿಯವರ ಆತ್ಮೀಯ ಸಂಬಂಧ ನೆನೆದು ಬಾವುಕರಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಮಾತನಾಡಿ ಚಿಟ್ಟಾಣಿಯವರ ಘರಾಣಿಯ ಅಧ್ಯಯನ ಕೇಂದ್ರ ಆಗಬೇಕೆಂದು ಆಶಿಸಿದರು.
ಹಿರಿಯ ಪತ್ರಕರ್ತರಾದ ಜಿ.ಯು. ಭಟ್ಟ, ಪಿ.ಎಸ್.ಭಟ್ಟ ಉಪ್ಪೋಣಿ ಪ್ರಾಚಾರ್ಯ, ಎಸ್.ಜಿ. ಭಟ್ಟ, ವೆಂಕಟರಮಣ ಹೆಗಡೆ ಕವಲಕ್ಕಿ, ಟಿ.ಎಸ್.ಹೆಗಡೆ, ಡಾ| ಎಚ್.ಎಸ್. ಅನುಪಮಾ, ಆರ್.ಟಿ.ಭಟ್ಟ, ಚಿಟ್ಟಾಣಿÀ ಮಗ ನಾರಾಯಣ ಹೆಗಡೆ ಕ.ಸಾ.ಪ. ಅಧ್ಯಕ್ಷ ನಾಗರಾಜ ಹೆಗಡೆ ಅಪಗಾಲ, ರಾಗಶ್ರೀ ಅಧ್ಯಕ್ಷ ವಿದ್ವಾನ ಶಿವಾನಂದ ಭಟ್ಟ ವೇದಿಕೆಯಲ್ಲಿದ್ದು ಮಾತನಾಡಿದರು. ವಿ.ಜಿ. ಹೆಗಡೆ, ಕೆ.ವಿ. ಹೆಗಡೆ, ಗಜಾನನ ಹೆಗಡೆ ಯಕ್ಷಗಾನ ಕಲಾವಿದರ ಪರವಾಗಿ ಶ್ರೀಪಾದ ಹೆಗಡೆ ಹಡಿನಬಾಳ ಮಾತನಾಡಿ ನಾದ-ನುಡಿ ಯಕ್ಷ ನಮನ ಮಾಡಿಸಿಕೊಂಡ ಸರ್ವಶ್ರೇಷ್ಠ ಕಲಾವಿದ ಎಂದು ಬಣ್ಣಿಸಿದರು.
ಚಿಟ್ಟಾಣಿಯವರ ಕುರಿತು ಕಾವ್ಯ ವಾಚಿಸಿದರು. ನಂತರದಲ್ಲಿ ಶ್ರೀಪಾದ ಹೆಗಡೆ ಹಡಿನಬಾಳ, ಗಣಪತಿ ಹೆಗಡೆ ತೋಟಿ, ಚಂದ್ರಾಸ ನಾಯ್ಕ ಹುಡಗೋಡ, ಶಂಕರ ಹೆಗಡೆ, ನಿಲ್ಕೋಡ, ರಾಘು ನಾಯ್ಕ, ಶ್ರೀಪಾದ ಭಟ್ಟ, ಹಡಿನಬಾಳ ಇವರಿಂದ ಕವಿರತ್ನ ಕಾಳಿದಾಸ ಯಕ್ಷಗಾನ ಸಮರ್ಪಣೆ ಮಾಡಲಾಯಿತು.
ಸರ್ವೆಶ್ವರ ಮೂರೂರು ಗಜಾನನ ಭಂಡಾರಿ, ಶ್ರೀಧರ ಗೌಡ ಹಿಮ್ಮೇಳದಲ್ಲಿ ಸಹಕರಿಸಿದರು. ರಾಗಶ್ರೀ ಅಧ್ಯಕ್ಷ ವಿದ್ವಾನ ಎನ್.ಜಿ. ಹೆಗಡೆ, ಕ.ಸಾ.ಪ. ಕಾರ್ಯದರ್ಶಿ ಶಶಿಧರ ದೇವಾಡಿಗ ವಂದಿಸಿದರು. ಪ್ರಶಾಂತ ಹೆಗಡೆ ನಿರೂಪಿಸಿದರು.
*****************************************
ಚಿಟ್ಟಾಣಿಯವರ ಸಂಸ್ಕರಣೆಯಲ್ಲಿ ಅವರ ಹೆಸರು ಜೀವಂತವಾಗಿರುವಂತೆ ಚಿಟ್ಟಾಣಿಯವರ ಅಧ್ಯಯನ ಕೇಂದ್ರ ಸ್ಥಾಪಿಸಿದರು. ಚಿಟ್ಟಾಣಿಯವರ ಸಭಾಭವನ ನಿರ್ಮಾಣವಾಗಬೇಕು. ಚಿಟ್ಟಾಣಿಯವರ ಪ್ರತಿಮೆ ಹೊನ್ನಾವರದಲ್ಲಿ ಸ್ಥಾಪಿಸಬೇಕು. ಹೊನ್ನಾವರ ಕಾಲೇಜ ರಸ್ತೆಗೆ ಚಿಟ್ಟಾಣಿ ರಸ್ತೆ ಎಂದು ನಾಮಕರಣ ಮಾಡಬೇಕು. ಪಠ್ಯವಿಷಯದಲ್ಲಿ ಚಿಟ್ಟಾಣಿ ಚಿತ್ರಣ ಪಾಠ ಬರಬೇಕು. ಚಿಟ್ಟಾಣಿ ಮ್ಯೂಸಿಯಂ ತೆರೆಯಬೇಕು. ಚಿಟ್ಟಾಣಿ ಕುರಿತು ಪ್ರತಿವರ್ಷ ಒಂದು ಕಾರ್ಯಕ್ರಮ ನಡೆಸಿ ಅವರ ಹೆಸರಲ್ಲಿ ಪ್ರಶಸ್ತಿ ನೀಡಬೇಕು. ಚಿಟ್ಟಾಣಿ ಯಕ್ಷಗಾನ ಕಲಿಕಾ ಕೇಂದ್ರ ಸ್ಥಾಪನೆ ಮಾಡಬೇಕು. ಚಿಟ್ಟಾಣಿಯವರಿಗೆ ಮರಣೋತ್ತರ ಗೌರವ ಡಾಕ್ಟರೇಟ ನೀಡಬೇಕೆಂದು ಪದ್ಮಶ್ರೀ ಪ್ರಶಸ್ತಿ ತಂದು ಕೊಟ್ಟ ಅವರು ಸದಾ ಜನಮಾನಸದಲ್ಲಿ ಈ ರೀತಿಯಾಗಿ ಉಳಿಯುವಂತೆ ಮಾಡಲು ಸೇರಿದ ಗಣ್ಯರು ಅಭಿಮಾನಿಗಳು ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಅಭಿಪ್ರಾಯ ಪಟ್ಟರು
Leave a Comment