• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪದ್ಮಶ್ರೀ ಚಿಟ್ಟಾಣಿಯವರಿಗೆ ನಾದ-ನುಡಿ ಯಕ್ಷ ನಮನ

October 28, 2017 by Gaju Gokarna Leave a Comment

ಹೊನ್ನಾವರ. ಇಲ್ಲಿನ ಕವಲಕ್ಕಿಯ ಶ್ರೀ ಸುಬ್ರಹ್ಮಣ್ಯ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ರಾಗಶ್ರೀ ಸಂಗೀತ-ಸಾಂಸ್ಕøತಿಕ ಸಂಸ್ಥೆ (ರಿ.) ಹಡಿನಬಾಳ ಇದರ ಆಶ್ರಯದಲ್ಲಿ ಪದ್ಮಶ್ರೀ ದಿ| ಚಿಟ್ಟಾಣಿ ರಾಮಚಂದ್ರ ಹೆಗಡೆ ಸಂಸ್ಕರಣ ಕಾರ್ಯಕ್ರಮದ ಅಂಗವಾಗಿ ಉತ್ತಮ ಶಾಸ್ತ್ರೀಯ ಸಂಗೀತ ಪ್ರಿಯರಾದ ಅವರಿಗೆ ನಾದನಮನ – ನುಡಿನಮನ ಹಾಗೂ ಯಕ್ಷ ನಮನ ಕಾರ್ಯಕ್ರಮವನ್ನು ಏರ್ಪಡಿಸಿ ಶೃದ್ಧಾಂಜಲಿ ಸಲ್ಲಿಸಲಾಯಿತು. ನಾದ ನಮನದಲ್ಲಿ ರಾಗಶ್ರಿ ವಿದ್ಯಾರ್ಥಿನಿ ಕುಮಾರಿ ಭಾಗ್ಯಲಕ್ಷ್ಮೀ ಭಟ್ಟ ಇವಳಿಗೆ ವಿನಾಯಕ ಹಾಗೂ ಹರಿಶ್ಚಂದ್ರ ನಾಯ್ಕ ತಬಲಾ ಹಾರ್ಮೋನಿಯಂ ಸಾಥ್ ನೀಡಿದರು.
ಪಂ| ಅಶೋಕ ಹುಗ್ಗಣ್ಣವರ ನಾದನಮನ ಸಮರ್ಪಿಸಿದರು. ಇವರಿಗೆ ಪಂ | ಗೋಪಾಲಕೃಷ್ಣ ಹೆಗಡೆ ಕಲ್ಬಾಗ ತಬಲಾ ಸಾಥ್‍ನ್ನು ವಿಶ್ವೇಶ್ವರ ಭಟ್ಟ ಸಂವಾದಿನಿ ಸಾಥ್ ನೀಡಿದರು. ನಂತರ ನುಡಿನಮನದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಜಲವಳ್ಳಿ ವೆಂಕಟೇಶ ರಾವ್ ಚಿಟ್ಟಾಣಿಯವರ ಆತ್ಮೀಯ ಸಂಬಂಧ ನೆನೆದು ಬಾವುಕರಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಮಾತನಾಡಿ ಚಿಟ್ಟಾಣಿಯವರ ಘರಾಣಿಯ ಅಧ್ಯಯನ ಕೇಂದ್ರ ಆಗಬೇಕೆಂದು ಆಶಿಸಿದರು.
ಹಿರಿಯ ಪತ್ರಕರ್ತರಾದ ಜಿ.ಯು. ಭಟ್ಟ, ಪಿ.ಎಸ್.ಭಟ್ಟ ಉಪ್ಪೋಣಿ ಪ್ರಾಚಾರ್ಯ, ಎಸ್.ಜಿ. ಭಟ್ಟ, ವೆಂಕಟರಮಣ ಹೆಗಡೆ ಕವಲಕ್ಕಿ, ಟಿ.ಎಸ್.ಹೆಗಡೆ, ಡಾ| ಎಚ್.ಎಸ್. ಅನುಪಮಾ, ಆರ್.ಟಿ.ಭಟ್ಟ, ಚಿಟ್ಟಾಣಿÀ ಮಗ ನಾರಾಯಣ ಹೆಗಡೆ ಕ.ಸಾ.ಪ. ಅಧ್ಯಕ್ಷ ನಾಗರಾಜ ಹೆಗಡೆ ಅಪಗಾಲ, ರಾಗಶ್ರೀ ಅಧ್ಯಕ್ಷ ವಿದ್ವಾನ ಶಿವಾನಂದ ಭಟ್ಟ ವೇದಿಕೆಯಲ್ಲಿದ್ದು ಮಾತನಾಡಿದರು. ವಿ.ಜಿ. ಹೆಗಡೆ, ಕೆ.ವಿ. ಹೆಗಡೆ, ಗಜಾನನ ಹೆಗಡೆ ಯಕ್ಷಗಾನ ಕಲಾವಿದರ ಪರವಾಗಿ ಶ್ರೀಪಾದ ಹೆಗಡೆ ಹಡಿನಬಾಳ ಮಾತನಾಡಿ ನಾದ-ನುಡಿ ಯಕ್ಷ ನಮನ ಮಾಡಿಸಿಕೊಂಡ ಸರ್ವಶ್ರೇಷ್ಠ ಕಲಾವಿದ ಎಂದು ಬಣ್ಣಿಸಿದರು.
ಚಿಟ್ಟಾಣಿಯವರ ಕುರಿತು ಕಾವ್ಯ ವಾಚಿಸಿದರು. ನಂತರದಲ್ಲಿ ಶ್ರೀಪಾದ ಹೆಗಡೆ ಹಡಿನಬಾಳ, ಗಣಪತಿ ಹೆಗಡೆ ತೋಟಿ, ಚಂದ್ರಾಸ ನಾಯ್ಕ ಹುಡಗೋಡ, ಶಂಕರ ಹೆಗಡೆ, ನಿಲ್ಕೋಡ, ರಾಘು ನಾಯ್ಕ, ಶ್ರೀಪಾದ ಭಟ್ಟ, ಹಡಿನಬಾಳ ಇವರಿಂದ ಕವಿರತ್ನ ಕಾಳಿದಾಸ ಯಕ್ಷಗಾನ ಸಮರ್ಪಣೆ ಮಾಡಲಾಯಿತು.
ಸರ್ವೆಶ್ವರ ಮೂರೂರು ಗಜಾನನ ಭಂಡಾರಿ, ಶ್ರೀಧರ ಗೌಡ ಹಿಮ್ಮೇಳದಲ್ಲಿ ಸಹಕರಿಸಿದರು. ರಾಗಶ್ರೀ ಅಧ್ಯಕ್ಷ ವಿದ್ವಾನ ಎನ್.ಜಿ. ಹೆಗಡೆ, ಕ.ಸಾ.ಪ. ಕಾರ್ಯದರ್ಶಿ ಶಶಿಧರ ದೇವಾಡಿಗ ವಂದಿಸಿದರು. ಪ್ರಶಾಂತ ಹೆಗಡೆ ನಿರೂಪಿಸಿದರು.

 

*****************************************

ಚಿಟ್ಟಾಣಿಯವರ ಸಂಸ್ಕರಣೆಯಲ್ಲಿ ಅವರ ಹೆಸರು ಜೀವಂತವಾಗಿರುವಂತೆ ಚಿಟ್ಟಾಣಿಯವರ ಅಧ್ಯಯನ ಕೇಂದ್ರ ಸ್ಥಾಪಿಸಿದರು. ಚಿಟ್ಟಾಣಿಯವರ ಸಭಾಭವನ ನಿರ್ಮಾಣವಾಗಬೇಕು. ಚಿಟ್ಟಾಣಿಯವರ ಪ್ರತಿಮೆ ಹೊನ್ನಾವರದಲ್ಲಿ ಸ್ಥಾಪಿಸಬೇಕು. ಹೊನ್ನಾವರ ಕಾಲೇಜ ರಸ್ತೆಗೆ ಚಿಟ್ಟಾಣಿ ರಸ್ತೆ ಎಂದು ನಾಮಕರಣ ಮಾಡಬೇಕು. ಪಠ್ಯವಿಷಯದಲ್ಲಿ ಚಿಟ್ಟಾಣಿ ಚಿತ್ರಣ ಪಾಠ ಬರಬೇಕು. ಚಿಟ್ಟಾಣಿ ಮ್ಯೂಸಿಯಂ ತೆರೆಯಬೇಕು. ಚಿಟ್ಟಾಣಿ ಕುರಿತು ಪ್ರತಿವರ್ಷ ಒಂದು ಕಾರ್ಯಕ್ರಮ ನಡೆಸಿ ಅವರ ಹೆಸರಲ್ಲಿ ಪ್ರಶಸ್ತಿ ನೀಡಬೇಕು. ಚಿಟ್ಟಾಣಿ ಯಕ್ಷಗಾನ ಕಲಿಕಾ ಕೇಂದ್ರ ಸ್ಥಾಪನೆ ಮಾಡಬೇಕು. ಚಿಟ್ಟಾಣಿಯವರಿಗೆ ಮರಣೋತ್ತರ ಗೌರವ ಡಾಕ್ಟರೇಟ ನೀಡಬೇಕೆಂದು ಪದ್ಮಶ್ರೀ ಪ್ರಶಸ್ತಿ ತಂದು ಕೊಟ್ಟ ಅವರು ಸದಾ ಜನಮಾನಸದಲ್ಲಿ ಈ ರೀತಿಯಾಗಿ ಉಳಿಯುವಂತೆ ಮಾಡಲು ಸೇರಿದ ಗಣ್ಯರು ಅಭಿಮಾನಿಗಳು ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಅಭಿಪ್ರಾಯ ಪಟ್ಟರು

watermarked DSC 2384 watermarked DSC 2319 watermarked DSC 2268

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Honavar News Tagged With: ಕವಲಕ್ಕಿಯ, ಕುಮಾರಿ ಭಾಗ್ಯಲಕ್ಷ್ಮೀ ಭಟ್ಟ, ನಾದ-ನುಡಿ ಯಕ್ಷ ನಮನ, ಪದವಿ ಪೂರ್ವ, ಪದ್ಮಶ್ರೀ ಚಿಟ್ಟಾಣಿ, ರಾಗಶ್ರಿ ವಿದ್ಯಾರ್ಥಿನಿ, ವಿದ್ಯಾಲ, ಶ್ರೀ, ಸುಬ್ರಹ್ಮಣ್ಯ ಸಂಯುಕ್ತ, ಹಡಿನಬಾಳ ಇದರ ಆಶ್ರಯ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...