ಹೊನ್ನಾವರ: ಪಟ್ಟಣದ ಸಂತೆ ಮಾರ್ಕೆಟ್ ಹತ್ತಿರ ಹಾಗೂ ಗೇರುಸೊಪ್ಪಾ ಸರ್ಕಲ್ದಲ್ಲಿ ಈ ಹಿಂದೆ ಅಳವಡಿಸಿರುವ ಮಕ್ರ್ಯೂರಿ ಲೈಟ್ ಬಹಳ ದಿನಗಳ ಹಿಂದಿನಿಂದ ಹಾಳಾಗಿದ್ದು ಅವುಗಳನ್ನು ಕೂಡಲೇ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ ಇಲ್ಲಿಯ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಪ.ಪಂ.ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಂತೆ ಮಾರ್ಕೇಟ್ ಬಳಿ ಲೈಟ್ ಹಾಳಾಗಿರುವುದರಿಂದ ಸಂತೆಯಂದು ಮಹಿಳೆಯರು ಮುಸ್ಸಂಜೆ ಹೊತ್ತಿನಲ್ಲಿ ಸಂತೆಗೆ ಹೋಗಿ ಸಾಮಾನು ತರುವುದಕ್ಕೆ ತೊಂದರೆಯಾಗುತ್ತಿದೆ. ಅಲ್ಲದೇ ಸರ್ಕಲ್ನಲ್ಲಿ ಕತ್ತಲಲ್ಲಿ ಜನರ ಓಡಾಟಕ್ಕೂ ತುಂಬಾ ತೊಂದರೆಯಾಗಿದೆ. ಕೂಡಲೇ ಲೈಟ್ ಸರಿಪಡಿಸಿ ಜನರಿಗೆ ಆಗುವ ತೊಂದರೆಯನ್ನು ನಿವಾರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಸಂಘಟನೆಯ ತಾಲೂಕಾ ಅಧ್ಯಕ್ಷ ಪ್ರದೀಪ ಶೆಟ್ಟಿ, ಯುವ ಅಧ್ಯಕ್ಷ ಶ್ರೀರಾಮ್ ಮಡಿವಾಳ, ನಗರ ಘಟಕ ಅಧ್ಯಕ್ಷ ಅರುಣ್ ಭಂಡಾರಿ, ಉಪಾಧ್ಯಕ್ಷ ಸಚಿನ್ ನಾಯ್ಕ, ಕಾರ್ಯದರ್ಶಿ ಮಂಜುನಾಥ ಮಡಿವಾಳ, ವಿಕ್ರಮ್ ಯಾಜಿ, ರಾಜೇಶ ನಾಯ್ಕ, ಕೃಷ್ಣ ಹಾಗೂ ಕಾರ್ಯಕರ್ತರು ಇದ್ದರು.
Leave a Comment